ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ.14ಕ್ಕೆ ನಮ್ಮ ಮೆಟ್ರೋಗೆ ಮೂರು ಬೋಗಿಗಳು ಹಸ್ತಾಂತರ

|
Google Oneindia Kannada News

ಬೆಂಗಳೂರು, ಫೆಬ್ರವರಿ 5: ನಮ್ಮ ಮೆಟ್ರೋಗೆ ಬಿಇಎಂಎಲ್ ನಿಂದ ಮೂರು ಬೋಗಿಗಳು ಫೆ.14ಕ್ಕೆ ಹಸ್ತಾಂತರವಾಗಲಿದೆ.
1,421 ಕೋಟಿ ರೂ. ವೆಚ್ಚದಲ್ಲಿ 150 ಬೋಗಿಗಳನ್ನು ಖರೀದಿಸಲು ಬಿಎಂಆರ್ಸಿಲ್ ಮತ್ತು ಬಿಇಎಂಎಲ್ ಒಪ್ಪಂದ ಮಾಡಿಕೊಂಡಿದೆ. ಜನವರಿ ಅಂತ್ಯದಲ್ಲಿ ಮೂರು ಬೋಗಿಗಳನ್ನು ನೀಡುವುದಾಗಿ ಬಿಎಂಆರ್ ಸಿ ಎಲ್ ಗೆ ಬಿಇಎಂಎಲ್ ತಿಳಿಸಿತ್ತು. ಆದರೆ ಹಲವು ಕಾರಣಗಳಿಂದ ಹಸ್ತಾಂತರಿಸುವ ದಿನವನ್ನು ಮುಂದೂಡಲಾಗಿತ್ತು. ಫೆ.14 ರಂದು ಮೂರು ಬೋಗಿಗಳನ್ನು ನೀಡಲು ಸಿದ್ಧತೆ ನಡೆಸಿದೆ.

ಸಂಚಾರ ಮುಕ್ತಗೊಳಿಸುವ ಸಾಧ್ಯತೆ: ಬಿಎಂಆರ್ಸಿಎಲ್ ಗೆ ಇಲ್ಲ ಸ್ಪಷ್ಟತೆಸಂಚಾರ ಮುಕ್ತಗೊಳಿಸುವ ಸಾಧ್ಯತೆ: ಬಿಎಂಆರ್ಸಿಎಲ್ ಗೆ ಇಲ್ಲ ಸ್ಪಷ್ಟತೆ

ವೈಟ್ ಫೀಲ್ಡ್ ಕಡೆ ತೆರಳುವ ಮೈಸೂರು ರಸ್ತೆ-ಬೈಯ್ಯಪ್ಪನಹಳ್ಳಿ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವುದರಿಂದ ಈ ಮಾರ್ಗಕ್ಕೆ ಮೊದಲ ಆರು ಬೋಗಿಯ ರೈಲನ್ನು ನೀಡುವ ಸಾಧ್ಯತೆ ಇದೆ. ಮೂರು ಬೋಗಿಯ ಒಂದು ರೈಲಿಗೆ ಹೊಸ ಬೋಗಿಯನ್ನು ಸೇರಿಸಿ ಆರು ಬೋಗಿ ರೈಲಾಗಿ ಪರಿವರ್ತಿಸಲಾಗುತ್ತಿದೆ. ರೈಲಿನ ಮುಂಭಾಗದಲ್ಲಿ ಮೊದಲ ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತಿದೆ.

BEML will handover three Coaches to Namma metro

ಮೈಸೂರು ರಸ್ತೆ-ಬೈಯ್ಯಪ್ಪನಹಳ್ಳಿ ಮಾರ್ಗದಲ್ಲಿ18 ಹಾಗೂ ನಾಗಸಂದ್ರ-ಯಲಚೇನಹಳ್ಳಿ ಮಾರ್ಗದಲ್ಲಿ 11 ರೈಲುಗಳು ಕಾರ್ಯಾಚರಿಸುತ್ತದೆ. ಒಟ್ಟು50 ರೈಲುಗಳಿದ್ದು, ಎಲ್ಲವನ್ನೂ ಬಳಸುತ್ತಿಲ್ಲ. ಒಂದು ಬೋಗಿಯಲ್ಲಿ 325 ಜನರಂತೆ ಮೂರು ಬೋಗಿಯ ಒಂದು ರೈಲಿನಲ್ಲಿ975 ಜನರು ಪ್ರಯಾಣಿಸಬಹುದು.. ಬೆಳಗ್ಗೆ ಹಾಗೂ ಸಂಜೆ ಕಚೇರಿಗೆ ಹೋಗುವ, ಮರಳುವ ಸಮಯದಲ್ಲಿ ಪ್ರತಿ ರೈಲಿನಲ್ಲಿ ಸರಾಸರಿ ಒಂದು ಸಾವಿರ ಜನರು ಪ್ರಯಾಣ ಮಾಡುತ್ತದ್ದಾರೆ. ಇದರಿಂದ ಪ್ರಯಾಣ ಕಷ್ಟಕರವಾಗಿದೆ. ಆರು ಬೋಗಿಯ ರೈಲಿನಲ್ಲಿ 1950 ಜನರು ಒಂದೇ ಬಾರಿಗೆ ಪ್ರಯಾಣ ಮಾಡಬಹುದು.

English summary
BEML will handover Three coaches out of 150 to BMRCL at the cost of 1421 crores. New coaches will be added to Namma metro service by February 14 and expected to including three more coaches in Metro services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X