ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ.19 : ಇತಿಹಾಸದಲ್ಲಿ ಈ ದಿನದ ವಿಶೇಷವೇನು?

By Mahesh
|
Google Oneindia Kannada News

ಬೆಂಗಳೂರು, ನ.19: ಗಣ್ಯರ ಹುಟ್ಟುಹಬ್ಬ, ಸಂಸ್ಮರಣಾ ದಿನ, ವಾರ್ಷಿಕೋತ್ಸವ, ಸರ್ಕಾರಿ ಘೋಷಣೆ, ವಿಜಯೋತ್ಸವ ದಿನ ಅಥವಾ ಅತ್ಯಂತ ಘೋರ ದುರಂತ ದಾಖಲಾದ ದಿನ ಹೀಗೆ ಪ್ರತಿ ದಿನಕ್ಕೂ ಅದರದ್ದೇ ಮಹತ್ವವಿರುತ್ತದೆ. ವಿಶ್ವದ ಇತಿಹಾಸದಲ್ಲಿ ನ.19ರಂದು ನಡೆದಿರುವ ಪ್ರಮುಖ ಘಟನಾವಳಿಗಳತ್ತ ಒಂದು ಸಿಂಹಾವಲೋಕನ ಇಲ್ಲಿದೆ. ಇತಿಹಾಸ ಪುಟಗಳನ್ನು ತಿರುವಿದಾಗ ಕಂಡ ಪ್ರಮುಖ ಅಂಶಗಳನ್ನು ನಿಮ್ಮತ್ತ ನೀಡುವ ಪ್ರಯತ್ನ ಒನ್ ಇಂಡಿಯಾ ತಂಡ ಮಾಡುತ್ತಿದೆ.

1863: ಅಮೆರಿಕದ ದಿವಂಗತ ಅಧ್ಯಕ್ಷ ಅಬ್ರಾಹಂ ಲಿಂಕನ್ ಅವರು ಗೆಟ್ಟಿಸ್ ಬರ್ಗ್ ನಲ್ಲಿ ಅಮೆರಿಕ ನಾಗರಿಕ ಸಮರದ ನಂತರ ಭಾಷಣ ಮಾಡಿದರು.

1897:
ಲಂಡನ್ ನಲ್ಲಿ ಭಾರಿ ಪ್ರಮಾಣ ಬೆಂಕಿ ಅನಾಹುತ ಸಂಭವಿಸಿತು.

1905:
ಸ್ಟೀಮರ್ ಹಿಲ್ಡಾ ಇಂಗ್ಲೀಷ್ ಕಡಲ್ಗಾಲುವೆಯಲ್ಲಿ ಮುಳುಗಡೆ 100 ಜನ ಸಾವು.

1915:
ಪ್ರಥಮ ಮಹಾಯುದ್ಧದಲ್ಲಿ ಕೇಂದ್ರಿಕೃತ ಶಕ್ತಿಗಳ ವಿರುದ್ಧ ಹೋರಾಟ ಮಾಡಲು ತಮ್ಮ ಪಂಗಡ ಸೇರುವಂತೆ ಚೀನಾವನ್ನು ಮೈತ್ರಿಕೂಟ ಒತ್ತಾಯಿಸಿತು. [ನ.18: ಇತಿಹಾಸದಲ್ಲಿ ಈ ದಿನದ ವಿಶೇಷ?]

Indira Gandhi


1917:
ಭಾರತದ ಮೂರನೇ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಅಲಹಾಬಾದಿನಲ್ಲಿ ಜನಸಿದರು.

1923:
ಸಂಗೀತಗಾರ ಸಲೀಲ್ ಚೌಧುರಿ ಪಶ್ಚಿಮ ಬಂಗಾಳದಲ್ಲಿ ಹುಟ್ಟಿದರು.

1926:
ಸೋವಿಯಟ್ ಯೂನಿಯನ್ ಪಾಲಿಟ್ ಬ್ಯೂರೋನಿಂದ ಲಿಯಾನ್ ಟ್ರೋಟ್ಸ್ಕೈ ಹೊರಹಾಕಲಾಯಿತು.

1928:
ಕುಸ್ತಿಪಟು ದಾರಾ ಸಿಂಗ್ ಅವರು ಜನಿಸಿದರು.

1951:
ಬಾಲಿವುಡ್ ನಟಿ ಜೀನತ್ ಅಮಾನ್ ಅವರು ಬಾಂಬೆ(ಈಗಿನ ಮುಂಬೈ)ಯಲ್ಲಿ ಜನಿಸಿದರು.

1969:

ಅಪೋಲೋ 12 ಚಂದ್ರನ ಅಂಗಳ ತಲುಪಿತು.

1975:ಬಾಲಿವುಡ್ ನಟಿ ಸುಷ್ಮಿತಾ ಸೇನ್ ಹೈದರಾಬಾದಿನಲ್ಲಿ ಜನಿಸಿದರು.

Nov 19: Actors Zeenat Aman, Sushmita Sen was born on this day

1985: ಯುಎಸ್ ಅಧ್ಯಕ್ಷರಾಗಿದ್ದ ರೋನಾಲ್ಡ್ ರೇಗನ್ ಹಾಗೂ ಯುಎಸ್ ಎಸ್ ಆರ್ ಮಿಖೈಲ್ ಗೋರ್ಬಚೇವ್ ಅವರು ಮೊಟ್ಟ ಮೊದಲ ಬಾರಿಗೆ ಭೇಟಿ ಮಾಡಿ ಮಾತುಕತೆ ನಡೆಸಿದರು.

1990: You Know Its True ಅಲ್ಬಂಗೆ ಸರಿಯಾದ ಕೊಡುಗೆ ನೀಡಿದ ಕಾರಣ ಮಿಲ್ಲಿ ವಾನಿಲ್ಲಿ ಅವರಿಗೆ ಸಿಕ್ಕಿರುವ ಗ್ರ್ಯಾಮಿ ಪ್ರಶಸ್ತಿಯನ್ನು ಕಸಿದುಕೊಳ್ಳಲಾಯಿತು.

1998: ಯುಎಸ್ ಜನಪ್ರತಿನಿಧಿಗಳಿಂದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆ

2010: ನ್ಯೂಜಿಲೆಂಡ್ ಗಣಿಯಲ್ಲಿ ದುರಂತ 29 ಸಾವು.

English summary
Today is Wednesday, November 19, 2014. Actors Zeenat Aman, Sushmita Sen was born on this day. What happened on this day in history? Oneindia takes a look at the past
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X