ಪಿಎಫ್‌ ವಿಚಾರದಲ್ಲಿ ನೌಕರರು ಬೀದಿಗಿಳಿದಿದ್ದು ಇದೇ ಮೊದಲಲ್ಲ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಏಪ್ರಿಲ್ 20 : ಕೇಂದ್ರ ಸರ್ಕಾರದ ಪಿಎಫ್ ನೀತಿಯ ವಿರುದ್ಧ ಗಾರ್ಮೆಂಟ್ಸ್ ನೌಕರರು ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಲ್ಲಿ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ನೌಕರರು ಪಿಎಫ್ ವಿರುದ್ಧ ಹೋರಾಟ ಮಾಡುತ್ತಿರುವುದು ಇದೇ ಮೊದಲಲ್ಲ.

2001ರಲ್ಲಿಯೂ ಬೆಂಗಳೂರಿನಲ್ಲಿ ನೌಕರರು ಬೃಹತ್ ಪ್ರತಿಭಟನೆ ನಡೆಸಿದ್ದರು. ಆಗ ಗಾರ್ಮೆಂಟ್ಸ್‌ನಲ್ಲಿ ಕೆಲಸ ಕಳೆದುಕೊಂಡ ನೌಕರರಿಗೆ ಪಿಎಫ್ ಅರ್ಜಿಯನ್ನು ನೀಡಲು ನಿರಾಕರಿಸಿದ ಪಿಎಫ್ ಕಚೇರಿಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆದಿತ್ತು. [ಪಿಎಫ್ ವಿಥ್ ಡ್ರಾ ನಿಯಮಕ್ಕೆ ಜುಲೈ 31ರ ತನಕ ಬ್ರೇಕ್]

pf protest in bengaluru

ಗಾರ್ಮೆಂಟ್ಸ್ ನೌಕರರು 2001ರಲ್ಲಿ ಪ್ರತಿಭಟನೆ ನಡೆಸಿದಾಗ ತುಮಕೂರು ರಸ್ತೆಯಲ್ಲಿ 4 ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಎರಡು ದಿನಗಳ ಕಾಲ ನೌಕರರು ಪ್ರತಿಭಟನೆ ನಡೆಸಿದ್ದರು. ಆದರೆ, ಆಗ ಯಾವುದೇ ಗಲಭೆ ನಡೆದಿರಲಿಲ್ಲ. [ಬೆಂಗಳೂರು : ಪ್ರತಿಭಟನೆ ಗಲಭೆ ಆಗಿದ್ದು ಹೇಗೆ?]

ಒನ್ ಇಂಡಿಯಾ ಜೊತೆ ಮಾತನಾಡಿದ ಗಾರ್ಮೆಂಟ್ಸ್ ನೌಕರರು ನಾವು ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಗಲಭೆ ಮಾಡುವುದು ನಮ್ಮ ಉದ್ದೇಶವಲ್ಲ. ನಾವು ಶಾಂತಿಯುತವಾಗಿಯೇ ಪ್ರತಿಭಟನೆ ಮಾಡಿದ್ದೇವೆ ಎಂದರು. [ಭವಿಷ್ಯ ನಿಧಿ ನೀತಿ ಬದಲಾವಣೆ, ಸರ್ಕಾರದ ಕೈ ಸುಟ್ಟಿದ್ದೇಕೆ?]

2001ರಲ್ಲಿಯೂ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೆವು. ಆಗ ಗಾರ್ಮೆಂಟ್ಸ್ ಕಾರ್ಖನೆ ಮಾಲೀಕರ ವಿರುದ್ಧವೂ ನಾವು ಆಕ್ರೋಶ ವ್ಯಕ್ತಪಡಿಸಿದ್ದೆವು. ಕೆಲವು ಮಾಲೀಕರು ನೌಕರರನ್ನು ಇದ್ದಕ್ಕಿದ್ದಂತೆ ಕೆಲಸದಿಂದ ಕಿತ್ತು ಹಾಕಿದ್ದರು ಅದರ ವಿರುದ್ಧವೂ ಹೋರಾಟ ಮಾಡಲಾಗಿತ್ತು ಎಂದು ನೆನೆಪು ಮಾಡಿಕೊಳ್ಳುತ್ತಾರೆ ನೌಕರರು. [ಪಿಟಿಐ ಚಿತ್ರ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
For the garment factory workers, the Provident Fund issue has always spelt trouble. Thousands of garment factory workers took to the streets in protest against the new rules which barred withdrawal of their EPF. Garment factory workers had staged a similar protest in 2001.
Please Wait while comments are loading...