ದೇಶದೆಲ್ಲೆಡೆ ಮೇ 30ರಂದು ಮೆಡಿಕಲ್ ಶಾಪ್ ಬಂದ್
ಕೇಂದ್ರ ಸರ್ಕಾರದ ಆನ್ಲೈನ್ ಫಾರ್ಮಸಿ ಮೂಲಕ ಔಷಧಿ ಮಾರಾಟ ಮಾಡುವ ಕ್ರಮ ಖಂಡಿಸಿ ಔಷಧ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿರುವ ಒಂದು ದಿನ(ಮೇ 30, 2017)ದ ಮುಷ್ಕರಕ್ಕೆ ಕರ್ನಾಟಕದ ಔಷಧಿ ಮಾರಾಟಗಾರರ ಸಂಘ ಕೂಡಾ ಬೆಂಬಲ ವ್ಯಕ್ತಪಡಿಸಿದೆ.
ಬೆಂಗಳೂರು, ಮೇ 27: ಕೇಂದ್ರ ಸರ್ಕಾರದ ಆನ್ಲೈನ್ ಫಾರ್ಮಸಿ ಮೂಲಕ ಔಷಧಿ ಮಾರಾಟ ಮಾಡುವ ಕ್ರಮ ಖಂಡಿಸಿ ಔಷಧ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿರುವ ಒಂದು ದಿನ(ಮೇ 30, 2017)ದ ಮುಷ್ಕರಕ್ಕೆ ಕರ್ನಾಟಕದ ಔಷಧಿ ಮಾರಾಟಗಾರರ ಸಂಘ ಕೂಡಾ ಬೆಂಬಲ ವ್ಯಕ್ತಪಡಿಸಿದೆ. ಮುಷ್ಕರ ಏಕೆ? ಮುಷ್ಕರದ ದಿನ ಔಷಧಿ ಎಲ್ಲಿ ಸಿಗಲಿದೆ? ಎಂಬ ವಿವರಕ್ಕೆ ಮುಂದೆ ಓದಿ...
ಆನ್ಲೈನ್ ಔಷಧ ವ್ಯಾಪಾರವನ್ನು ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಮೇ 30ರಂದು ಟೌನ್ಹಾಲ್ ಮುಂಭಾಗ ಮುಷ್ಕರ ನಡೆಸಲಿದೆ ಎಂದು ಅಧ್ಯಕ್ಷ ಎಂ.ಕೆ. ಮೇದಪ್ಪ ತಿಳಿಸಿದರು.
ದೇಶಾದ್ಯಂತ 9 ಲಕ್ಷಕ್ಕೂ ಅಧಿಕ ಔಷಧ ವ್ಯಾಪಾರಸ್ಥರು, ಇದೇ ಉದ್ಯಮವನ್ನು ನಂಬಿ ಜೀವಿಸುತ್ತಿದ್ದಾರೆ. 50 ಲಕ್ಷಕ್ಕೂ ಹೆಚ್ಚಿನ ನೌಕರರು ಮತ್ತು 1.5 ಕೋಟಿ ಕುಟುಂಬದವರು ಅವಲಂಬಿತರಾಗಿದ್ದಾರೆ. ಇವರೆಲ್ಲರ ಉಳಿವಿಗಾಗಿ ಮಂಗಳವಾರ ಮಧ್ಯರಾತ್ರಿ 12.01ರಿಂದ ರಾತ್ರಿ 11.59ರವರೆಗೆ(24 ಗಂಟೆಗಳ ಕಾಲ) ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ ಬೆಳಗ್ಗೆ 10 ಗಂಟೆಗೆ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಮುಷ್ಕರ ಏಕೆ? ಏನು ಸಮಸ್ಯೆ?
ವೈದ್ಯರ ಸಲಹೆ ಇಲ್ಲದೆ ಔಷಧಗಳನ್ನು ಖರೀದಿಸುವಂತಿಲ್ಲ. ಆದರೆ, ಆನ್ಲೈನ್ ಮಾರಾಟದಲ್ಲಿ ಎಗ್ಗಿಲ್ಲದೆ ಔಷಧಗಳನ್ನು ಖರೀದಿಸಬಹುದಾಗಿದೆ. ಇದು ಮಾರಕವಾಗುತ್ತದೆ ಎಂಬುದು ಔಷಧ ವ್ಯಾಪಾರಿಗಳ ಅಭಿಪ್ರಾಯವಾಗಿದೆ. ಅಲ್ಲದೆ ಆನ್ಲೈನ್ ಮಾರಾಟಗಾರರು ಸಾಕಷ್ಟು ರಿಯಾಯಿತಿ ಘೋಷಿಸಿ ಮನಸೋ ಇಚ್ಛೆ ಬಂದಂತೆ ಔಷಧ ಮಾರಾಟ ಮಾಡುವುದರಿಂದ ಔಷಧ ಮಳಿಗೆಗಳು ಬಾಗಿಲು ಹಾಕಬೇಕಾಗುತ್ತದೆ.

ಮುಷ್ಕರದ ದಿನ ಔಷಧಿ ಎಲ್ಲಿ ಸಿಗುತ್ತದೆ?
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರುವ ಔಷಧಾಲಯಗಳು, ಜನೆರಿಕ್ ಔಷಧಾಲಯಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ. ಅದರೆ, ವೈದ್ಯರ ಸಲಹೆ, ಪ್ರಿಸ್ಕಿಪ್ಷನ್ ಇಲ್ಲದೆ ಔಷಧಿ ಸಿಗುವುದಿಲ್ಲ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಔಷಧಿ ದಾಸ್ತಾನು ಇಡುವಂತೆ ಸೂಚನೆ ನೀಡಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಸಗಟು ಔಷಧ ವ್ಯಾಪಾರ ಸ್ಥಗಿತ
ಆನ್ ಲೈನ್ ಮಾರಾಟದ ಭರಾಟೆಯಿಂದ ಚಿಲ್ಲರೆ, ಸಗಟು ಔಷಧ ವ್ಯಾಪಾರವನ್ನು ನಂಬಿಕೊಂಡು ಬದುಕುತ್ತಿರುವವರು ಬೀದಿಗೆ ಬೀಳಲಿದ್ದಾರೆ. ಈ ಕಾರಣದಿಂದ ಆನ್ಲೈನ್ ಔಷಧ ವ್ಯಾಪಾರವನ್ನು ಕೂಡಲೇ ನಿಲ್ಲಿಸಬೇಕು. ಇದಕ್ಕಾಗಿ ಒಂದು ದಿನ ಸಾಂಕೇತಿಕ ಮುಷ್ಕರ ನಡೆಸುತ್ತೇವೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಕಾನೂನು ಏನು ಹೇಳುತ್ತದೆ?
ಕೇಂದ್ರ ಸರ್ಕಾರದ ಡ್ರಗ್ಸ್ ಮತ್ತು ಕಾಸ್ಮೊಟಿಕ್ ಆಕ್ಟ್ 1940 ಸೆಕ್ಷನ್ 65(10) (ಎ) ರಂತೆ ಯಾವುದೇ ಔಷಧಿಯನ್ನು ವಿತರಣೆ ಮಾಡುವ ಮುನ್ನ ವೈದ್ಯರ ಸಲಹೆ ಚೀಟಿಯ ಮುಖಾಂತರ ನೋಂದಾಯಿತ ಅರ್ಹ ಔಷಧ ವ್ಯಕ್ತಿಯ ಮೂಲಕ ವಿತರಿಸಬೇಕೆಂದು ನಿಯಮವಿದೆ. ಸೆಕ್ಷನ್ 65 (ಬಿ) ಪ್ರಕಾರ ಗ್ರಾಹಕರ ಹೆಸರು ಹಾಗೂ ವಿಳಾಸ ಸರಿಯಾಗಿರಬೇಕಾಗುತ್ತದೆ. ಅದರೆ, ಆನ್ ಲೈನ್ ಮಾರಾಟದಿಂದ ಯಾವುದೇ ನಿಯಮ ಪಾಲನೆಯಾಗುವುದಿಲ್ಲ ಎಂದಿದ್ದಾರೆ.

ಭಾರತದಲ್ಲಿ ಕಾನೂನು ಬಿಗಿಯಾಗಿಲ್ಲ
ಭಾರತದಲ್ಲಿ ಕಾನೂನು ಬಿಗಿಯಾಗಿಲ್ಲ, ಯುಎಸ್, ಕೆನಡಾ, ಬ್ರಿಟನ್..ಇತ್ಯಾದಿ ದೇಶಗಳಲ್ಲಿ ಡ್ರಗ್ ಕಾನೂನು ಬಲವಾಗಿದೆ. ಇಲ್ಲಿ ಎಲ್ಲರ ಕೈಗೆ ಔಷಧಗಳು ಕೈಗೆಟಕುವುದರಿಂದ ಅಕ್ರಮಕ್ಕೆ
ಕಾರಣವಾಗಿದೆ. 2003ರಲ್ಲಿ ಮಷೆಲ್ಕರ್ ಸಮಿತಿ ವರದಿ ಸರಿಯಾಗಿ ಅನುಷ್ಠಾನವಾಗಿಲ್ಲ ಎಂದು ಮಾರಾಟಗಾರರು ದೂರಿದ್ದಾರೆ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?












Click it and Unblock the Notifications