ಒತ್ತುವರಿ ತೆರವಿಗೆ ತೊಂದರೆ ಇಲ್ಲ ಎಂದ ದರ್ಶನ್

By: ಎಚ್ ಎಸ್ ಶ್ರೇಯಸ್
Subscribe to Oneindia Kannada

ಬೆಂಗಳೂರು, ಆಗಸ್ಟ್ , 19: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮಾಜಿ ಸಚಿವ, ಕಾಂಗ್ರೆಸ್ ಪ್ರಭಾವಿ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ಆಸ್ತಿಯೂ ರಾಜಕಾಲುವೆ ಒತ್ತುವರಿ ತೆರವಿನಡಿ ಸಿಕ್ಕಿದೆ.

ಸಾಮಾನ್ಯ ಜನರು, ಮಧ್ಯಮ ವರ್ಗದವರ ಮನೆಯನ್ನು ಒಡೆದು ಹಾಕುತ್ತಿದ್ದ ಬಿಬಿಂಪಿಯ ಜೆಸಿಬಿಗಳು ಇದೀಗ ಪ್ರಭಾವಿಗಳ ಮನೆ ಕಡೆ ಮುಖ ಮಾಡಿವೆ.[ಮನೆ ಕಳೆದುಕೊಂಡವರಿಂದ ಬಿಬಿಎಂಪಿಗೆ ಪ್ರಶ್ನೆಗಳ ಸುರಿಮಳೆ]

ರಾಜರಾಜೇಶ್ವರಿ ನಗರದ ದರ್ಶನ್ ಮನೆ ಒತ್ತುವರಿ ಸ್ಕ್ಯಾನರ್ ಅಡಿಯಲ್ಲಿ ಬಂದಿದೆ. ಜಂಟಿ ಆಯುಕ್ತ ಬಿ ವೀರಭದ್ರಪ್ಪ ಈ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಕಂದಾಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ದರ್ಶನ್ ರ 'ತೂಗುದೀಪ ನಿವಾಸ' ಮತ್ತು ಶಾಮನೂರು ಶಿವಶಂಕರಪ್ಪ ಅವರ ಎಸ್ ಎಸ್ ಆಸ್ಪತ್ರೆ ಸಹ ಇದೀಗ ತೆರವಿನ ಭಯ ಎದುರಿಸುತ್ತಿದೆ.

ಮತ್ತೆ ಸರ್ವೇ

ಮತ್ತೆ ಸರ್ವೇ

ಕಂದಾಯ ಇಲಾಖೆ ಆಧಾರಲ್ಲಿ ನೀಡಿರುವ ಮಾಹಿತಿ ಆಧಾರದಲ್ಲಿ ಇನ್ನೊಮ್ಮೆ ಸರ್ವೆ ಮಾಡಿ ಅಂತಿಮ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವೀರಭದ್ರಪ್ಪ ತಿಳಿಸಿದ್ದಾರೆ.

ಡಿಕೆಶಿ ಪಟ್ಟಿಯಿಂದ ಹೊರಕ್ಕೆ

ಡಿಕೆಶಿ ಪಟ್ಟಿಯಿಂದ ಹೊರಕ್ಕೆ

ಒತ್ತುವರಿಯಡಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರಿಗೆ ಸೇರಿದ ಆಸ್ತಿಯೂ ಬರುತ್ತದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಹೊಸ ಪಟ್ಟಿಯಲ್ಲಿ ಡಿಕೆಶಿ ಆಸ್ತಿ ಇಲ್ಲ.

ದಿನಕರ್ ತೂಗುದೀಪ್ ಏನಂತಾರೆ?

ದಿನಕರ್ ತೂಗುದೀಪ್ ಏನಂತಾರೆ?

ಮಾಧ್ಯಮಗಳ ಮೂಲಕವೇ ನಾವು ಒತ್ತುವರಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡಿದ್ದೇವೆ. ಈ ಬಗ್ಗೆ ಬಿಬಿಎಂಪಿಯಿಂದಲೂ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ದಿನಕರ್ ತೂಗುದೀಪ್ ತಿಳಿಸಿದ್ದಾರೆ.

ಅವರ ಕೆಲಸ ಅವರು ಮಾಡಲಿ

ಅವರ ಕೆಲಸ ಅವರು ಮಾಡಲಿ

ದರ್ಶನ್ ಸದ್ಯ ಸಿನಿಮಾದ ಚಿತ್ರೀಕರಣವೊಂದರಲ್ಲಿ ತೊಡಗಿಕೊಂಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಯಾವ ತೀರ್ಮಾನ ತೆಗೆದುಕೊಂಡರೂ ನಾವು ಬದ್ಧರಾಗಿದ್ದೇವೆ ಎಂದು ದರ್ಶನ್ ಹೇಳಿದ್ದಾರೆ ಎಂದು ದಿನಕರ್ ತಿಳಿಸಿದ್ದಾರೆ.

ಶಾಮನೂರಿಗೆ ಕಂಟಕ

ಶಾಮನೂರಿಗೆ ಕಂಟಕ

ದಾವಣಗೆರೆ ದಕ್ಷಿಣದ ಎಂ ಎಲ್ ಎ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ ರಾಜರಾಜೇಶ್ವರಿ ನಗರದಲ್ಲಿ ಇರುವ ಎಸ್ ಎಸ್ ಆಸ್ಪತ್ರೆ ಸಹ ಒತ್ತುವರಿಯಾದ ಜಾಗದಲ್ಲಿ ನಿರ್ಮಾಣವಾಗಿದೆ ಎಂಬ ಸಂಗತಿ ಸರ್ವೆಯಲ್ಲಿ ಬಹಿರಂಗವಾಗಿದೆ.

ಬಿಡಿಎ ನೀಡಿದ್ದು ಅಕ್ರಮವೇ?

ಬಿಡಿಎ ನೀಡಿದ್ದು ಅಕ್ರಮವೇ?

30 ವರ್ಷಗಳ ಹಿಂದೆ ಆಸ್ಪತ್ರೆಗೆಂದು 2.34 ಎಕರೆ ಜಾಗವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ)ಪಡೆದುಕೊಂಡಿದ್ದೆವು. ಅದು ಈಗ ಹೇಗೆ ಅಕ್ರಮವಾಗುತ್ತದೆ ಎಂದು ಶಿವಶಂಕರಪ್ಪ ಪ್ರಶ್ನೆ ಮಾಡುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After Bruhat Bengaluru Mahanagara Palike (BBMP) razed shops and houses of ordinary citizens, it is now slowly turning its sights onto the properties of bigwigs in the state capital.The BBMP's Rajarajeshwarinagar Zone Joint Commissioner B. Veerabadrappa said he had sent a letter to the Revenue Department seeking superimposed maps of location of Kannada film actor Darshan Thoogudipa's house and former minister Shamanur Shivakumar's SS hospital.
Please Wait while comments are loading...