ಬೆಂಗಳೂರು: ಆನ್‌ಲೈನ್ ವೇಶ್ಯಾವಾಟಿಕೆ ಜಾಲದ ಬಗ್ಗೆ ಎಚ್ಚರ

Subscribe to Oneindia Kannada

ಬೆಂಗಳೂರು, ಏಪ್ರಿಲ್ 26: ಐಟಿ ಸಿಟಿ ಬೆಂಗಳೂರು ಸಭ್ಯರ ನಗರವಾಗಿ ಉಳಿದಿಲ್ಲ. ಕೆಲವೊಂದು ಕೆಲವು ಜಾಹೀರಾತುಗಳು ಸಭ್ಯರನ್ನು ದಾರಿ ತಪ್ಪಿಸಬಲ್ಲವು ಅಥವಾ ಅಂಥ ಜಾಹೀರಾತುಗಳು ಹಳ್ಳಕ್ಕೆ ಕೆಡವಬಲ್ಲವು.

ಅಂತರ್ಜಾಲವನ್ನು ಬಳಸಿಕೊಂಡ ಕೆಲ ಶಕ್ತಿಗಳು ತಮ್ಮ ವೇಶ್ಯಾವಾಟಿಕೆ ಜಾಲವನ್ನು ವ್ಯವಸ್ಥಿತವಾಗಿ ಬಿತ್ತರ ಮಾಡುತ್ತಿವೆ. ಯಾವುದೇ ವೆಬ್ ತಾಣವನ್ನು ನೋಡುತ್ತಿರುವಾಗ 'women seeking men in Bangalore' ಮತ್ತು 'independent girls seeking men in Bangalore' ಎಂಬ ಪಾಪ್ ಅಪ್ ವಿಂಡೋಗಳು ಕಂಡುಬರುತ್ತಿರುತ್ತವೆ. ಇವನ್ನು ಕ್ಲಿಕ್ ಮಾಡಿದರೆ ಜಾಲದಲ್ಲಿ ವ್ಯಕ್ತಿ ಗೊತ್ತಿಲ್ಲದಂತೆ ಸಿಕ್ಕಿ ಹಾಕಿಕೊಳ್ಳುತ್ತಾನೆ.[ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದ ಕಿಸ್ ಆಫ್‌ ಲವ್ ನಾಯಕಿ]

bengaluru

ಒನ್ ಇಂಡಿಯಾದೊಂದಿಗೆ ಮಾತನಾಡಿದ ಆನ್ ಲೈನ್ ಬಳಕೆದಾರರೊಬ್ಬರು(ಹಣ ಕಳೆದುಕೊಂಡವರು) ಇಂಥದ್ದೊಂದು ಗಂಭೀರ ಮಾಹಿತಿಯನ್ನು ಹೊರಹಾಕಿದ್ದಾರೆ. ಮಹಿಳೆಯೊಬ್ಬರಿಂದ ಮೂರು ಸಲ ನಾನು ಇಂಥ ಆಫರ್ ಗೆ ಒಳಗಾಗಿದ್ದೆ. ಹಣದ ಬದಲಾಗಿ ಲೈಂಗಿಕ ತೃಪ್ತಿ ನೀಡುತ್ತೇನೆ ಎಂದು ಆಕೆ ಮುಕ್ತವಾಗಿ ಹೇಳಿದ್ದಳು ಎಂದು ಹೇಳಿದ್ದಾರೆ.

ಹುಡುಗಿಯ ಚಿತ್ರದೊಂದಿಗೆ ಆಕೆಯ ಮೊಬೈಲ್ ಸಂಖ್ಯೆ ಸಹ ಲಭ್ಯವಾಗುತ್ತದೆ. ನಾನು ಆಕೆ ಸಭ್ಯಸ್ಥಳಂತೆ ಕಂಡ ಕಾರಣ ಕಾಂಟಾಕ್ಟ್ ಮಾಡಲು ಮುಂದಾದೆ. ಆದರೆ ನನಗೆ ಗೊತ್ತಿಲ್ಲದಂತೆ ಅವರ ಬಲೆಯೊಳಗೆ ಬಿದ್ದಿದ್ದೆ ಎಂದು ವಿವರಿಸಿದ್ದಾರೆ. [ರಾಸಲೀಲೆಗೆ ಪಲ್ಲಂಗವಾದ ಕೇರಳ ಬೋಟ್ ಹೌಸ್]

ಜಾಹೀರಾತು ಏನು ಹೇಳುತ್ತದೆ?
"ಹಾಯ್ ನಾನು ಸಾರಾ, ಒಬ್ಬಳೇ ಇದ್ದೇನೆ.. ನನ್ನನ್ನು ನೇರವಾಗಿ ಸಂಪರ್ಕ ಮಾಡಿ, ನನ್ನ ಫ್ಲಾಟ್ ನಲ್ಲಿ ತಮಾಷೆಯ ದಿನಗಳನ್ನು ಕಳೆಯಿರಿ'" ಎಂಬ ಮಾತುಗಳು ಕಾಣಸಿಗುತ್ತವೆ. ಮುಂದುವರಿದು, ನಾನೊಬ್ಬನೆ ಇದ್ದೇನೆ, ಲೈಂಗಿಕ ಸಂಪರ್ಕಕ್ಕಾಗಿ ಹಾತೊರೆಯುತ್ತಿದ್ದೇನೆ, ಯಾವುದೇ ಕಂಡಿಶನ್ ಗಳಿಲ್ಲದೇ ನನ್ನ ಜತೆ ವ್ಯವಹರಿಸಲು ಸುಂದರ ಯುವಕ ಬೇಕು" ಎಂಬ ಮಾತುಗಳು ಸಿಗುತ್ತದೆ.

ದೂರವಾಣಿ ಕರೆ ಮಾಡಿದರೆ ಇಂಪಾದ ಸ್ವರವೊಂದು ಆ ಕಡೆಯಿಂದ ಮಾತನಾಡಿ ವ್ಯವಹಾರ ಕುದುರಿಸುತ್ತದೆ. ಜೆಪಿ ನಗರದ ನಾಲ್ಕನೇ ಹಂತಕ್ಕೆ ಇಂಥ ವೇಳೆಗೆ ಬನ್ನಿ ಎಂದು ಸಮಯವನ್ನು ನಿಗದಿ ಮಾಡುತ್ತದೆ.[ನೋಟು ನೋಡದೆ ಕಿಸೆಗೆ ಹಾಕಿದ್ರೆ ಕಥೆ ಮುಗೀತು!]

ಅದರಂತೆ ನಾನು ಜೆಪಿ ನಗರಕ್ಕೆ ತೆರಳಿದರೆ ಅಂಗಡಿಯೊಂದರ ಬಳಿ ನಿಂತುಕೊಳ್ಳಿ ಎಂದು ಧ್ವನಿ ಹೇಳಿತು. ಕೆಲ ಸಮಯ ಕಳೆದ ನಂತರ ಹುಡುಗನೊಬ್ಬ ಬಂದು ನನ್ನನ್ನು ವಿಚಾರಿಸಿಕೊಂಡ. ಮೂರು ತಾಸು ಅವಧಿಗೆ ಮೂರು ಸಾವಿರ, ಇಡೀ ರಾತ್ರಿಗಾದರೆ 5 ಸಾವಿರ ಎಂಬ ಕರಾರನ್ನು ಮೊದಲೆ ಮಾಡಿಕೊಳ್ಳಲಾಗಿತ್ತು.

ಬಂದ ಹುಡುಗ ಗೊತ್ತಿಲ್ಲದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾನೆ. ಹುಡುಗಿಯರನ್ನು ತೋರಿಸುವ ಮೊದಲೇ 5 ಸಾವಿರ ನೀಡಲು ಬೇಡಿಕೆ ಇಡುತ್ತಾನೆ. ಹಣ ನೀಡಿದ ನಂತರ ಸಾಮಾನ್ಯ ವೇಶ್ಯಾವಾಟಿಕೆ ಜಾಗಕ್ಕೆ ತೆರಳಿ ಮೂರು ಹುಡುಗಿಯರನ್ನು ತೋರಿಸಿ ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳುತ್ತಾನೆ.[ಗೋಲ್ ಮಾಲ್ ಮೆಸೇಜ್ ನಂಬಿ ಉತ್ರ ಕೊಟ್ರೇ...!]

ನನಗೆ ಕರೆ ಮಾಡಿದ ಹುಡುಗಿ ಆ ಪಟ್ಟಿಯಲ್ಲಿ ಇಲ್ಲವಾಗಿದ್ದಳು. ಅನಿವಾರ್ಯವಾಗಿ ಆಯ್ಕೆ ಮಾಡಿಕೊಂಡ ನಂತರ ಹುಡುಗಿ ಟಿಪ್ಸ್ ಎಂದು ಸಾವಿರ ರು. ನೀಡಲು ಬೇಡಿಕೆ ಇಡುತ್ತಾಳೆ. ಕೇವಲ 15 ನಿಮಿಷದ ಕಾಲಾವಕಾಶವನ್ನು ನೀಡುತ್ತಾಳೆ. ಅಷ್ಟರಲ್ಲಿ "ಎಲ್ಲವನ್ನು" ಮುಗಿಸಿ ಹೊರಕ್ಕೆ ಬರಬೇಕು. ಅಂದರೆ ಅಲ್ಲಿಗೆ 15 ನಿಮಿಷಕ್ಕೆ ಬರೋಬ್ಬರಿ ಆರು ಸಾವಿರ ರು. ಕಳೆದುಕೊಂಡಿರಬೇಕಾಗುತ್ತದೆ.

ಪಾಪ್ ಅಪ್ ವಿಂಡೋ ನೋಡಿ ಕಾಂಟಾಕ್ಟ್ ಮಾಡುವ ಎಲ್ಲರ ಜತೆ ಇದೆ ಬಗೆಯಲ್ಲಿ ಹುಡುಗಿಯರು ವ್ಯವಹರಿಸುತ್ತಾರೆ. ಲೈಂಗಿಕ ವಾಂಛೆ ಇದ್ದ ವ್ಯಕ್ತಿ ಇವರ ಬಲೆಗೆ ಬಿದ್ದರೆ ಎಲ್ಲವನ್ನು ಕಳೆದುಕೊಂಡು ಹೊರಬರಬೇಕಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cashing in on sex addiction, local prostitution racketeers in IT city posting advertisements of deceiving nature to make customers fall into their traps to mint more money. A thorough examination of a website providing advertisement space to post ads related to quenching sex thirst reveals that for most of the sex selling agencies this is heavenly web space to put up a deceiving sex marketing contents.
Please Wait while comments are loading...