ಬೆಂಗಳೂರು ಕೆರೆ ತೊಳೆಯುವುದಕ್ಕೆ ಕೇಂದ್ರದಿಂದ 800 ಕೋಟಿ ರು.

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 20: ದೇಶಕ್ಕೆ ಮಾದರಿಯಾಗುವಂತಿದ್ದ ಬೆಂಗಳೂರಿನ ಕೆರೆಗಳು ಈಗ ಮಾಲಿನ್ಯಮಯವಾಗಿವೆ. ಕೆರೆಗಳ ಹೂಳೆತ್ತಲು, ಕೆರೆಗಳ ಸೌಂದರ್ಯ ಮರುಕಳಿಸುವಂತೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಬೆಂಗಳೂರು ಕೆರೆಗಳ ಸಂರಕ್ಷಣೆ, ಸ್ವಚ್ಛತೆ, ಅಭಿವೃದ್ಧಿಗಾಗಿ 800 ಕೋಟಿ ರು ಅನುದಾನ ನೀಡಲಾಗುತ್ತಿದೆ ಎಂದು ಸಚಿವ ಪ್ರಕಾಶ್ ಘೋಷಿಸಿದ್ದಾರೆ.[ಬೆಳ್ಳಂದೂರು ಕೆರೆ ಶುದ್ಧಿಗೆ ನಮ್ಮ 'ಬೆಂಗಳೂರು ಫೌಂಡೇಷನ್ ' ಸೂತ್ರ]

ಪರಿಸರ ಸಂರಕ್ಷಣಾ ಕಾಯ್ದೆ ಸೆಕ್ಷನ್ 5 ಹಾಗೂ 18ರ ಅಡಿಯಲ್ಲಿ ಕ್ರಮ ಜರುಗಿಸಲು ಸೂಚಿಸಲಾಗಿದೆ. ಅಮೃತ್ ಯೋಜನೆ ಅಡಿಯಲ್ಲಿ 800 ಕೋಟಿ ರು ಮಂಜೂರು ಮಾಡಲಾಗಿದೆ ಎಂದಿದ್ದಾರೆ.

Centre extends Rs. 800 Cr assistance for cleaning lakes in Bengaluru: Javadekar

'ನಾನು ಈ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುತ್ತೇನೆ. ಮೇ ತಿಂಗಳ ಮೊದಲ ವಾರದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಕೆರೆಗಳನ್ನು ಮಾಲಿನ್ಯ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಕೆರೆಗಳಿಗೆ ಚರಂಡಿ ನೀರು ಬಿಡುತ್ತಿರುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗುವುದು ಎಂದು ಪ್ರಕಾಶ್ ಹೇಳಿದರು.[ಬೆಂಗಳೂರು ಬೆಳ್ಳಂದೂರು ಕೆರೆ ಬಿಳಿನೊರೆಯ ರಹಸ್ಯ ಲೀಕ್]

ಬೆಳ್ಳಂದೂರು,ವರ್ತೂರು, ಹಲಸೂರು ಕೆರೆ ಮಾಲಿನ್ಯ, ಪರಿಸರ ನಾಶದ ಬಗ್ಗೆ ವರದಿಗಳನ್ನು ಪಡೆಯಲಾಗಿದೆ. ಕೆರೆಗಳ ಸುತ್ತಾ ಮುತ್ತಾ ಪರಿಸರ ವೈವಿಧ್ಯತೆಯನ್ನು ಕಾಪಾಡಲು ಸೂಚಿಸಲಾಗಿದೆ. ಮಾಲಿನ್ಯಕ್ಕೆ ಕಾರಣವಾಗುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಪ್ರಕಾಶ್ ಹೇಳಿದರು.

ಸಚಿವ ಪ್ರಕಾಶ್ ಅವರ ಮಾತುಗಳನ್ನು ವಿಡಿಯೋದಲ್ಲಿ ನೋಡಿ:

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Environment Minister Prakash Javadekar said ministry has issued directions under section 5 and section 18 of Environment Protection Act on pollution of lakes in Bengaluru. The Minister said that the Centre has extended an assistance of Rs. 800 crore under AMRUT scheme for cleaning up the lakes in Bengaluru.
Please Wait while comments are loading...