{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/bengaluru/boon-for-burn-patients-karnataka-gets-its-first-skin-bank-at-victoria-hospital-095362.html" }, "headline": "ಚರ್ಮದಾನ ಅಭಿಯಾನಕ್ಕೆ ನಟ ಪ್ರೇಮ್ ರಿಂದ ಚಾಲನೆ", "url":"https://kannada.oneindia.com/news/bengaluru/boon-for-burn-patients-karnataka-gets-its-first-skin-bank-at-victoria-hospital-095362.html", "image": { "@type": "ImageObject", "url": "http://kannada.oneindia.com/img/1200x60x675/2015/07/16-1437031814-nenapirali-prem.jpg", "width": "1200", "height":"675" }, "thumbnailUrl":"http://kannada.oneindia.com/img/128x50/2015/07/16-1437031814-nenapirali-prem.jpg", "datePublished": "2015-07-16 13:04:12", "dateModified": "2015-07-16T13:04:12+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Bangalore", "description": "In a major step in the field of medical science, Karnataka on Wednesday, July 15, got its first skin bank, on the occasion of World Plastic Surgery Day. Actor Prem has launched the skin bank and urged his fans to donote for a cause.", "keywords": "Boon for burn patients, Karnataka gets its first skin bank, Victoria hospital bengaluru, ಚರ್ಮದಾನ ಅಭಿಯಾನಕ್ಕೆ ನಟ ಪ್ರೇಮ್ ರಿಂದ ಚಾಲನೆ", "articleBody":"ಬೆಂಗಳೂರು, ಜುಲೈ 16: ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನದ ಅಂಗವಾಗಿ ನಗರದ ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮದಾನ ದ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನಟ ನೆನಪಿರಲಿ ಪ್ರೇಮ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಲ್ಲಿಯವರೆಗೆ ನೀವು ನೇತ್ರದಾನ, ರಕ್ತದಾನ, ಅಂಗಾಂಗದಾನ ನಿಧಿಗಳ ಬಗ್ಗೆ ಗೊತ್ತಿತ್ತು, ಈಗ ಚರ್ಮದಾನದ ಮಹತ್ವ ಕೂಡಾ ತಿಳಿಯಿತು ಎಂದರು.ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚರ್ಮದಾನ ನಿಧಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿದ್ದು, ಜುಲೈ 15ರ ರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿ ದಿನದಂದು ಚರ್ಮದಾನ ನಿಧಿಗೆ ಚಾಲನೆ ಸಿಕ್ಕಿದೆ. ಚರ್ಮದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಪ್ರೇಮ್ ಹೇಳಿದರು.ಈ ಯೋಜನೆಯ ಮುಖ್ಯಾಂಶಗಳು* ಚರ್ಮವನ್ನು ಹೇಗೆ ದಾನ ಮಾಡುವುದು, ದಾನ ಮಾಡಿದ ಚರ್ಮವನ್ನು ಯಾರಿಗೆ ಉಪಯೋಗಿಸಲಾಗುತ್ತದೆ ಇನ್ನಿತರ ವಿಷಯಗಳ ಕುರಿತು ಜಾಗೃತಿ ಕಾರ್ಯಕ್ರಮಗಳಲ್ಲಿ ತಿಳಿಸಲಾಗುತ್ತದೆ.* ನಿಧಿಯ ಸ್ಥಾಪನೆಗೆ ವಿಕ್ಟೋರಿಯಾ ಆಸ್ಪತ್ರೆಯೊಂದಿಗೆ ಬೆಂಗಳೂರು ವೈದ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ರೋಟರಿ ಕ್ಲಬ್, ಆಶೀರ್ವಾದ್ ಸೈಸ್ ಸಂಸ್ಥೆಗಳು ಕೈಜೋಡಿಸಿವೆ.* ಮುಂಬೈನ ರಾಷ್ಟ್ರೀಯ ಸುಟ್ಟಗಾಯ ಗಳ ಕೇಂದ್ರ ಮತ್ತು ಚೆನ್ನೈನ ರೈಟ್ಸ್ ಆಸ್ಪತ್ರೆ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಯಾರಿಗೆ ಬಳಕೆ?: ಮಿಕ್ಕ ಎಲ್ಲಾ ದಾನಗಳಂತೆ ಚರ್ಮ ದಾನಕ್ಕೂ ವ್ಯಕ್ತಿಯ ಹಾಗೂ ಅವರ ಕುಟುಂಬದ ಪೂರ್ವಾನುಮತಿ ಹಾಗೂ ಸಹಕಾರ ಅತ್ಯಗತ್ಯ. ದಾನ ಪಡೆದ ಚರ್ಮವನ್ನು ಆಸಿಡ್ ದಾಳಿ, ಆಕಸ್ಮಿಕ ಬೆಂಕಿ ಘಟನೆಗಳಲ್ಲಿ ಚರ್ಮ ಸುಟ್ಟು ಕುರೂಪಗೊಂಡಿರುವ ವ್ಯಕ್ತಿಗಳಿಗೆ ಹಾಗೂ ರಸ್ತೆ ಅಪಘಾತಗಳಲ್ಲಿ ಚರ್ಮ ವಿರೂಪಗೊಂಡವರಿಗೆ ಬಳಸಲಾಗುತ್ತದೆ. ಈ ಮೂಲಕ ಅವರಿಗೆ ಹೊಸ ರೂಪ ಹಾಗೂ ಹೊಸ ಚೈತನ್ಯದೊಂದಿಗೆ ಜೀವನ ನಡೆಸಲು ಸಾಧ್ಯವಾಗುತ್ತದೆ.ವಿಕ್ಟೋರಿಯಾ ಆಸ್ಪತ್ರೆ: 22 ಜೂನ್ 1987ರಲ್ಲಿ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರಿಂದ ಸ್ಥಾಪನೆಯಾದ ಆಸ್ಪತ್ರೆಗೆ ರಾಣಿ ವಿಕ್ಟೋರಿಯಾ ಅವರ ಹೆಸರಿನಲ್ಲಿ 1900ರಲ್ಲಿ ಲಾರ್ಡ್ ಕರ್ಜನ್ ಅವರು ಅಧಿಕೃತವಾಗಿ ಚಾಲನೆ ನೀಡಿದರು. ದೇಶದ ಎರಡನೇ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದೆನಿಸಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಏಕಕಾಲಕ್ಕೆ 1,000ಕ್ಕೂ ಅಧಿಕ ರೋಗಿಗಳ ತ್ವರಿತ ಉಪಚಾರ ಸಾಧ್ಯವಿದೆ. ಬೆಂಗಳೂರು ಮೆಡಿಕಲ್ ಕಾಲೇಜಿಗೆ ಹೊಂದಿಕೊಂಡಿರುವುದರಿಂದ ಹೆಚ್ಚಿನ ಪ್ರಯೋಜನ ಸಾರ್ವಜನಿಕರಿಗೆ ಸಿಗುತ್ತಿದೆ. ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ವೀಕ್ಷಿಸಿ (ಒನ್ ಇಂಡಿಯಾ ಸುದ್ದಿ)" }
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚರ್ಮದಾನ ಅಭಿಯಾನಕ್ಕೆ ನಟ ಪ್ರೇಮ್ ರಿಂದ ಚಾಲನೆ

By Mahesh
|
Google Oneindia Kannada News

ಬೆಂಗಳೂರು, ಜುಲೈ 16: ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನದ ಅಂಗವಾಗಿ ನಗರದ ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 'ಚರ್ಮದಾನ' ದ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನಟ ನೆನಪಿರಲಿ ಪ್ರೇಮ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಲ್ಲಿಯವರೆಗೆ ನೀವು ನೇತ್ರದಾನ, ರಕ್ತದಾನ, ಅಂಗಾಂಗದಾನ ನಿಧಿಗಳ ಬಗ್ಗೆ ಗೊತ್ತಿತ್ತು, ಈಗ ಚರ್ಮದಾನದ ಮಹತ್ವ ಕೂಡಾ ತಿಳಿಯಿತು ಎಂದರು.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚರ್ಮದಾನ ನಿಧಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿದ್ದು, ಜುಲೈ 15ರ ರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿ ದಿನದಂದು ಚರ್ಮದಾನ ನಿಧಿಗೆ ಚಾಲನೆ ಸಿಕ್ಕಿದೆ. ಚರ್ಮದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಪ್ರೇಮ್ ಹೇಳಿದರು.

Prem

ಈ ಯೋಜನೆಯ ಮುಖ್ಯಾಂಶಗಳು
* ಚರ್ಮವನ್ನು ಹೇಗೆ ದಾನ ಮಾಡುವುದು, ದಾನ ಮಾಡಿದ ಚರ್ಮವನ್ನು ಯಾರಿಗೆ ಉಪಯೋಗಿಸಲಾಗುತ್ತದೆ ಇನ್ನಿತರ ವಿಷಯಗಳ ಕುರಿತು ಜಾಗೃತಿ ಕಾರ್ಯಕ್ರಮಗಳಲ್ಲಿ ತಿಳಿಸಲಾಗುತ್ತದೆ.
* ನಿಧಿಯ ಸ್ಥಾಪನೆಗೆ ವಿಕ್ಟೋರಿಯಾ ಆಸ್ಪತ್ರೆಯೊಂದಿಗೆ ಬೆಂಗಳೂರು ವೈದ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ರೋಟರಿ ಕ್ಲಬ್, ಆಶೀರ್ವಾದ್ ಸೈಸ್ ಸಂಸ್ಥೆಗಳು ಕೈಜೋಡಿಸಿವೆ.
* ಮುಂಬೈನ ರಾಷ್ಟ್ರೀಯ ಸುಟ್ಟಗಾಯ ಗಳ ಕೇಂದ್ರ ಮತ್ತು ಚೆನ್ನೈನ ರೈಟ್ಸ್ ಆಸ್ಪತ್ರೆ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ.

Victoria Hospital, Bengaluru

ಯಾರಿಗೆ ಬಳಕೆ?: ಮಿಕ್ಕ ಎಲ್ಲಾ ದಾನಗಳಂತೆ ಚರ್ಮ ದಾನಕ್ಕೂ ವ್ಯಕ್ತಿಯ ಹಾಗೂ ಅವರ ಕುಟುಂಬದ ಪೂರ್ವಾನುಮತಿ ಹಾಗೂ ಸಹಕಾರ ಅತ್ಯಗತ್ಯ. ದಾನ ಪಡೆದ ಚರ್ಮವನ್ನು ಆಸಿಡ್ ದಾಳಿ, ಆಕಸ್ಮಿಕ ಬೆಂಕಿ ಘಟನೆಗಳಲ್ಲಿ ಚರ್ಮ ಸುಟ್ಟು ಕುರೂಪಗೊಂಡಿರುವ ವ್ಯಕ್ತಿಗಳಿಗೆ ಹಾಗೂ ರಸ್ತೆ ಅಪಘಾತಗಳಲ್ಲಿ ಚರ್ಮ ವಿರೂಪಗೊಂಡವರಿಗೆ ಬಳಸಲಾಗುತ್ತದೆ. ಈ ಮೂಲಕ ಅವರಿಗೆ ಹೊಸ ರೂಪ ಹಾಗೂ ಹೊಸ ಚೈತನ್ಯದೊಂದಿಗೆ ಜೀವನ ನಡೆಸಲು ಸಾಧ್ಯವಾಗುತ್ತದೆ.

ವಿಕ್ಟೋರಿಯಾ ಆಸ್ಪತ್ರೆ: 22 ಜೂನ್ 1987ರಲ್ಲಿ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರಿಂದ ಸ್ಥಾಪನೆಯಾದ ಆಸ್ಪತ್ರೆಗೆ ರಾಣಿ ವಿಕ್ಟೋರಿಯಾ ಅವರ ಹೆಸರಿನಲ್ಲಿ 1900ರಲ್ಲಿ ಲಾರ್ಡ್ ಕರ್ಜನ್ ಅವರು ಅಧಿಕೃತವಾಗಿ ಚಾಲನೆ ನೀಡಿದರು. ದೇಶದ ಎರಡನೇ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದೆನಿಸಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಏಕಕಾಲಕ್ಕೆ 1,000ಕ್ಕೂ ಅಧಿಕ ರೋಗಿಗಳ ತ್ವರಿತ ಉಪಚಾರ ಸಾಧ್ಯವಿದೆ. ಬೆಂಗಳೂರು ಮೆಡಿಕಲ್ ಕಾಲೇಜಿಗೆ ಹೊಂದಿಕೊಂಡಿರುವುದರಿಂದ ಹೆಚ್ಚಿನ ಪ್ರಯೋಜನ ಸಾರ್ವಜನಿಕರಿಗೆ ಸಿಗುತ್ತಿದೆ. ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ವೀಕ್ಷಿಸಿ
(ಒನ್ ಇಂಡಿಯಾ ಸುದ್ದಿ)

English summary
In a major step in the field of medical science, Karnataka on Wednesday, July 15, got its first skin bank, on the occasion of World Plastic Surgery Day. Actor Prem has launched the skin bank and urged his fans to donote for a cause.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X