ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಯಾನ್ಸರ್ ಜಯಿಸಿದವರಿಗಾಗಿ ಬೆಂಗಳೂರಲ್ಲಿ ಸಂಗೀತ ಸಂಜೆ

By Prasad
|
Google Oneindia Kannada News

ಬೆಂಗಳೂರು, ಜೂ. 03 : ಕ್ಯಾನ್ಸರ್ ಮಾರಕ ಅಂತ ಎಲ್ಲರಿಗೂ ಗೊತ್ತು, ಆದರೆ ಮಾರಣಾಂತಿಕವಲ್ಲ. ಅದನ್ನು ಸತತ ಹೋರಾಟದಿಂದ ಜಯಿಸಿದವರಿದ್ದಾರೆ. ಅಂಥ ಹೋರಾಟಗಾರರ ಜೀವನಗಾಥೆ ತಿಳಿಯಲು, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರಲ್ಲಿ ಜೀವನೋತ್ಸಾಹ ತುಂಬಲು ಭಾರತೀಯ ಕ್ಯಾನ್ಸರ್ ಸೊಸೈಟಿ 'ಬೀಟ್ ಕ್ಯಾನ್ಸರ್ ಮ್ಯೂಸಿಕಲ್ ನೈಟ್' ಕಾರ್ಯಕ್ರಮವನ್ನು ಜೂ.5ರಂದು ಆಯೋಜಿಸಿದೆ.

ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಶುಕ್ರವಾರ ಸಂಜೆ ಖ್ಯಾತ ಸಂಗೀತಪಟುಗಳಾದ ಶಿವಮಣಿ, ರಾಹುಲ್ ಶರ್ಮಾ, ಸ್ಟೀಫನ್ ದೇವಸ್ಸಿ, ಯು ರಾಜೇಶ್, ಗಿರಿಧರ್ ಉಡುಪ, ಭಾರದ್ವಾಜ್ ಸಟ್ಟವಳ್ಳಿ ಮತ್ತು ಸತ್ಯಜಿತ್ ತಲ್ವಾಲ್ಕರ್ ಮುಂತಾದವರು ಸಂಗೀತದ ಮುಖಾಂತರ ಕ್ಯಾನ್ಸರ್ ಹೋರಾಟಕ್ಕೆ ಶಕ್ತಿ ತುಂಬಲಿದ್ದಾರೆ. ಶುಕ್ರವಾರ ಸಂಜೆ 6.30ಕ್ಕೆ ಸಂಗೀತ ಸಂಜೆ ಏರ್ಪಡಿಸಲಾಗಿದೆ.

ಪ್ರತಿವರ್ಷ ಜೂನ್ ತಿಂಗಳ ಮೊದಲ ಭಾನುವಾರವನ್ನು ಕ್ಯಾನ್ಸರ್ ಜಯಿಸಿದವರ ದಿನವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಆ ದಿನ ಕ್ಯಾನ್ಸರ್ ಜಯಿಸಿದವರೆಲ್ಲ ಒಂದೆಡೆ ಕೂಡಿ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ, ಬಳಲುತ್ತಿರುವವರಿಗೂ ಉತ್ತೇಜನ ನೀಡುತ್ತಾರೆ, ಕ್ಯಾನ್ಸರ್ ದುಷ್ಪರಿಣಾಮದ ಬಗ್ಗೆಯೂ ಜಾಗೃತಿ ಮೂಡಿಸುತ್ತಾರೆ. [ಮಾರಣಾಂತಿಕ ಕ್ಯಾನ್ಸರ್ ಮೆಟ್ಟಿನಿಂತ ಹಿರಿಯಜ್ಜನ ಯಶೋಗಾಥೆ]

Indian Cancer Society to honor late Youtube Head Venkat Panchapakesan in Bengaluru

ಇತ್ತೀಚೆಗೆ ಜಿಐ (Gastro-Intestinal) ಕ್ಯಾನ್ಸರಿಗೆ ಬಲಿಯಾದ ಯಾಹೂ ಮಾಜಿ ಸಿಇಓ ಮತ್ತು ಗೂಗಲ್‌ನ ಯುಟ್ಯೂಬ್ ಮುಖ್ಯಸ್ಥರಾಗಿರುವ ವೆಂಕಟ್ ಪಂಚಪಕೇಸನ್ ಅವರ ನೆನಪಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವೆಂಕಟ್ ಅಗತ್ಯವಿದ್ದವರಿಗೆ ಹಣಕಾಸು ಸಹಾಯಕ್ಕೆ ಯಾವಾಗಲೂ ತುದಿಗಾಲ ಮೇಲೆ ನಿಂತಿರುತ್ತಿದ್ದರು. ಕರ್ನಾಟಕದಲ್ಲಿರುವ ಕ್ಯಾನ್ಸರ್ ಪೀಡಿತ ಬಡವರಿಗೆ ಆರ್ಥಿಕ ಸಹಾಯ ಒದಗಿಸಲೆಂದು ಭಾರತೀಯ ಕ್ಯಾನ್ಸರ್ ಸೊಸೈಟಿ ಚಂದಾ ಸಂಗ್ರಹಿಸುತ್ತಿದೆ.

ಭಾರತೀಯ ಕ್ಯಾನ್ಸರ್ ಸೊಸೈಟಿ, ಕರ್ನಾಟಕ ಚೇರ್ಮನ್ ಆಗಿರುವ ಕಿಶೋರ್ ರಾವ್ ಅವರು ಹೇಳುವುದೇನೆಂದರೆ, "ಭಾರತದಲ್ಲಿ ಹೃದಯಾಘಾತದ ನಂತರ ಕ್ಯಾನ್ಸರ್ ಅತೀ ಹೆಚ್ಚು ಸಾವಿಗೆ ಕಾರಣವಾಗಿದೆ. 2000ರಲ್ಲಿ ಏಳನೇ ಸ್ಥಾನದಲ್ಲಿದ್ದ ಕ್ಯಾನ್ಸರ್ ಈಗ ಎರಡನೇ ಸ್ಥಾನಕ್ಕೆ ಜಿಗಿದಿರುವುದು ಕಳವಳಕಾರಿ. ಒಂದನೇ ಮೂರರಷ್ಟು ಸಾಮಾನ್ಯ ಕ್ಯಾನ್ಸರ್ ರೋಗವನ್ನು ನಿಯಂತ್ರಿಸಲು ಸಾಧ್ಯ."

Indian Cancer Society to honor late Youtube Head Venkat Panchapakesan in Bengaluru

ಜಾಗತಿಕವಾಗಿ ಗಮನಿಸಿದರೆ ಭಾರತದಲ್ಲಿ ಸ್ತನ, ಸೆರ್ವಿಕಲ್, ಪುಪ್ಪುಸ, ಜನನೇಂದ್ರಿಯ ಮತ್ತು ಬಾಯಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಮೊದಲೇ ಗುರುತಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡರೆ ಈ ರೋಗವನ್ನು ನಿಯಂತ್ರಿಸಲು ಮತ್ತು ಸಾವು ಮುಂದೆ ತಳ್ಳಲು ಸಾಧ್ಯ. ಇತ್ತೀಚಿನ ವರ್ಷಗಳಲ್ಲಿ, ಸತತ ಸಂಶೋಧನೆ, ಜಾಗೃತಿ, ಮೊದಲೇ ಪತ್ತೆ ಹಚ್ಚಲು ಸಾಧ್ಯವಾಗಿದ್ದರಿಂದ ಸ್ತನ ಮತ್ತು ಮೌಖಿಕ ಕ್ಯಾನ್ಸರಿಂದಾಗುವ ಮರಣ ಪ್ರಮಾಣ ಸಾಕಷ್ಟು ತಗ್ಗಿದೆ.

ಬುಕ್ ಮೈ ಶೋನಲ್ಲಿ ದಾನಿಗಳ ಪಾಸುಗಳು ಲಭ್ಯವಿವೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 99459 99974. [ಇಂಡಿಯನ್ ಕ್ಯಾನ್ಸರ್ ಸೊಸೈಟಿ ಫೇಸ್ ಬುಕ್ ಪುಟ]

English summary
Indian Cancer Society is hosting a Beat Cancer Musical Night on Friday, June 5, 2015 to celebrate the spirit of those who have survived cancer and to inspire all those who have been recently diagnosed with cancer. It will also honor late Youtube Head Venkat Panchapakesan, who died recently to GI Cancer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X