ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುನಿಯಾ ವಿಜಿ ಹಲ್ಲೆಗೆ ರವಿ ಬೆಳಗೆರೆ ಯತ್ನ ಎಂಬ ಓಳು ಸುದ್ದಿ

|
Google Oneindia Kannada News

Recommended Video

ನಟ ದುನಿಯಾ ವಿಜಯ್ ಮೇಲೆ ಹಲ್ಲೆ ಯತ್ನಿಸಿದ್ದರಾ ರವಿ ಬೆಳಗೆರೆ? | Oneindia

ಬೆಂಗಳೂರು, ಡಿಸೆಂಬರ್ 13: ಭೀಮಾ ತೀರದಲ್ಲಿ ಸಿನಿಮಾ ಚಿತ್ರೀಕರಣ ನಡೆಯುವಾಗ ನಟ ದುನಿಯಾ ವಿಜಿ ಮೇಲಿನ ಹಲ್ಲೆಗೆ ಪತ್ರಕರ್ತ ರವಿ ಬೆಳಗೆರೆ ಸೂಚನೆ ಕೊಟ್ಟಿದ್ದರು ಎಂದು ಪತ್ರಕರ್ತ ಟಿ.ಕೆ.ಮಲಗೊಂಡ ಆರೋಪ ಮಾಡಿದರು ಎಂಬ ಸುದ್ದಿ ಹರಿದಾಡಿದಷ್ಟೇ ವೇಗವಾಗಿ ಗಾಳಿ ಸೇರಿದೆ.

ಸುಪಾರಿ ಕೇಸ್ : ರವಿಬೆಳಗೆರೆಗೆ ಮಧ್ಯಂತರ ಜಾಮೀನು ಮಂಜೂರುಸುಪಾರಿ ಕೇಸ್ : ರವಿಬೆಳಗೆರೆಗೆ ಮಧ್ಯಂತರ ಜಾಮೀನು ಮಂಜೂರು

ಇಂಥ ಆರೋಪ ಮಾಡಿದ್ದನ್ನು ಟಿ.ಕೆ.ಮಲಗೊಂಡ ಅವರು ನಿರಾಕರಿಸಿದ್ದು, ಚಿತ್ರೀಕರಣದ ವೇಳೆ ಅಂಥ ಯಾವ ಘಟನೆಯೂ ನಡೆದಿಲ್ಲ. ಈ ಬಗ್ಗೆ ಐದು ವರ್ಷದ ನಂತರ ಯಾಕೆ ಪ್ರಸ್ತಾವ ಮಾಡುತ್ತಿದ್ದೀರಿ? ಈ ಸಂದರ್ಭದಲ್ಲಿ ಯಾಕೆ ಇಂಥ ಸುದ್ದಿ ಹರಿದಾಡುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಜ್ಯೋತಿಷಿ ಕಮಲಾಕರ್ ಭಟ್ ರಿಂದ ರವಿ ಬೆಳಗೆರೆ ಜಾತಕ ವಿಶ್ಲೇಷಣೆಜ್ಯೋತಿಷಿ ಕಮಲಾಕರ್ ಭಟ್ ರಿಂದ ರವಿ ಬೆಳಗೆರೆ ಜಾತಕ ವಿಶ್ಲೇಷಣೆ

ಸ್ವತಃ ಮಲಗೊಂಡ ತಾವು ಅಂಥ ಹೇಳಿಕೆ ನೀಡಿಲ್ಲ ಎಂದು ಹೇಳಿರುವುದು, ಜತೆಗೆ ದುನಿಯಾ ವಿಜಿ ಅಂಥ ಯಾವ ಘಟನೆಯೂ ನಡೆದಿಲ್ಲ ಎಂಬ ಸ್ಪಷ್ಟನೆ ನೀಡಿರುವುದನ್ನು ಗಮನಿಸಿದರೆ, ಸೆಷನ್ಸ್ ಕೋರ್ಟ್ ಮುಂದೆ ರವಿ ಬೆಳಗೆರೆ ಅವರ ಅರ್ಜಿ ವಿಚಾರಣೆಗೆ ಬರುವ ವೇಳೆ ಬೇಕೆಂತಲೇ ವದಂತಿ ಹರಿಬಿಡಲಾಯಿತೇ ಎಂಬ ಪ್ರಶ್ನೆ ಮೂಡುತ್ತದೆ.

ಆರೋಗ್ಯ ಸ್ಥಿತಿ ನೋಡಿದರೆ ಬೇಸರ

ಆರೋಗ್ಯ ಸ್ಥಿತಿ ನೋಡಿದರೆ ಬೇಸರ

ಇನ್ನು ದುನಿಯಾ ವಿಜಿ ಸದ್ಯದ ಸ್ಥಿತಿ ಬಗ್ಗೆ ಮಾತನಾಡಿ, ರವಿ ಬೆಳಗೆರೆ ಅವರ ಆರೋಗ್ಯ ಸ್ಥಿತಿ ನೋಡಿದರೆ ಬೇಸರವಾಗುತ್ತದೆ. ಇನ್ನು ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಸುಪಾರಿ ಕೊಲೆಗೆ ಪ್ರಯತ್ನಿಸಿದ್ದರು ಎಂಬ ಈಗಿನ ಆರೋಪದ ಬಗ್ಗೆ ಅವರೇ ಉತ್ತರ ನೀಡುತ್ತಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪುಸ್ತಕದ ಅಂಶ ತಿರುಚಿದ್ದಾರೆ ಎಂಬ ಬೇಸರ

ಪುಸ್ತಕದ ಅಂಶ ತಿರುಚಿದ್ದಾರೆ ಎಂಬ ಬೇಸರ

ಭೀಮಾ ತೀರದಲ್ಲಿ ಎಂಬ ಸಿನಿಮಾ ಲೇಖಕ ರವಿ ಬೆಳಗೆರೆ ಬರೆದಿರುವ ಭೀಮಾ ತೀರದ ಹಂತಕರು ಪುಸ್ತಕದ ಸ್ಫೂರ್ತಿಯಿಂದ ಮೂಡಿ ಬಂದಿದ್ದು ಎಂಬುದು ಚಿತ್ರ ನಿರ್ದೇಶಕ ಓಂ ಪ್ರಕಾಶ್ ರಾವ್ ವಾದವಾಗಿತ್ತು. ಆದರೆ ಇಡೀ ಪುಸ್ತಕವನ್ನೇ ಸಿನಿಮಾಗೆ ಬಳಸಿಕೊಳ್ಳಲಾಗಿದೆ ಹಾಗೂ ಅದರಲ್ಲಿ ಕೆಲವು ಅಂಶ ತಿರುಚಿದ್ದಾರೆ ಮತ್ತು ಅದರ ಲೇಖಕನಾದ ನನಗೆ ಒಂದು ಮಾತು ಕೂಡ ಹೇಳಿಲ್ಲ ಎಂದು ಬೆಳಗೆರೆ ಅವರು ಬೇಸರ ವ್ಯಕ್ತಪಡಿಸಿದ್ದರು.

ಬುಧವಾರ ಬೆಳಗ್ಗೆಯಿಂದ ಚರ್ಚೆ

ಬುಧವಾರ ಬೆಳಗ್ಗೆಯಿಂದ ಚರ್ಚೆ

ಒಂದು ಮಾತು ಕೂಡ ಕೇಳದೆ ತಮ್ಮದೇ ಪುಸ್ತಕವೊಂದನ್ನು ಸಿನಿಮಾ ಮಾಡುತ್ತಿದ್ದಾರೆ ಎಂಬ ಸಿಟ್ಟಿನ ಕಾರಣಕ್ಕೆ ಅದರ ನಾಯಕ ನಟನಾಗಿದ್ದ ದುನಿಯಾ ವಿಜಿ ಅವರ ಮೇಲೆ ಹಲ್ಲೆ ನಡೆಸುವಂತೆ ಚಡಚಣದ ಗುಂಪೊಂದಕ್ಕೆ ರವಿ ಬೆಳಗೆರೆ ಸೂಚನೆ ನೀಡಿದ್ದರು ಎಂದು ಪತ್ರಕರ್ತ ಟಿ.ಕೆ.ಮಲಗೊಂಡ ಆರೋಪ ಮಾಡಿದ್ದಾರೆ ಎಂಬ ಸುದ್ದಿ ಬುಧವಾರದ ಬೆಳಗ್ಗೆಯಿಂದ ಮಾಧ್ಯಮಗಳಲ್ಲಿ ಚರ್ಚೆಯಾಯಿತು.

ಐದು ವರ್ಷದ ನಂತರ ಈಗೇಕೆ ಚರ್ಚೆ?

ಐದು ವರ್ಷದ ನಂತರ ಈಗೇಕೆ ಚರ್ಚೆ?

ಆದರೆ, ಆಶ್ಚರ್ಯ ಎಂಬಂತೆ ಟಿ.ಕೆ.ಮಲಗೊಂಡ ಅವರೇ "ನಾನು ಆ ರೀತಿ ಹೇಳಲೇ ಇಲ್ಲ" ಎಂಬ ಹೇಳಿಕೆಯನ್ನು ಮಾಧ್ಯಮಗಳೆದುರು ನೀಡಿದರು. ಇನ್ನು ನಟ ದುನಿಯಾ ವಿಜಿ, ಚಿತ್ರೀಕರಣ ಬಹಳ ಸುಸೂತ್ರವಾಗಿ ನಡೆಯಿತು. ಅಂಥ ಸೂಚನೆ ಮಲಗೊಂಡ ಅವರಿಗೆ ಗೊತ್ತಿದ್ದರೆ ಆಗ ನನಗೆ ಏಕೆ ತಿಳಿಸಲಿಲ್ಲ? ಮತ್ತು ಐದು ವರ್ಷಗಳ ನಂತರ ಏಕೆ ಈ ಸುದ್ದಿ ಚರ್ಚೆಗೆ ಬಂತು ಎನ್ನುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.

English summary
Journalist Ravi Belagere directs Chadachan gang to assault on Actor Duniya Vijay during Bheema Teeradalli Kannada cinema shooting in Vijayapura: Alleges TK Malagonda, This fake news roaming around from Wednesday morning. Finally Duniya Vjay and Malagonda Denies rumor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X