ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೋಷಕರೇ ಎಚ್ಚರ... ಬೆಂಗಳೂರಿನಲ್ಲಿವೆ 1,266 ಅನಧಿಕೃತ ಶಾಲೆಗಳು

By Kiran B Hegde
|
Google Oneindia Kannada News

ಬೆಂಗಳೂರು, ಡಿ. 24: ನಗರದಲ್ಲಿ ಅನಧಿಕೃತ ಶಾಲೆಗಳ ಸಂಖ್ಯೆ ಅತಿಯಾಗಿ ಹೆಚ್ಚುತ್ತಿದೆ ಎಂಬ ಆರೋಪ ಅನೇಕ ದಿನಗಳಿಂದ ಕೇಳಿಬಂದಿತ್ತು. ಅದೀಗ ನಿಜವಾಗಿದೆ. ಬೆಂಗಳೂರಿನಲ್ಲಿರುವ ಅನಧಿಕೃತ ಶಾಲೆಗಳು ಎಷ್ಟು ಗೊತ್ತೇ..? ಬರೋಬ್ಬರಿ 1,266.

ಇದು ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯೇ ನೀಡಿರುವ ವರದಿ. ಒಂದೆರಡು ದಿನಗಳ ಅವಧಿಯಲ್ಲಿಯೇ ಈ ಎಲ್ಲ ಶಾಲೆಗಳಿಗೂ ನೋಟಿಸ್ ಜಾರಿ ಮಾಡಬೇಕು. 10 ದಿನಗಳಲ್ಲಿ ಉತ್ತರವನ್ನೂ ಪಡೆಯಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಉಪ ನಿರ್ದೇಶಕರಿಗೆ ಇಲಾಖೆ ಸೂಚಿಸಿದೆ. [ಅನಧಿಕೃತ ಶಾಲೆಗಳ ವಿರುದ್ಧ ಕ್ರಿಮಿನಲ್ ಕೇಸ್]

ಅಲ್ಲದೆ, ಇಲಾಖೆ ಪಟ್ಟಿ ಮಾಡಿರುವ ಎಲ್ಲ ಅನಧಿಕೃತ ಶಾಲೆಗಳ ಹೆಸರನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

sch

"ನೋಟಿಸ್‌ಗೆ ಶಾಲೆಗಳು ನೀಡುವ ಉತ್ತರದ ಆಧಾರದ ಮೇಲೆ ಅವುಗಳ ಮಾನ್ಯತೆ ಮುಂದುವರಿಸುವ ಅಥವಾ ರದ್ದುಪಡಿಸುವ ಕುರಿತು ನಿರ್ಧರಿಸಲಾಗುವುದು" ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮದ್ ಮೊಹ್ಸಿನ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಶಾಲೆಗಳು ಗಲ್ಲಿ ಗಲ್ಲಿಗಳಲ್ಲಿ ತಲೆ ಎತ್ತುತ್ತಿದ್ದರೂ ಯಾರೂ ವಿರೋಧಿಸಿರಲಿಲ್ಲ. ಶಾಲೆಯಲ್ಲಿ ಸೀಟ್‌ ಸಿಗುವುದೇ ಕಷ್ಟವಾಗಿರುವ ಈ ಸಂದರ್ಭದಲ್ಲಿ ಮಕ್ಕಳು ಕಲಿತರೆ ಸಾಕು ಎಂಬ ಧಾವಂತದಲ್ಲಿ ಪಾಲಕರಿದ್ದರು. ಅವಕಾಶ ಸಿಕ್ಕ ಶಾಲೆಯಲ್ಲಿ ಪೂರ್ವಾಲೋಚನೆ ನಡೆಸದೆ ಮಕ್ಕಳನ್ನು ಸೇರಿಸಿದ್ದರು. [ಅಕ್ರಮ ಶಾಲೆಗಳ ಮೇಲೆ ತೂಗುಗತ್ತಿ]

ಆದರೆ, ನಗರದ ವಿವಿಧ ಶಾಲೆಗಳಲ್ಲಿ ನಡೆದ ಲೈಂಗಿಕ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಇಲಾಖಾ ತನಿಖೆ ನಡೆಸಿದಾಗ ಅಕ್ರಮ ಶಾಲೆಗಳ ಬಣ್ಣ ಬಯಲಾಗಿತ್ತು.

ಎಲ್ಲಿ, ಎಷ್ಟು ಅನಧಿಕೃತ ಶಾಲೆ? :

  • ಬೆಂಗಳೂರು ದಕ್ಷಿಣದಲ್ಲಿ ಒಟ್ಟು 798 ಶಾಲೆಗಳಿಗೆ ಅನುಮತಿ ಇಲ್ಲ. ಇವುಗಳಲ್ಲಿ 435 ಪೂರ್ವ ಪ್ರಾಥಮಿಕ, 44 ಸಿಬಿಎಸ್ಇ, ಐಸಿಎಸ್ಇ
  • ಬೆಂಗಳೂರು ಉತ್ತರದಲ್ಲಿ 468 ಅನಧಿಕೃತ ಶಾಲೆಗಳಿವೆ. ಇವುಗಳಲ್ಲಿ 243 ಪೂರ್ವ ಪ್ರಾಥಮಿಕ, 93 ಸಿಬಿಎಸ್ಇ, ಐಸಿಎಸ್ಇ
English summary
Department of Public Education of Karnataka has listed 1,266 schools as unauthorized in Bengaluru. And department has directed BEOs and DDPIs to give notice to listed schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X