Get Updates
Get notified of breaking news, exclusive insights, and must-see stories!

ಹಿರಿಯ ನಾಗರೀಕರ ಸಹಾಯಕ್ಕಾಗಿ ದಿನದ 24 ಗಂಟೆಯೂ ಹೆಲ್ಪ್ ಲೈನ್

ಸಹಾಯ ಬೇಕಾಗಿರುವ ಹಿರಿಯ ನಾಗರೀಕರು ದೂರವಾಣಿ ಸಂಖ್ಯೆ 1090 (ದರ ರಹಿತ) ಹಾಗೂ 080-22943226, 9243737230 ಮುಖಾಂತರ ಸಹಾಯವಾಣಿಯ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು.

ಬೆಂಗಳೂರು, ಏಪ್ರಿಲ್ 27: ಹಿರಿಯ ನಾಗರೀಕರ ಸಹಾಯಕ್ಕಾಗಿ ದಿನದ 24 ಗಂಟೆಯೂ ಕಾರ್ಯಚರಿಸುವ ಸಹಾಯವಾಣಿಯನ್ನು ಆರಂಭಿಸಲಾಗಿದೆ.

2002ರಿಂದಲೇ ಬೆಂಗಳೂರು ನಗರ ಪೋಲೀಸ್ ಹಾಗೂ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಜಂಟಿಯಾಗಿ ತೊಂದರೆಯಲ್ಲಿರುವ ಹಿರಿಯರಿಗೆ ಸಹಾಯವಾಣಿ ಆರಂಭಿಸಿತ್ತು. ಪ್ರತಿದಿನ 12 ಗಂಟೆಗಳ ಕಾಲ ಅಂದರೆ ಬೆಳಿಗ್ಗೆ 8 ರಿಂದ ಸಾಯಂಕಾಲ 8 ರವರೆಗೆ ಇದು ಕಾರ್ಯ ನಿರ್ವಹಿಸುತ್ತಿತ್ತು.[ಕೆಎಸ್ಆರ್‌ಟಿಸಿ ಟಿಕೆಟ್ ದರದಲ್ಲಿ ಹಿರಿಯ ನಾಗರಿಕರಿಗೆ 25% 'ಸುಲಭ' ರಿಯಾಯಿತಿ]

Bengaluru: Elders Helpline 1090 is now a 24/7 service

ಇದನ್ನೀಗ ಹಿರಿಯರ ಬೇಡಿಕೆ ಹಾಗೂ ಅವಶ್ಯಕತೆಗನುಗುಣವಾಗಿ ದಿನದ 24 ಗಂಟೆಗೆ ವಿಸ್ತರಿಸಲಾಗಿದೆ. ಬುಧವಾರದಿಂದ ಹಿರಿಯರಿಗಾಗಿ ಈ ಹೆಲ್ಪ್ ಲೈನ್ ಸೇವೆ ದಿನದ 24 ಗಂಟೆಯೂ ಲಭ್ಯವಿದೆ.

ಪ್ರಸ್ತುತ ಬೆಂಗಳೂರು ನಗರದಲ್ಲಿ ಸುಮಾರು 10 ಲಕ್ಷ ಹಿರಿಯ ನಾಗರೀಕರಿದ್ದಾರೆ. ಇವರಲ್ಲಿ ಸುಮಾರು 3 ಲಕ್ಷ ಜನರು ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ತೊಂದರೆಗಳನ್ನು ಅನುಭವಿಸುತ್ತಲೇ ಇದ್ದಾರೆ.

ಹಿರಿಯ ನಾಗರೀಕರ ಮೇಲಾಗುತ್ತಿರುವ ಅಪರಾಧಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಈ ಸಹಾಯವಾಣಿ ಸಹಾಯಕ್ಕೆ ಬರಲಿದೆ. 24 ಗಂಟೆ ಕಾರ್ಯಚರಿಸುವ ಸಹಾಯವಾಣಿಗೆ ಕರೆ ಮಾಡಿ ಹಿರಿಯ ನಾಗರೀಕರು ಇದರ ಲಾಭವನ್ನು ಪಡೆಯಬಹುದು.

ಹಾಗೆ ನೋಡಿದರೆ ಹಿರಿಯ ನಾಗರೀಕರ ಸಹಾಯವಾಣಿ ದೇಶದಲ್ಲಿಯೇ ಪ್ರಪ್ರಥಮವಾಗಿ ಬೆಂಗಳೂರು ನಗರದಲ್ಲಿ ಪ್ರಾರಂಭವಾಗಿದ್ದು, ಕಳೆದ 15 ವರ್ಷಗಳಲ್ಲಿ ಸರಿ ಸುಮಾರು 1.6 ಲಕ್ಷ ಕರೆಗಳನ್ನು ಸ್ವೀಕರಿಸಿವೆ. ಇದರಲ್ಲಿ 8662 ಗಂಭೀರವಾದ ಪ್ರಕರಣಗಳು ದಾಖಲಾಗಿದ್ದು ಯಶಸ್ವಿಯಾಗಿ ಇತ್ಯರ್ಥ ಗೊಳಿಸಲಾಗಿದೆ.

ಹಿರಿಯ ನಾಗರೀಕರ ಸಹಾಯವಾಣಿಯಲ್ಲಿ ನೀಡಲಾಗುವ ಎಲ್ಲಾ ಸೇವೆಗಳು ಉಚಿತವಾಗಿರುತ್ತವೆ. ಸಹಾಯ ಬೇಕಾಗಿರುವ ಹಿರಿಯ ನಾಗರೀಕರು ದೂರವಾಣಿ ಸಂಖ್ಯೆ 1090 (ದರ ರಹಿತ) ಹಾಗೂ 080-22943226, 9243737230 ಮುಖಾಂತರ ಸಹಾಯವಾಣಿಯ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+