ಶಶಿಕಲಾ ನಟರಾಜನ್ ಗೆ ಜೈಲಿನಲ್ಲಿ ಏನೇನು ಸಿಗುತ್ತಿದೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮಾರ್ಚ್ 02: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿ ಎನಿಸಿಕೊಂಡು ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಶಶಿಕಲಾ ನಟರಾಜನ್ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಅಧಿಕಾರಿಗಳು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಶಶಿಕಲಾ ಅವರಿಗೆ ಸಿಗುತ್ತಿರುವ ಸೌಲಭ್ಯಗಳ ವಿವರ ಇಲ್ಲಿದೆ...

ಶಶಿಕಲಾ ಅವರು ಪರಪ್ಪನ ಅಗ್ರಹಾರ ಜೈಲಿಗೆ ಬರುವುದಕ್ಕೂ ಮುಂಚಿತವಾಗಿಯೇ ಅನೇಕ ಬೇಡಿಕೆಗಳಿರುವ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಿದ್ದರು. ವೆಸ್ಟರ್ನ್ ಕಮೋಡ್, ನಡೆದಾಡಲು ಸ್ಥಳಾವಕಾಶ, 24 ಗಂಟೆ ನೀರಿನ ಸೌಲಭ್ಯ ಹೀಗೆ ಪಟ್ಟಿ ಬೆಳೆದಿತ್ತು.[ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ಗಳಿಸಲಿರುವ ಹಣವೆಷ್ಟು?]

Here is a full list of facilities what Sasikala enjoys in jail

ಆದರೆ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಜೆ ಜಯಲಲಿತಾ ಅವರಿದ್ದ ಬರಾಕ್ ನಲ್ಲೇ ಕೊಠಡಿ ಪಡೆದ ಶಶಿಕಲಾ ಅವರಿಗೆ ಕೇವಲ ಟಿವಿ ಸೆಟ್ ಮಾತ್ರ ನೀಡಲಾಗಿದೆ ಎಂದು ಜೈಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. [10 ಕೋಟಿ ರು ದಂಡ ಕಟ್ಟದಿದ್ದರೆ ಶಶಿಕಲಾಗೆ ಶಿಕ್ಷೆ ಹೆಚ್ಚಳ]

ಚೆನ್ನೈ ಮೂಲದ ವಕೀಲ ಎಂ.ಪಿ ರಾಜವೇಲಾಯುಥ ಅವರು ಆರ್ ಟಿ ಐ ಅರ್ಜಿ ಸಲ್ಲಿಸಿ, ಶಶಿಕಲಾ ಅವರಿಗೆ ನೀಡಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಕೋರಿದ್ದರು. ಇದಕ್ಕೆ ಉತ್ತರಿಸಿರುವ ಕಾರಾಗೃಹ ಇಲಾಖೆ ನಿರ್ದೇಶಕರು, ಯಾವುದೇ ವಿಶೇಷ ಸೌಲಭ್ಯ ನೀಡಿಲ್ಲ ಎಂದಿದ್ದಾರೆ.[ಶಶಿಕಲಾ ಹಾಗೂ ಕುಟುಂಬದ ಮೇಲಿರುವ ಹಗರಣಗಳು]

ಶಶಿಕಲಾಗೆ ನೀಡಿರುವ ಸೌಲಭ್ಯಗಳು
* ಒಂದು ಟೆಲಿವಿಷನ್ ಸೆಟ್
* ಪ್ರತ್ಯೇಕ ಬಾತ್ ರೂಮ್ ಇಲ್ಲ
* ಬಿಸಿ ನೀರು ಕಾಯಿಸಲು ಹೀಟರ್ ಇಲ್ಲ
* ಏರ್ ಕಂಡೀಷನರ್ ಇಲ್ಲ
* ಮಲಗಲು ಮಂಚ, ಹಾಸಿಗೆ, ದಿಂಬು ನೀಡಿಲ್ಲ

ಟಿವಿ ಸೆಟ್ ನೀಡಿದ್ದು ಏಕೆ?: ಎಐಎಡಿಎಂಕೆ ಮುಖ್ಯಸ್ಥೆಯಾಗಿರುವ ಕಾರಣ ತಮಿಳು ಸುದ್ದಿವಾಹಿನಿ ಪ್ರಸಾರ ವೀಕ್ಷಿಸಲು ಅನುಮತಿ ನೀಡಲಾಗಿದೆ. ಫೆಬ್ರವರಿ 20ರಂದು ಸಂಬಂಧಿ ದಿನಕರನ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿತ್ತು. 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು ಎಂದು ಅಧಿಕಾರಿಗಳು ವಿವರಿಸಿದರು. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sasikala Natarajan is in jail serving her sentence after being convicted in the disproportionate assets case. There has been a lot of talk about the kind of lifestyle she is leading in the Bengaluru central jail situated in Parappana Agrahara.
Please Wait while comments are loading...