ಐಟಿ ಉದ್ಯೋಗಿಗಳ ಟ್ರೇಡ್ ಯೂನಿಯನ್ ಸ್ಥಾಪನೆಗೆ ಒಪ್ಪಿಗೆ

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 9 : ಮಹತ್ವದ ಬೆಳವಣಿಗೆಯೊಂದರಲ್ಲಿ ಐಟಿ ಉದ್ಯೋಗಿಗಳ ಟ್ರೇಡ್ ಯೂನಿಯನ್ ರಚನೆ ಮಾಡಲು ಒಪ್ಪಿಗೆ ಸಿಕ್ಕಿದೆ. ದೇಶದಲ್ಲಿ ಸುಮಾರು 4 ಮಿಲಿಯನ್ ಐಟಿ ಉದ್ಯೋಗಿಗಳಿದ್ದು, ಬೆಂಗಳೂರಿನಲ್ಲಿ 1.5 ಮಿಲಿಯನ್ ಜನರಿದ್ದಾರೆ.

ಲೇಬರ್ ಕಮೀಷನ್ ಐಟಿ ಉದ್ಯೋಗಿಗಳ ಟ್ರೇಡ್ ಯೂನಿಯನ್ ಸ್ಥಾಪನೆ ಮಾಡಲು ಒಪ್ಪಿಗೆ ನೀಡಿದೆ. 1926ರ ಟ್ರೇಡ್ ಯೂನಿಯನ್ ಕಾಯ್ದೆ, ಕರ್ನಾಟಕ ಟ್ರೇಡರ್ಸ್ ಯೂನಿಯನ್ ನಿಯಮ 1958ರ ಅಡಿ ಯೂನಿಯನ್ ಸ್ಥಾಪನೆಯಾಗಲಿದೆ.

ಐಟಿ, ಬಿಪಿಒ ಉದ್ಯೋಗಿಗಳಿಗೆ ಸಂಕಷ್ಟ ಪರ್ವ, ಲಕ್ಷಾಂತರ ಕೆಲಸಕ್ಕೆ ಕುತ್ತು

IT employees get go ahead to set up trade union in Karnataka

Karnataka State IT/ITES Employees Union (KITU) ಸ್ಥಾಪನೆ ಮಾಡಲು ಪ್ರಮಾಣ ಪತ್ರವನ್ನು ನೀಡಲಾಗಿದೆ. ಐಟಿ ಮತ್ತು ಐಟಿಗೆ ಸಂಬಂಧಿಸಿದ 4 ಮಿಲಿಯನ್ ಉದ್ಯೋಗಿಗಳು ದೇಶದಲ್ಲಿದ್ದಾರೆ. ಇವರಲ್ಲಿ ಬೆಂಗಳೂರಿನಲ್ಲಿ 1.5 ಮಿಲಿಯನ್ ಉದ್ಯೋಗಿಗಳಿದ್ದಾರೆ.

ಐಟಿ ವಲಯದಲ್ಲಿ ಕೆಲಸದಿಂದ ತೆಗೆಯೋದು ಯಾರನ್ನು, ಯಾಕೆ?

ಪ್ರಸ್ತುತ ಐಟಿ ಉದ್ಯೋಗಿಗಳ ಟ್ರೇಡ್ ಯೂನಿಯನ್ ಸ್ಥಾಪನೆ ಅಗತ್ಯವಿತ್ತು. ಹೆಚ್ಚಿನ ಕೆಲಸ, ಮಾಹಿತಿ ನೀಡದೆ ಕೆಲಸದಿಂದ ತೆಗೆಯುವುದು ಮುಂತಾದವುಗಳ ಬಗ್ಗೆ ಉದ್ಯೋಗಿಗಳು ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a major development, the labour commission of Karnataka has certified the formation of a trade union for IT employees. Out of the 4 million employees in the IT and IT-enabled service sectors across the country, Bengaluru alone has 1.5 million of them.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ