ಉಕ್ಕಿನ ಸೇತುವೆ ಬಗ್ಗೆ ಫೇಸ್ಬುಕ್ ಸ್ಟೇಟಸ್ ಎಸ್ಐ ಇನ್ ಟ್ರಬಲ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 15: ಕಪ್ಪು ಹಣದ ಹೋರಾಟ, ನೋಟು ಬ್ಯಾನ್ ಸುದ್ದಿ ಹೊರ ಬಂದ ಮೇಲೆ ಉಕ್ಕಿನ ಸೇತುವೆ ಯೋಜನೆ ಕೊಚ್ಚಿ ಹೋಯಿತು? ಎಂಬರ್ಥದಲ್ಲಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಎಸ್ ಐ ಯೊಬ್ಬರಿಗೆ ಶಿಸ್ತುಕ್ರಮದ ಭೀತಿ ಎದುರಾಗಿದೆ.

ಉಕ್ಕಿನ ಸೇತುವೆ ಯೋಜನೆಯ ವಿರುದ್ಧದ ಹೋರಾಟ ಕುರಿತಂತೆ ಕಲಾಸಿಪಾಳ್ಯ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಾಘವೇಂದ್ರ ರಾಜಣ್ಣ ಅವರ ಮೇಲೆ ಶಿಸ್ತು ಕ್ರಮದ ಕತ್ತಿ ತೂಗುತ್ತಿದೆ.

Has Bengaluru steel bridge disappeared due to demonetisation? A police inspector asks

'ಎಲ್ಲಿಗೆ ಬಂತು ಬಿಡಿಎಯ ಉದ್ದೇಶಿತ ಉಕ್ಕಿನ ಸೇತುವೆ ಕತೆ? ಮೋದಿ ಹೊಡೆತಕ್ಕೆ. 'ಸ್ಟೀಲ್ ಬ್ರಿಡ್ಜ್' ಮಾಯ? ಹೇಗಿದೆ ಗುನ್ನ ಹೋರಾಟಗಾರರೇ ಹೇಳಿಕೊಳ್ಳಿ. ಇದು ನಿಮ್ಮ ಹೋರಾಟಕ್ಕೆ ಸಂದ ಜಯ,' ಎಂದು ರಾಘವೇಂದ್ರ ಅವರು ನವೆಂಬರ್ 12ರ ರಾತ್ರಿ 8.37ಕ್ಕೆ ಸ್ಟೇಟಸ್ ಹಾಕಿದ್ದರು. ಉಕ್ಕಿನ ಸೇತುವೆ ಯೋಜನೆಗೆ ಕಪ್ಪು ಹಣ ಹರಿಯುವಿಕೆ ಆಗುವುದನ್ನು ಪ್ರಧಾನಿ ತಡೆದಿದ್ದಾರೆ ಎಂದು ಅವರು ಪರೋಕ್ಷವಾಗಿ ಹೇಳಿದ್ದರು.

ಎಸ್ ಐ ರಾಘವೇಂದ್ರ ಅವರ ಸ್ಟೇಟಸ್ ಬಗ್ಗೆ ವಿವರಣೆ ಕೋರಿ ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಅವರು ನೋಟಿಸ್ ನೀಡಿದ್ದಾರೆ. ಇನ್ನೊಂದೆಡೆ 'ಇಲಾಖೆಯ ಚೌಕಟ್ಟು ಮೀರಿರುವುದು ಸಾಬೀತಾದರೆ, ರಾಘವೇಂದ್ರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು' ಎಂದು ಗೃಹಸಚಿವ ಜಿ.ಪರಮೇಶ್ವರ್ ಗುಡುಗಿದ್ದಾರೆ. ಸರ್ಕಾರಿ ಹುದ್ದೆಯಲ್ಲಿ ಕರ್ತವ್ಯ ನಿರತರಾಗಿದ್ದು, ಸರ್ಕಾರದ ಯೋಜನೆ ಬಗ್ಗೆ ಈ ರೀತಿ ಬರೆದಿರುವುದಕ್ಕೆ ಕಾಂಗ್ರೆಸ್ಸಿಗರಿಂದ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An inspector of police in Karnataka took a dig at the state government prompting the home minister to seek an inquiry. Inspector Raghavendra Rajanna posted on his Facebook a post questioning the proposed Steel Bridge.
Please Wait while comments are loading...