ಬೆಂಗಳೂರಿನ ಬಸ್ ನಿಲ್ದಾಣ, ಮಾರುಕಟ್ಟೆಯಲ್ಲಿ ವೈಫೈ ಸೌಲಭ್ಯ

Posted By: Gururaj
Subscribe to Oneindia Kannada
   ಬೆಂಗಳೂರಿನ ಬಸ್ ನಿಲ್ದಾಣ, ಮಾರುಕಟ್ಟೆಯಲ್ಲಿ ವೈಫೈ ಸೌಲಭ್ಯ | Oneindia Kannada

   ಬೆಂಗಳೂರು, ನವೆಂಬರ್ 29 : ಬೆಂಗಳೂರು ನಗರದ ರೈಲು, ಬಸ್ ನಿಲ್ದಾಣ ಮತ್ತು ಮಾರುಕಟ್ಟೆಗಳಲ್ಲಿ ಶೀಘ್ರವೇ ಉಚಿತ ವೈ-ಫೈ ಸೌಲಭ್ಯ ಸಿಗಲಿದೆ. ವೈ-ಫೈ ಸೌಲಭ್ಯ ಒದಗಿಸುವಂತೆ ಬಿಬಿಎಂಪಿ ಮೇಯರ್ ಆದೇಶ ನೀಡಿದ್ದಾರೆ.

   ಮಂಗಳವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಗರದಲ್ಲಿ ವೈ-ಫೈ ಸೌಲಭ್ಯ ಒದಗಿಸುವ ಕುರಿತು ಚರ್ಚೆ ನಡೆದಿದೆ. 'ಐಟಿ ರಾಜಧಾನಿ ಎನಿಸಿರುವ ಬೆಂಗಳೂರು ನಗರದಲ್ಲಿಯೇ ವೈ-ಫೈ ಸೌಲಭ್ಯ ಕಲ್ಪಿಸಿಲ್ಲ' ಎಂದು ಮೇಯರ್ ಸಂಪತ್ ರಾಜ್ ಹೇಳಿದರು.

   ರಾಜ್ಯದ 2,500 ಗ್ರಾಮಪಂಚಾಯ್ತಿಗಳಿಗೆ ವೈಫೈ ಸೌಲಭ್ಯ

   Free Wi-Fi in Bengaluru market and bus stand soon

   'ರಾಮನಗರ, ಚನ್ನಪಟ್ಟಣದಲ್ಲಿ ವೈ-ಫೈ ಸೌಲಭ್ಯವಿದೆ. ಬೆಂಗಳೂರು ನಗರದ ಬಸ್, ರೈಲ್ವೆ ನಿಲ್ದಾಣ ಮತ್ತು ಮಾರುಕಟ್ಟೆಗಳಲ್ಲಿ ಸೌಲಭ್ಯವನ್ನು ಕಲ್ಪಿಸಿ' ಎಂದು ಮೇಯರ್ ಪಾಲಿಕೆ ಆಯುಕ್ತರಿಗೆ ಆದೇಶಿಸಿದರು.

   ಸಾರ್ವಜನಿಕ ಸ್ಥಳದ ಪುಕ್ಕಟೆ ವೈಫೈ ಬಳಸದಂತೆ ಎಚ್ಚರಿಕೆ

   ಸಭೆಯಲ್ಲಿ ಉಪಸ್ಥಿತರಿದ್ದ ಮಾಹಿತಿ ತಂತ್ರಜ್ಞಾನ ಸಲಹೆಗಾರ ಟಿ.ಶೇಷಾದ್ರಿ ಅವರು, 'ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ವೈ-ಫೈ ಸೌಲಭ್ಯವಿದೆ. ಅಧಿಕಾರಿಗಳ ಬಳಕೆಗೆ ಮಾತ್ರ ಸೀಮಿತವಾಗಿದೆ. ನಗರದೆಲ್ಲೆಡೆ ಸೌಲಭ್ಯ ಕಲ್ಪಿಸಲು ಇ-ಆಡಳಿತ ಇಲಾಖೆ ಜೊತೆ ಚರ್ಚೆ ನಡೆಸಲಾಗುತ್ತದೆ' ಎಂದರು.

   ಜನರು ದೂರು ನೀಡಲು ಅಪ್ಲಿಕೇಷನ್ : ಜನರು ರಸ್ತೆ ಗುಂಡಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ದೂರು ನೀಡಲು ಫಿಕ್ಸ್ ಮೈ ಆಪ್ ಎಂಬ ಅಪ್ಲಿಕೇಶನ್‌ ಅನ್ನು ಬಿಬಿಎಂಪಿ ಸಿದ್ಧಗೊಳಿಸಿದೆ. ಡಿಸೆಂಬರ್ 1ರಂದು ಈ ಅಪ್ಲಿಕೇಶನ್ ಬಿಡುಗಡೆ ಮಾಡಲಾಗುತ್ತದೆ.

   ಜನರು ರಸ್ತೆ ಗುಂಡಿ ಫೋಟೋ ತೆಗೆದು ಅಪ್ ಲೋಡ್ ಮಾಡಿದ ತಕ್ಷಣ ಅದು ಸಂಬಂಧಪಟ್ಟ ಇಂಜಿನಿಯರ್‌ಗಳಿಗೆ ತಲುಪುತ್ತದೆ. ದುರಸ್ತಿ ಮಾಡಿದ ಬಳಿಕ ಫೋಟೋವನ್ನು ಜನರಿಗೆ ವಾಪಸ್ ಕಳಿಸಲಾಗುತ್ತದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The Bruhat Bengaluru Mahanagara Palike (BBMP) Mayor S.Sampathraj said Free Wi-Fi will be provide in Bengaluru market and bus stand soon.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ