ಬೆಂಗಳೂರಲ್ಲಿ ಬಾಡಿಗೆ ಬೈಕ್ ಪಡೆದು ನಗರ ಸುತ್ತಾಡಿ

Posted By:
Subscribe to Oneindia Kannada

ಬೆಂಗಳೂರು, ಮೇ 04 : ಬೆಂಗಳೂರು ನಗರದಲ್ಲಿ ಬಾಡಿಗೆ ಬೈಕ್ ಸೇವೆ ಆರಂಭವಾಗಿದೆ. ಪ್ರತಿ ಕಿ.ಮೀ.ಗೆ 6 ರೂ. ಪಾವತಿ ಮಾಡುವ ಮೂಲಕ ನೀವು ಗೇರ್ ರಹಿತ ಬೈಕ್‌ಗಳನ್ನು ಬಾಡಿಗೆಗೆ ಪಡೆದುಕೊಂಡು, ನಗರದಲ್ಲಿ ಸುತ್ತಾಡಬಹುದು.

ಮೈಸೂರು ಮತ್ತು ದೇಶದ ಹಲವು ನಗರಗಳಲ್ಲಿ ಬಾಡಿಗೆ ಬೈಕ್ ಸೇವೆ ಆರಂಭಿಸಿರುವ ರಾಯಲ್ ಬ್ರದರ್ಸ್ ಸಂಸ್ಥೆ ಬೆಂಗಳೂರಿನಲ್ಲಿಯೂ ಈ ಸೇವೆ ಆರಂಭಿಸಿದೆ. ರಾಯಲ್ ಬ್ರದರ್ಸ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಜನರು ಬಾಡಿಗೆ ಬೈಕ್‌ ಪಡೆಯಬಹುದಾಗಿದೆ. [ಅಪ್ಲಿಕೇಶನ್ ಇಲ್ಲಿ ಸಿಗುತ್ತದೆ]

bike

ರಾಯಲ್ ಬ್ರದರ್ಸ್ ಸಂಸ್ಥೆ ಪೆಟ್ರೋಲ್ ತುಂಬಿಸಿ, ಎರಡು ಹೆಲ್ಮೆಟ್ ನೀಡಿ ಗೇರು ರಹಿತ ಬೈಕ್‌ಗಳನ್ನು ಬಾಡಿಗೆಗೆ ನೀಡುತ್ತದೆ. ನಗರದ 25 ಸ್ಥಳಗಳಲ್ಲಿ ಬಾಡಿಗೆ ಬೈಕ್‌ಗಳು ಲಭ್ಯವಿದೆ. ನಿಮ್ಮ ಹತ್ತಿರದ ಸ್ಥಳದಲ್ಲಿ ಎಲ್ಲಿ ಸಿಗುತ್ತದೆ? ಎಂಬುದನ್ನು ನೀವು ಅಪ್ಲಿಕೇಶನ್ ಮೂಲಕ ತಿಳಿಯಬಹುದು. [ರಾಯಲ್ ಬ್ರದರ್ಸ್ ವೆಬ್ ಸೈಟ್]

6 ರೂ. ದರ : ಬೈಕ್ ಬಾಡಿಗೆ ಪಡೆಯಲು ಪ್ರತಿ ಕಿ.ಮೀ.ಗೆ 6 ರೂ. ದರ ಪಾವತಿ ಮಾಡಬೇಕು. ನೀವು ಬಾಡಿಗೆ ಪಡೆಯುವಾಗಲೇ ಎಷ್ಟು ಗಂಟೆ ಬೈಕ್ ಬೇಕು? ಎಂಬುದನ್ನು ತಿಳಿಸಬೇಕು. ಸಮಯ ಮತ್ತು ಸಂಚಾರ ಮಾಡಿದ ಕಿ.ಮೀ.ಗಳನ್ನು ಲೆಕ್ಕಹಾಕಿ ಬಾಡಿಗೆ ನಿಗದಿ ಮಾಡಲಾಗುತ್ತದೆ. [ಮೈಸೂರಲ್ಲಿ ಎನ್ ಫೀಲ್ಡ್ ಬೈಕ್ ಬಾಡಿಗೆಗೆ ಸಿಗುತ್ತೆ]

ಬಾಡಿಗೆ ಬೈಕ್ ಪಡೆಯಲು ಇಚ್ಛಿಸುವವರು ಚಾಲನಾ ಪರವಾನಿಗೆ, ಪಾನ್ ಕಾರ್ಡ್ ಅಥವ ಆಧಾರ್ ಕಾರ್ಡ್ ಪೋಟೋ ಕ್ಲಿಕ್ ಮಾಡಿ ಅಪ್ಲಿಕೇಶನ್‌ಗೆ ಡೌನ್‌ಲೋಡ್ ಮಾಡಬೇಕು. ಅದನ್ನು ಪರಿಶೀಲಿಸಿದ ಬಳಿಕ ಬೈಕ್ ಬಾಡಿಗೆ ನೀಡುವ ಕುರಿತು ತೀರ್ಮಾನಿಸಲಾಗುತ್ತದೆ. ಇದಕ್ಕೆ ಸುಮಾರು 5 ನಿಮಿಷದ ಸಮಯಾವಕಾಶ ಬೇಕಾಗುತ್ತದೆ. [ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸಿಗುತ್ತೆ ಬಾಡಿಗೆ ಬೈಕ್]

ಸದ್ಯ, ನಗರದ 25 ಸ್ಥಳಗಳಲ್ಲಿ ಬಾಡಿಗೆ ಬೈಕ್ ಸಿಗುತ್ತದೆ. ರಾಯಲ್ ಬ್ರದರ್ಸ್ ಅಪ್ಲಿಕೇಶನ್ ಡೌನ್‌ ಲೋಡ್ ಮಾಡಿಕೊಂಡು ಅದನ್ನು ಓಪನ್ ಮಾಡಿದ ಬಳಿಕ ನಿಮ್ಮ ಸಮೀಪದಲ್ಲಿ ಎಲ್ಲಿ ಬಾಡಿಗೆ ಬೈಕ್ ಲಭ್ಯವಿದೆ ಎಂಬ ಮಾಹಿತಿ ಸಿಗುತ್ತದೆ. ನಂತರ ಬೈಕ್ ಬುಕ್ ಮಾಡಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Royal Brothers launched bike rental service in Bengaluru city. To make use of the bike rental service people to pay Rs 6 per Km. You can get more detail on https://www.royalbrothers.in/ website.
Please Wait while comments are loading...