ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯದಲ್ಲಿ ಸುವರ್ಣಮಹೋತ್ಸವದ ಸಂಭ್ರಮ

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಆಗಸ್ಟ್ 7: ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಆಗಸ್ಟ್ 5 ರಂದು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಇದೇ ಶಾಲೆಯಲ್ಲಿ ಓದಿ ಜೀವನದ ಬೇರೆ ಬೇರೆ ಘಟ್ಟದಲ್ಲಿರುವ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ, ಹಲವಾರು ಸಾಧನೆ ಮಾಡಿದ ನೂರಾರು ಜನರು ತಮ್ಮ ಹಳೇ ಶಾಲೆಯನ್ನು ನೋಡಿ ಕಣ್ತುಂಬಿಸಿಕೊಂಡರು!

<span class=ಬೆಂಗಳೂರು ಕೇಂದ್ರೀಯ ವಿದ್ಯಾಲಯದ ಹಳೇ ವಿದ್ಯಾರ್ಥಿಗಳಿಂದ ಮಾದರಿ ಕಾರ್ಯ" title="ಬೆಂಗಳೂರು ಕೇಂದ್ರೀಯ ವಿದ್ಯಾಲಯದ ಹಳೇ ವಿದ್ಯಾರ್ಥಿಗಳಿಂದ ಮಾದರಿ ಕಾರ್ಯ" />ಬೆಂಗಳೂರು ಕೇಂದ್ರೀಯ ವಿದ್ಯಾಲಯದ ಹಳೇ ವಿದ್ಯಾರ್ಥಿಗಳಿಂದ ಮಾದರಿ ಕಾರ್ಯ

ಇಲ್ಲಿನ ಕೇಂದ್ರೀಯ ವಿದ್ಯಾಲಯಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಆಚರಿಸಲಾಯಿತು. ಇಲ್ಲೇ ವಿದ್ಯಾಭ್ಯಾಸ ಮಾಡಿದ್ದ ಹಳೇ ವಿದ್ಯಾರ್ಥಿಗಳೆಲ್ಲ ಈ ಸಂದರ್ಭದಲ್ಲಿ ಸೇರಿ ತಮ್ಮ ಬಾಲ್ಯದ ಅವಿಸ್ಮರಣೀಯ ಕ್ಷಣಗಳನ್ನು ನೆನಪಿಸಿಕೊಂಡು ಖುಷಿಪಟ್ಟರು. ತಮ್ಮ ಶಾಲೆಯ ಸುವರ್ಣ ಮಹೋತ್ಸವ, ಬಾಲ್ಯದ ಸುವರ್ಣ ಯುಗವನ್ನು ಕಣ್ಮುಂದೆ ತರುವುದಕ್ಕೆ ಸಹಕಾರಿಯಾಯಿತು.

Bengaluru: Alumni celebrate 50 years of Kendriya Vidyalaya Malleswaram

ಒಂದಾನೊಂದು ಕಾಲದಲ್ಲಿ ಈ ಶಾಲೆಯ ಮೈದಾನದ ಮೂಲೆ ಮೂಲೆಯನ್ನೂ ಬಿಡದೆ ಆಡುತ್ತ, ಓಡುತ್ತ ಇದ್ದವರೆಲ್ಲ ಇಂದು ವೈದ್ಯರು, ಐಎಎಸ್ ಆಫೀಸರ್ ಗಳು, ಸೈನಿಕರು, ಉದ್ಯಮಿಗಳಾಗಿ ಶಾಲೆಗೆ ಪದಾರ್ಪಣೆ ಮಾಡಿದ್ದರು! ಎಷ್ಟೋ ಸಮಯದ ನಂತಗರ ಸಿಕ್ಕ ಹಳೇ ಗೆಳೆಯರೊಂದಿಗೆ ತಮ್ಮ ತಮ್ಮ ಬದುಕಿನ ಪುಟಗಳನ್ನು ತೆರೆದುಕೊಂಡು ಸಂತೃಪ್ತರಾದರು.

ತಾವು ಕಲಿತ ಶಾಲೆಗೆ ತಮ್ಮಿಂದಾದಷ್ಟು ಸಹಾಯ ಮಾಡುವ, ಮೂಲಸೌಕರ್ಯಗಳಿಗೆ ನೆರವು ನೀಡುವ ಸಲುವಾಗಿ ಹಳೆ ವಿದ್ಯಾರ್ಥಿಗಳನ್ನೆಲ್ಲ ಒಂದುಗೂಡಿಸಿ, ಫೇಡರೇಶನ್ ಆಫ್ ಅಲುಮ್ನಿ ಅಸೋಸಿಯೇಶನ್ ಆಫ್ ಕೇಂದ್ರೀಯ ವಿದ್ಯಾಲಯ(ಕೇಂದ್ರೀಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ) ಎಂಬ ಸಂಸ್ಥೆಯನ್ನು ಕಟ್ಟಿಕೊಂಡಿದ್ದಾರೆ. ಸಂಸ್ಥೆಯ ಮೂಲಕ ಈಗಾಗಲೇ ಶಾಲೆಗೆ ಉಪಯೋಗವಾಗುವಂಥ ಹಲವು ಕೆಲಸಗಳನ್ನು ಮಾಡಿದ್ದಾರೆ.

#GiveBacktoKV ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳನ್ನು ಒಂದುಗೂಡಿಸುವ ಮತ್ತು ತಮ್ಮ ಶಾಲೆಗೆ ಕೊಡುಗೆ ನೀಡುವ ಕಾರ್ಯ ಈಗಲೂ ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಯುತ್ತಿದೆ.

English summary
A school in Malleswaram was abuzz with activity on Saturday. People from every walk of life had gathered inside a school. Some were IAS officers, others doctors, entrepreneurs, army men, teachers even but one thing that brought them together was Kendriya Vidyalaya. Alumni came together to celebrate 50 years of Kendriya Vidyalaya, Malleswaram in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X