ಬೆಂಗಳೂರಲ್ಲಿ 27/65 'ಅಪೂರ್ವ'ವಾದ ಪ್ರೇಮವಿವಾಹ ಕಥೆ

Posted By:
Subscribe to Oneindia Kannada

ಬೆಂಗಳೂರು, ಜೂನ್ 03: ಆತ ಕಾಲೇಜಿನ ಸಂಸ್ಥಾಪಕ ವಯಸ್ಸು 65, ಆಕೆ ಅದೇ ಕಾಲೇಜಿನ ವಿದ್ಯಾರ್ಥಿನಿ, ವಯಸ್ಸು 27, ಇಬ್ಬರು ಮೆಚ್ಚಿ ಮದುವೆಯಾಗಿದ್ದಾರೆ. ಮದುವೆ ನೋಂದಣಿ ಮಾಡಲು ಶುಕ್ರವಾರ ಕಚೇರಿಗೆ ಬರುತ್ತಿದ್ದಂತೆ ಈ 'ಅಪೂರ್ವ' ಜೋಡಿ ವಿರುದ್ಧ ಆಕೆ ಪೋಷಕರು ತಿರುಗಿ ಬಿದ್ದಿದ್ದಾರೆ. ಇದು ಡಾ. ಆಕಾಶ್‌ ಹಾಗೂ ಕೃಪಾ ಪ್ರಜಾಪತಿ ಪ್ರೇಮ ವಿವಾಹ ವಿರೋಧದ ಕಥೆ. [ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ? ಏಕೆ?]

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ 'ಅಪೂರ್ವ' ಚಿತ್ರದಲ್ಲಿ 19/61 ಕಥೆ ನೋಡಿದ್ದ ಜನ ಸಾಮಾನ್ಯರಿಗೆ ಶುಭ ಶುಕ್ರವಾರದ ಮಧ್ಯಾಹ್ನದ ವೇಳೆ ಕನ್ನಡ ಸುದ್ದಿ ವಾಹಿನಿಗಳಲ್ಲಿ 27/65 ಪ್ರೇಮ್ ಕಹಾನಿ ನಿರಂತರವಾಗಿ ನೋಡುವ ಭಾಗ್ಯ ಸಿಕ್ಕಿದೆ.[ಹುಳಿಮಾವು ಬಳಿ ಪ್ರೇಮಿ ಅರುಣ್ ಆತ್ಮಹತ್ಯೆಗೂ ಮುನ್ನ ಹೇಳಿದ್ದೇನು?]

ಬೆಂಗಳೂರಿನ ಹೆಣ್ಣೂರು ಬಳಿಯಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಕ್ರಿಯೇಟಿವ್‌ ಸೆಂಟರ್‌ ಕಾಲೇಜು(NICC) ಸಂಸ್ಥಾಪಕ 65 ವರ್ಷದ ಡಾ. ಆಕಾಶ್‌ ಕುಮಾರ್‌ ಅವರು ತಮ್ಮ ಕಾಲೇಜಿನ 27 ವರ್ಷ ವಯಸ್ಸಿನ ಇಂಟಿರಿಯರ್ ಡಿಸೈನಿಂಗ್ ಕೋರ್ಸ್ ವಿದ್ಯಾರ್ಥಿನಿ ಕೃಪಾ.ಎಸ್‌ ಪ್ರಜಾಪತಿ ಅವರನ್ನು ಎರಡು ತಿಂಗಳ ಹಿಂದೆ ವಿವಾಹವಾಗಿದ್ದಾರೆ. ಡಾ.ಆಕಾಶ್‌ ಈಗಾಗಲೇ ಪತ್ನಿಗೆ ವಿವಾಹ ವಿಚ್ಛೇದನ ನೀಡಿದ್ದಾರೆ ಎಂದು ತಿಳಿದು ಬಂದಿದೆ. [ಸಣ್ಣಕಥೆ: ಮೀಸಲಾತಿಗೆ ಬಲಿಯಾದ ಒಂದು ಛೊಲೋ ಪ್ರೀತಿ!]

NICC founder Dr Akash Kumar young student Krupa Prajapathi Love Marriage Story

ರಾಜರಾಜೇಶ್ವರಿ ನಗರದಲ್ಲಿರುವ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ವಿವಾಹ ನೋಂದಣಿಗಾಗಿ ಬಂದಿದ್ದ ನವ ದಂಪತಿಗಳಿಗೆ ಕೃಪಾ ಅವರ ಪೋಷಕರಿಗೆ ಪ್ರತಿಭಟನೆ, ಹೊಡೆತದ ಸ್ವಾಗತ ಸಿಕ್ಕಿದೆ. ಪತಿ ಅಕಾಶ್ ರನ್ನು ಕೃಪಾ ರಕ್ಷಿಸಲು ಹೆಣಗಾಡಿದ ದೃಶ್ಯಗಳು ಪದೇ ಪದೇ ಸುದ್ದಿ ವಾಹಿನಿಗಳಲ್ಲಿ ಕಾಣಿಸುತ್ತದೆ ನೋಡುತ್ತಿರಿ.[ಭಗ್ನ ಪ್ರೇಮಿಗಳು ತಪ್ಪದೇ ನೋಡಬೇಕಾದ ವಿಡಿಯೋ]

ನನ್ನವರು ಯಾರು ಇಲ್ಲ: ನನ್ನ ಪಾಲಿಗೆ ಅಪ್ಪ-ಅಮ್ಮ, ಬಂಧು ಬಳಗ ಇಲ್ಲ, ನಾನು ಯಾವುದೇ ಆಮಿಷಕ್ಕೆ ಒಳಗಾಗಿ ವಿವಾಹವಾಗಿಲ್ಲ. ನಾನು 18 ವರ್ಷ ದಾಟಿದವಳಾಗಿದ್ದು, ನನ್ನ ಇಷ್ಟದಂತೆ ವಿವಾಹವಾಗಿದ್ದೇನೆ, ನನ್ನ ಪಾಲಿಗೆ ಪೋಷಕರು ಯಾರು ಇಲ್ಲ. ನಾಯಿಯೂ ಕೂಡ ಮನೆಯಲ್ಲಿ ಮಗುವನ್ನು ಸಾಕುತ್ತದೆ ಎಂದು ಖಾಸಗಿ ಮಾಧ್ಯಮದ ಜತೆ ಮಾತನಾಡುತ್ತಾ ಕೃಪಾ ಪ್ರತಿಕ್ರಿಯಿಸಿದ್ದಾರೆ.[ಮನಸು ಮನಸು ಒಂದಾದರೆ ಬಾಳೆ ಹೊನ್ನಿನ ತಾವರೆ!]

ಪೋಷಕರ ಅಳಲು: ಕೃಪಾಳಿಗೆ ಮರಳು ಮಾಡಿರುವ ಆಕಾಶ್‌, ಹಣದ ಆಮಿಷವೊಡ್ಡಿ ಮದುವೆಯಾಗಿದ್ದಾನೆ. ಈತ ಈ ಹಿಂದೆ ಕೂಡಾ ಅನೇಕ ಯುವತಿಯರಿಗೆ ಇದೇ ರೀತಿ ವಂಚಿಸಿದ್ದಾನೆ. ಇಬ್ಬರು ಮದುವೆ ವರ ಸಾಮ್ಯತೆ ಹೇಗೆ ಸಾಧ್ಯ. ನಮಗೆ ಗೊತ್ತಿಲ್ಲದ್ದಂತೆ ಮದುವೆಯಾಗಿದ್ದಾರೆ. ವಿವಾಹ ನೋಂದಣಿ ಮಾಡಿಸಲು ಮುಂದಾಗಿರುವ ಬಗ್ಗೆ ಸಂದೇಶ ಸಿಕ್ಕಿದ್ದರಿಂದ ಇಲ್ಲಿಗೆ ಕೂಡಲೇ ಬಂದಿದ್ದೇವೆ ಎಂದಿದ್ದಾರೆ. ಕಥೆ ಮುಂದುವರೆದಿದೆ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
NICC founder Dr Akash Kumar and young student Krupa Prajapathi Love Marriage Story got twist today(Jun 03) as couple faced protest from Krupa's parents who opposed the Marriage. Krupa and Dr Akash were on their way to register their marriage at Rajarajeshwari Nagar Sub registrar office, Bengaluru.
Please Wait while comments are loading...