ಕಾರ್ ಮತ್ತು ಬೈಕ್ ರೇಸಿಂಗ್ ನೋಡಲು ಹೊಸೂರಿಗೆ ಬನ್ನಿ

Posted By:
Subscribe to Oneindia Kannada

ಬೆಂಗಳೂರು, ಮೇ 03 : ಕಾರ್ ಮತ್ತು ಬೈಕ್ ರೇಸಿಂಗ್ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಹೊಸೂರಿಗೆ ಬನ್ನಿ. ಮೇ ಅಂತ್ಯದಲ್ಲಿ 'ಬೆಂಗಳೂರು ಡ್ರ್ಯಾಗ್ ಫೆಸ್ಟ್- 2016' ಹೆಸರಿನ ರೋಮಾಂಚಕ ರೇಸಿಂಗ್ ಸ್ಪರ್ಧೆ ಹೊಸೂರಿನಲ್ಲಿ ನಡೆಯಲಿದೆ.

ಟೀಮ್ 46 ರೇಸಿಂಗ್ ಕಮ್ಯುನಿಟಿ ರೇಸಿಂಗ್ ಸ್ಪರ್ಧೆ ಆಯೋಜನೆ ಮಾಡಿದೆ. ಹೊಸೂರಿನ ತನೇಜಾ ಏರೊಸ್ಪೇಸ್ ಆಂಡ್ ಏವಿಯೇಷನ್ ಲಿಮಿಟೆಡ್‍ನಲ್ಲಿ ಮೇ 28 ಮತ್ತು 29 ರಂದು ಈ ಸ್ಪರ್ಧೆ ನಡೆಯಲಿದೆ. ಸುಮಾರು 800 ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. [ಮಂಗಳೂರು : ಸಸಿಹಿತ್ಲು ಬೀಚ್ ನಲ್ಲಿ ಮೇ 27ರಿಂದ ಸರ್ಫಿಂಗ್ ಸ್ಪರ್ಧೆ]

ವಿಮಾನ ನಿಲ್ದಾಣದ ರನ್‌ವೇಯಲ್ಲಿ ರೇಸ್ ನಡೆಯುವುದುಅಪರೂಪ. ಹೆಚ್ಚಿನ ರನ್‍ವೇಗಳು ಬ್ಯುಸಿ ಯಾಗಿರುವುದರಿಂದ ಮತ್ತು ಬಳಕೆಯಾಗದ ರನ್‍ವೇಗಳಲ್ಲಿ ಉತ್ತಮ ಟ್ರ್ಯಾಕ್ ಇಲ್ಲದಿರುವುದರಿಂದ ರೇಸಿಂಗ್ ನಡೆಸುವುದು ಕಷ್ಟ. ಆದರೆ, ಹೊಸೂರಿನ ರನ್‌ ವೇಯಲ್ಲಿ ಉತ್ತಮ ವ್ಯವಸ್ಥೆ ಇದೆ. [ಬೆಳಗಾವಿ, ಮಡಿಕೇರಿ, ಕುಡ್ಲಕ್ಕೆ ಹಾರ್ಲೆ 'ಬೈಕ್ ಗಳ ಟೂರ್']

ಡ್ರ್ಯಾಗ್ ರೇಸ್ ನಯವಾದ ರಸ್ತೆಗಳಲ್ಲಿ ಮತ್ತು ರನ್‍ವೇಗಳಂತಹ ನಿಯಂತ್ರಿತ ಟ್ರ್ಯಾಕ್‍ಗಳಲ್ಲಿ ನಡೆಯುತ್ತದೆ. ಸಾಮಾನ್ಯವಾಗಿ ಇಂತಹ ರೇಸ್‍ಗಳ ಉದ್ದ 201 ಮೀಟರ್, 305 ಮೀಟರ್, 402 ಮೀಟರ್ ಆಗಿರುತ್ತದೆ. ಬೆಂಗಳೂರು ಡ್ರ್ಯಾಗ್ ರೇಸ್ 402 ಮೀಟರ್ ಉದ್ದದ ಟ್ರ್ಯಾಕ್‍ನಲ್ಲಿ ನಡೆಯಲಿದೆ. [ಜೇಮ್ಸ್ ಬಾಂಡ್ ಕಾರಿನ ಒಡೆಯನಾದ ಕುಡ್ಲದ ಅರ್ಜುನ್]

ಏನಿದು ಡ್ರ್ಯಾಗ್ ರೇಸಿಂಗ್?

ಏನಿದು ಡ್ರ್ಯಾಗ್ ರೇಸಿಂಗ್?

ಆಟೋಕ್ರಾಸ್, ಸರ್ಕಿಟ್ ರೇಸಿಂಗ್, ಡರ್ಟ್ ಟ್ರ್ಯಾಕ್, ಹಿಲ್ ಕ್ಲೈಂಬ್ ಮತ್ತು ಡ್ರ್ಯಾಗ್ ರೇಸಿಂಗ್ ಎಂದು ಹಲವು ಬಗೆಯ ಕಾರ್ ಮತ್ತು ಬೈಕ್ ರೇಸ್‍ಗಳಿವೆ. ಈ ಪೈಕಿ ಡ್ರ್ಯಾಗ್ ರೇಸಿಂಗ್ ವಿಶಿಷ್ಟವಾದುದು. ತುಂಬ ಕಡಿಮೆ ದೂರದ ರೇಸ್ ಇದಾಗಿದೆ.

402 ಮೀಟರ್ ಉದ್ದದ ಟ್ರ್ಯಾಕ್‍

402 ಮೀಟರ್ ಉದ್ದದ ಟ್ರ್ಯಾಕ್‍

ಡ್ರ್ಯಾಗ್ ರೇಸಿಂಗ್ 201 ಮೀಟರ್, 305 ಮೀಟರ್, 402 ಮೀಟರ್ ಉದ್ದ ಟ್ರ್ಯಾಕ್‌ನಲ್ಲಿ ನಡೆಯುತ್ತದೆ. ಬೆಂಗಳೂರು ಡ್ರ್ಯಾಗ್ ರೇಸ್ 402 ಮೀಟರ್ ಉದ್ದದ ಟ್ರ್ಯಾಕ್‍ನಲ್ಲಿ ನಡೆಯಲಿದೆ.

800 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ

800 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ

350 ಕಾರು, 450 ಬೈಕ್‍ಗಳ ಸಹಿತ 800ಕ್ಕೂ ಅಧಿಕ ರೇಸಿಂಗ್ ಕಾರು, ಬೈಕ್‍ಗಳ ಅದ್ಭುತ ಪ್ರದರ್ಶನಕ್ಕೆ ಬೆಂಗಳೂರು ಸಾಕ್ಷಿಯಾಗಲಿದೆ. ಈ ರನ್‍ವೇಯ ಉದ್ದ 2.2 ಕಿ.ಮೀ. ಇದ್ದು, 45 ಮೀಟರ್ ಅಗಲವಿದೆ.

ನಿಖರವಾದ ಮಾಹಿತಿ ಸಂಗ್ರಹ

ನಿಖರವಾದ ಮಾಹಿತಿ ಸಂಗ್ರಹ

ಏಕಕಾಲದಲ್ಲಿ ಎರಡು ರೇಸಿಂಗ್ ವಾಹನಗಳನ್ನು ಸ್ಪರ್ಧೆಗೆ ಇಳಿಸಿ ಯಾವುದು ಮೊದಲು ಗುರಿ ತಲುಪುತ್ತದೆ ಎಂಬುದನ್ನು ಅತ್ಯಂತ ನಿಖರವಾಗಿ ಎಲೆಕ್ಟ್ರಾನಿಕ್ ಟೈಮಿಂಗ್ ಮತ್ತು ಸ್ಪೀಡ್ ಸೆನ್ಸಿಂಗ್ ಸಿಸ್ಟಮ್ ಮೂಲಕ ನಿರ್ಧರಿಸಲಾಗುತ್ತದೆ.

ಪ್ರವೇಶ ಶುಲ್ಕ ನೀಡಬೇಕು

ಪ್ರವೇಶ ಶುಲ್ಕ ನೀಡಬೇಕು

ಸ್ಪರ್ಧಿಗಳಿಗೆ ಮತ್ತು ರೇಸಿಂಗ್ ನೋಡಲು ಬರುವ ಜನರಿಗೆ ಪ್ರವೇಶ ಶುಲ್ಕವಿದೆ. ರೇಸಿಂಗ್ ನೋಡಲು ಬರುವ ಜನರಿಗೆ ಅನುಕೂಲವಾಗಲು ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ರೇಸಿಂಗ್ ನೋಡಲು ಬರುವ ಜನರ ಸುರಕ್ಷತೆಗೂ ಆದ್ಯತೆ ನೀಡಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here is a thrilling news for drag race lovers. Team 46 Racing community organized 'Bengaluru Drag Fest 2016' at Taneja Aerospace and Aviation Ltd Hosur on May 28 and 29, 2016.
Please Wait while comments are loading...