ಉದ್ಯಮಿ ಮನೇಲಿ ಹಣ ದೋಚಲು ಮಾಜಿ ಡಿವೈಎಸ್ಪಿ ಸ್ಕೆಚ್?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 30: ಬೆಂಗಳೂರಿನ ಉದ್ಯಮಿ ಸತೀಶ್ ಎಂಬುವವರ ಮನೆಗೆ ಸಿಸಿಬಿ,ಐಬಿ ಅಧಿಕಾರಿಗಳ ಸೋಗಿನಲ್ಲಿ ಇದೇ ನವೆಂಬರ್ 24 ರಂದು ರು 83 ಲಕ್ಷ ದೋಚಲಾಗಿತ್ತು. ಆ ತಂಡದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ನರೋನ್ಹಾ ಅವರಿದ್ದರು ಎಂಬ ಗುಮಾನಿಯಲ್ಲಿ ವ್ಯಕ್ತವಾಗಿದ್ದು ಜೆಪಿನಗರದ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಈ ಹಗಲು ದರೋಡೆ ನಿಧಾನವಾಗಿ ಬೆಳಕಿಗೆ ಬಂದಿದ್ದು ಸಿಸಿಬಿ ಐಬಿ ಅಧಿಕಾರಿಗಳ ಸೋಗಿನಲ್ಲಿ ಬೆಂಗಳೂರಿನ ಉದ್ಯಮಿ ಸತೀಶ್ ಅವರ ಮನೆಯಲ್ಲಿ ರು 83 ಲಕ್ಷ ಹಳೇ ನೋಟುಗಳನ್ನು ವಶ ದೋಚಿಕೊಂಡು ಹೋಗಿದ್ದರು.[3 ಲಕ್ಷ ಹೊಸ ನೋಟು ಸೇರಿ 13 ಲಕ್ಷ ವಶ: ಇಬ್ಬರ ಬಂಧನ]

Ccb officer's like ride: arrest the dysp naronha

ಉದ್ಯಮಿ ಸತೀಶ್ ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿದಾಗ ಅವರು ನಕಲಿ ಐಬಿ ಅದಿಕಾರಿಗಳೆಂದು ಕಂಡು ಬಂದಿದೆ. ಈ ಬಗ್ಗೆ ಜೆಪಿ ನಗರದ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. 83 ಲಕ್ಷ ಹಳೇ ನೋಟುಗಳಾಗಿದ್ದು ಅದನ್ನು ಬದಲಿಸಿ ತಮ್ಮ ನೌಕರರಿಗೆ ಕೊಡಲು ತಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ.[ಕ್ಯಾಂಟರ್ ನಲ್ಲಿ ಸಾಗಿಸುತ್ತಿದ್ದ ಒಂದು ಕೋಟಿ ರುಪಾಯಿ ದರೋಡೆ!]

ನಿವೃತ್ತ ಡಿವೈಎಸ್ ಪಿ ನರೋನ್ಹಾ ಅವರ ಕೈವಾಡವಿದೆ, ಅವರು ಈ ಕಳ್ಳತನ ಪ್ರಕರಣದಲ್ಲಿ ಅವರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು ಜೆಪಿ ನಗರದ ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
CCB,IB officer like other people raid the businessman Satish house on 24th November in bengaluru. Satish fil the case about thief in bengaluru JP Nagar Police Station. Police suspicious to arrest the retire DYSP Naronha to start the enquirer.
Please Wait while comments are loading...