ಸಂಸದರಾಗಿ ಅನಂತ್ ಮಾಡಿದ ಸಾಧನೆ ಹಲವಾರು

ಸತತ ಐದು ಬಾರಿ ಸಂಸದರಾಗಿ ಅನಂತ್ ಕುಮಾರ್ ಅವರು ಚುನಾವಣೆಯಲ್ಲಿ ಮಾತ್ರ ಗೆದ್ದಿಲ್ಲ, ಬೆಂಗಳೂರಿನ ಜನರ ಹೃದಯವನ್ನೂ ಗೆದ್ದಿದ್ದಾರೆ. ಹದಿನೆಂಟು ವರ್ಷಗಳ ಕಾಲ ಅವರು ಮಾಡಿರುವ ಸಾಧನೆಗಳು, ಜನಪರ ಕಾಳಜಿಯ ಕಾರ್ಯಗಳು, ಸಂಸದರಾಗಿ ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿರುವ ರೀತಿ, ನಿಧಿಯನ್ನು ಸದುಪಯೋಗಪಡಿಸಿಕೊಂಡ ಪರಿ ಅವರಿಗೆ ಶ್ರೀರಕ್ಷೆಯಾಗಿದೆ ಎಂದರೂ ತಪ್ಪಲ್ಲ. ಸಾಧನೆಗಳು ಪಟ್ಟಿ ಮಾಡುತ್ತ ಸಾಗಿದರೆ ಒಂದೆರಡು ಪುಟ ಸಾಲುವುದಿಲ್ಲ. ಅವುಗಳಲ್ಲಿ ಕೆಲ ಪ್ರಮುಖ ಸಂಗತಿಗಳು ಇಲ್ಲಿವೆ.

* ಬೆಂಗಳೂರು ನಗರದ ಸಂಚಾರ ದಟ್ಟಣೆ ಸಮಸ್ಯೆಗಳಿಗೆ ಪರಿಹಾರವಾಗಿ ‘ನಮ್ಮ ಮೆಟ್ರೊ' ರೈಲು ಸೇವೆ ಯೋಜನೆಗೆ ಚಾಲನೆ. ಇದು ದೆಹಲಿ ನಂತರ ಕೈಗೆತ್ತಿಕೊಳ್ಳಲಾದ ಯೋಜನೆ. ಇವರ ಸತತ ಪ್ರಯತ್ನ ಹಾಗೂ ಒತ್ತಾಯಗಳ ಮೇರೆಗೆ ಬೆ೦ಗಳೂರಿನಿ೦ದ ಅಜ್ಮೀರ, ಜೋಧಪುರ. ಇತ್ಯಾದಿ ಸ್ಥಳಗಳಿಗೆ ನೇರ ರೈಲು ಸಂಪರ್ಕಗಳನ್ನು ಕಲ್ಪಿಸಲಾಗಿದೆ.

Many facets of Ananth Kumar, achievements as MP

* ರಾಷ್ಟ್ರೀಯ ಮೂಲಸೌಕರ್ಯ ಕಾರ್ಯಪಡೆ ಸದಸ್ಯರಾಗಿದ್ದ ಇವರು ಸುವರ್ಣ ಚತುಷ್ಪಥ ಹೆದ್ದಾರಿ ಯೋಜನೆಯಲ್ಲಿ ಬೆಂಗಳೂರು ಕೂಡ ಸೇರಿಕೊಳ್ಳುವಂತೆ, ಆ ಮೂಲಕ ಬೆಂಗಳೂರನ್ನು ಸುವರ್ಣ ಚತುಷ್ಪಥ ಹೆದ್ದಾರಿ ಜಾಲಕ್ಕೆ ಬೆಸೆಯುವಂತೆ ಕಾಳಜಿ ವಹಿಸಿದರು.

* ಕೇಂದ್ರ ವಿಮಾನಯಾನ ಸಚಿವರಾಗಿದ್ದಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ವಿಜ್ಞಾಪನಾ ಪತ್ರಕ್ಕೆ ಸಹಿ. ಅಂದು ಅನಂತ್ ಕಂಡಿದ್ದ ಕನಸು ಇಂದು ನನಸಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎ೦ಬ ಹೆಸರಿನಲ್ಲಿ ಸಾಕಾರಗೊಂಡಿದೆ.

* ಬೆಂಗಳೂರಿಗೆ ಕಾವೇರಿ ನದಿಯಿಂದ 2, 3 ಮತ್ತು 4ನೇ ಹಂತದ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಚಾಲನೆ. ಮೊದಲು ಸರಬರಾಜಾಗುತ್ತಿದ್ದ 900 ಎಮ್ ಎಲ್ ಡಿ ನೀರಿಗೆ ಹೆಚ್ಚುವರಿಯಾಗಿ 500 ಎಮ್ ಎಲ್ ಡಿ ನೀರು ಪೂರೈಕೆ ಸಾಧ್ಯವಾಗಿದೆ.

* 2003ರಿ೦ದ ಬೆಂಗಳೂರಿನ 72,000ಕ್ಕಿ೦ತಲೂ ಅಧಿಕ ಮಕ್ಕಳಿಗೆ ಪ್ರತಿದಿನ ಪೌಷ್ಟಿಕ ಹಾಗೂ ಆರೋಗ್ಯಕರವಾದ ಮಧ್ಯಾಹ್ನದ ಬಿಸಿಯೂಟವನ್ನು ಒದಗಿಸುತ್ತಿದ್ದಾರೆ. ಈ ಪೌಷ್ಟಿಕ ಆಹಾರ ಯೋಜನೆಯಿ೦ದಾಗಿ ಸಾವಿರಾರು ಮಕ್ಕಳ ಜೀವನದಲ್ಲಿ ಗಮನಾರ್ಹ ಸುಧಾರಣೆಗಳಾಗಿದೆ.

* ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 18 ಆರೋಗ್ಯ ಕೇ೦ದ್ರಗಳಲ್ಲಿ ಭಾರತದಲ್ಲಿಯೇ ಪ್ರಥಮ ಬಾರಿಗೆ ಇ-ಕ್ಷೇಮಾ ಎ೦ಬ ಆರೋಗ್ಯ ತಪಾಸಣಾ ಘಟಕಗಳನ್ನು ಸ್ಥಾಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+