ಬೆಂಗಳೂರು ಬೆಳ್ಳಂದೂರು ಕೆರೆ ಬಿಳಿನೊರೆಯ ರಹಸ್ಯ ಲೀಕ್

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 01 : ಬೆಳ್ಳಂದೂರು ಕೆರೆಯಲ್ಲಿ ನೊರೆ ಹಾಗೂ ದುರ್ನಾತ ಹೊರಹೊಮ್ಮಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಡಿಟರ್ಜೆಂಟ್ ಯುಕ್ತ ನೀರು ಕೆರೆಗೆ ಸೇರುತ್ತಿರುವುದು ನೊರೆಗೆ ಕಾರಣ ಎಂಬ ವರದಿ ಕೇಂದ್ರ ಸರ್ಕಾರದ ಕೈ ಸೇರಿದೆ.

ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಂಶೋಧಕರು ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಈ ವರದಿಯನ್ನು ನೀಡಿದ್ದಾರೆ. ವರದಿ ಓದಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ. [ಬೆಳ್ಳಂದೂರು ಕೆರೆಯ ನೊರೆ ಸಮಸ್ಯೆಗೆ ಪರಿಹಾರ?]

lake

ಡಿಟರ್ಜೆಂಟ್ ಯುಕ್ತ ನೀರು ಕೆರೆಗೆ ಹರಿದುಬರುತ್ತಿರುವುದರಿಂದ ನೊರೆಯ ಸಮಸ್ಯೆ ಉಂಟಾಗುತ್ತಿದೆ. ನೀರನ್ನು ಶುದ್ಧೀಕರಿಸದೆ ಕೆರೆಗೆ ಬಿಡುವುದನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ ಬಳಿಕ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ. [ಬೆಳ್ಳಂದೂರು ಕೆರೆ ಸ್ವಚ್ಛ ಮಾಡಲು ಎಷ್ಟು ವರ್ಷ ಬೇಕು?]

'ಕೊಳಚೆ ನೀರು ತಡೆಗೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿಗೆ ಪುನಃ ಭೇಟಿ ನೀಡಲಿದ್ದು, ಆಗ ಕೆರೆ ಪರಿಸರದಲ್ಲಿ ವಾಸಿಸುತ್ತಿರುವ ಜನರ ಸಮಸ್ಯೆಯನ್ನು ಆಲಿಸುವುದಾಗಿ' ಪ್ರಕಾಶ್ ಜಾವಡೇಕರ್ ಹೇಳಿದರು.

'ಬೆಳ್ಳಂದೂರು ಕೆರೆಯ ನೊರೆ ಸಮಸ್ಯೆಯನ್ನು ಹಂತ-ಹಂತವಾಗಿ ಪರಿಹರಿಸಲಾಗುವುದು. ಕೊಳಚೆ ನೀರು ಕೆರೆಗೆ ಹರಿದುಬರದಂತೆ ತಡೆಗಟ್ಟಲಾಗುವುದು' ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಕಳೆದ ವಾರ ಭರವಸೆ ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pollution in lakes a subject that is often discussed in the Garden City of Bengaluru. The Bellandur lake is an example of what mindless urbanization can do. The Union Minister for Environment, Prakash Javdekar received at report from researchers from the Indian Institute of Sciences about pollution o lake.
Please Wait while comments are loading...