ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೈಮ್ಸ್ ಸಮೀಕ್ಷೆ ವಿಶ್ವದ ಟಾಪ್ 100 ವಿವಿಗಳಲ್ಲಿ ಬೆಂಗಳೂರಿನ ಐಐಎಸ್ಸಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 02: ವಿಶ್ವದ ಟಾಪ್ 10 ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ಸಿ) ಮತ್ತೊಮ್ಮೆ ಈ ಹಿರಿಮೆಗೆ ಪಾತ್ರವಾಗಿದೆ.

ಟೈಮ್ಸ್‌ ಹೈಯರ್ ಎಜುಕೇಶನ್ ಅವರು ನೆಡಸಿದ್ದ ವರ್ಲ್ಡ್‌ ರೆಪ್ಯುಟೇಶನ್ Ranking 2018ರ ಜೂನ್ ತಿಂಗಳಲ್ಲಿ ನಡೆಸಿದ್ದ ಸಮೀಕ್ಷೆಯಲ್ಲೂ ಟಾಪ್ 100ರೊಳಗೆ ಐಐಎಸ್ಸಿ ಸ್ಥಾನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಶ್ವದ ಟಾಪ್ 100 ವಿವಿ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್‌ಸಿವಿಶ್ವದ ಟಾಪ್ 100 ವಿವಿ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್‌ಸಿ

ಈಗ ಮತ್ತೊಮ್ಮೆ ನಡೆಸಲಾದ ಸಮೀಕ್ಷೆಯಲ್ಲಿ ಐಐಎಸ್ಸಿ 95ನೇ ಸ್ಥಾನದಲ್ಲಿದ್ದರೆ, ಐಐಟಿ ಬಾಂಬೆ 151-175ರ ರೇಂಜ್ ನಲ್ಲಿ ಸ್ಥಾನ ಪಡೆದುಕೊಂಡಿದೆ.

IISc, Bengaluru

ಭಾರತದ ಅಗ್ರಗಣ್ಯ ವಿದ್ಯಾಸಂಸ್ಥೆಗಳ ಪೈಕಿ ಐಐಎಸ್ಸಿ ಬೆಂಗಳೂರು ಅಗ್ರಸ್ಥಾನದಲ್ಲಿ ಮುಂದುವರೆದಿದ್ದರೆ, ಐಐಎಸ್ಸಿ ಬಾಂಬೆ, ಐಐಟಿ ರೂರ್ಕಿ ಹಾಗೂ ಐಐಟಿ ದೆಹಲಿ ನಂತರದ ಸ್ಥಾನದಲ್ಲಿವೆ.

ವಿಶ್ವಮಟ್ಟದ ವಿಶ್ವವಿದ್ಯಾಲಯಗಳ ಟಾಪ್ 10 ಶ್ರೇಯಾಂಕ(ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ)
1. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಯುನೈಟೆಡ್ ಕಿಂಗ್ಡಮ್.
2. ಸ್ಟಾನ್ ಫರ್ಡ್ ವಿಶ್ವವಿದ್ಯಾಲಯ, ಯುನೈಟೆಡ್ ಸ್ಟೇಟ್ಸ್.
3. ಹಾರ್ವರ್ಡ್ ವಿಶ್ವವಿದ್ಯಾಲಯ, ಯುನೈಟೆಡ್ ಸ್ಟೇಟ್ಸ್.
4. ಕ್ಯಾಲಿಫೋರ್ನಿಯಾ ತಾಂತ್ರಿಕ ವಿದ್ಯಾಲಯ, ಯುಎಸ್ಎ
5. ಮೆಚಾಸುಸೆಟ್ಸ್ ತಾಂತ್ರಿಕ ವಿದ್ಯಾಲಯ, ಯುಎಸ್ಎ
6. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಯುನೈಟೆಡ್ ಕಿಂಗ್ಡಮ್
7. ಪ್ರಿನ್ಸ್ ಟನ್ ವಿಶ್ವವಿದ್ಯಾಲಯ, ಯುಎಸ್ಎ
8. ಸಿಂಗಪುರ ರಾಷ್ಟ್ರೀಯ ವಿಶ್ವವಿದ್ಯಾಲಯ, ಸಿಂಗಪುರ
9. ಇಟಿಎಚ್ ಜ್ಯೂರಿಚ್, ಸ್ವಿಟ್ಜರ್ಲೆಂಡ್
10. ಜಾರ್ಜಿಯಾ ತಾಂತ್ರಿಕ ವಿದ್ಯಾಲಯ, ಯುಎಸ್ಎ.

English summary
IISc Bangalore is ranked in top 100 of the 2019 Times Higher Education World University Rankings table for engineering and technology subjects. In the recently released subject rankings, IIT Bombay found its place in the band of 151-175 for the same category.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X