Zameer Ahmed: ಸಿಎಂ ಬೆಂಕಿ ಇದ್ದಂತೆ ಮುಟ್ಟಿದ್ದರೆ ಭಸ್ಮ ಆಗ್ತೀರಾ- ಹೀಗಂದಿದ್ದು ಯಾಕೆ ಸಚಿವ ಜಮೀರ್?
ಬಳ್ಳಾರಿ ಫೆಬ್ರವರಿ 26: ಸಿಎಂ ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಅವರನ್ನು ಮುಟ್ಟಿದ್ರೆ ಭಸ್ಮ ಆಗ್ತಾರೆ ಎಂದು ಹಂಪಿಯಲ್ಲಿ ಸಿದ್ದರಾಮಯ್ಯ ಅವರ ಜಪ ಮಾಡಿದ್ದಾರೆ ಸಚಿವ ಜಮೀರ್ ಅಹ್ಮದ್. ಮುಖ್ಯಮಂತ್ರಿ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷರ ಸ್ಥಾನ ಖಾಲಿ ಇಲ್ಲ. ಹಾಗೇ ನೀವು ಸಿದ್ದರಾಮಯ್ಯ ಅವರನ್ನು ಟಚ್ ಮಾಡಲು ಆಗಲ್ಲ. ಒಂದು ವೇಳೆ ಮಾಡಿದ್ದರೆ ಸುಟ್ಟು ಹೋಗ್ತಾರೆ ಎಂದು ಸಿಎಂ ಪರ ಬ್ಯಾಟ್ ಬೀಸಿದ್ದಾರೆ ಜಮೀರ್ ಅಹ್ಮದ್.
ಇಂದು ಹಂಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಖುರ್ಚಿ ಮುಟ್ಟೋದಕ್ಕೆ ಸಾಧ್ಯನಾ? ಎಂದು ಪ್ರಶ್ನೆ ಮಾಡಿದ್ದಾರೆ. ಅದು ಒಂದು ರೀತಿ ಬೆಂಕಿ ಇದ್ದಂತೆ ಅದನ್ನು ಮುಟ್ಟಿದರೆ ಭಸ್ಮ ಆಗಿ ಹೋಗ್ತಾರೆ ಎಂದಿದ್ದಾರೆ. ಯಾರು ಸಿಎಂ ಖರ್ಚಿ ಖಾಲಿ ಮಾಡಿಸಲು ಬರ್ತಾರೋ ಅವರು ಸುಟ್ಟೋಗುತ್ತಾರೆ ಎಂದು ಜಮೀರ್ ಹೇಳಿದ್ದಾರೆ.

ಈಗಾಗಲೇ ಸಿಎಂ ಬದಲಾವಣೆಗೆ ಸಂಬಂಧಪಟ್ಟಂತೆ ಒಂದಿಷ್ಟು ಚರ್ಚೆಗಳು ರಾಜ್ಯ ರಾಜಕೀಯ ವಲಯದಲ್ಲಿ ಕಂಡು ಬರುತ್ತಿವೆ. ಪವರ್ ಶೇರಿಂಗ್ ಬಗ್ಗೆ ಕುಡ ಮಾತುಕತೆಗಳು ನಡೆಯುತ್ತಿವೆ. ಇದೆಲ್ಲದಕ್ಕೂ ಕೂಡ ಅನೇಕರು ಅನೇಕ ಹೇಳಿಕೆ ಕೊಡುತ್ತಿದ್ದಾರೆ. ನಾವು ಕೂಡ ಸಿಎಂ ರೇಸ್‌ನಲ್ಲಿ ಇದ್ದೇವೆ ಎಂದು ಹೇಳಿದ್ದಾರೆ.
ಇದೀಗ ಧಿಡೀರ್ ಅಂತ ಜಮೀರ್ ಅಹಮದ್ ಅವರು, ಸಿಎಂ ಖರ್ಚಿ ಖಾಲಿ ಇಲ್ಲ. ಅಧ್ಯಕ್ಷ ಸ್ಥಾನದಲ್ಲಿ ಡಿಕೆ ಶಿವಕುಮಾರ್ ಅವರು ಇದ್ದಾರೆ. ಖಾಲಿ ಇದ್ದರೆ ತಾನೆ ಚರ್ಚೆ. ಸ್ಥಾನ ಖಾಲಿ ಇಲ್ಲದೆ ಚರ್ಚೆ ಹೇಗೆ ಮಾಡಲಾಗುತ್ತದೆ. ಎಲ್ಲರಿಗೂ ಅವರವರ ಸಮುದಾಯದಲ್ಲಿ ಸಿಎಂ ಆಗಬೇಕು ಅನ್ನೋ ಆಸೆ ಇದ್ದೆ ಇರುತ್ತದೆ. ಆದರೆ ಖರ್ಚಿ ಖಾಲಿ ಇಲ್ಲ ಚರ್ಚೆ ಮಾಡಲು ಎಂದಿದ್ದಾರೆ.
ನಾವೆಲ್ಲಾ ಹೈಕಮಾಂಡ್ ಏನು ಹೇಳುತ್ತೋ ಅದಕ್ಕೆ ಬದ್ಧರಾಗಿದ್ದೇವೆ. ಸಿಎಂ ಸ್ಥಾನದ ಬಗ್ಗೆ ನಿರ್ಧಾರ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅವರು ಹೇಗೆ ಹೇಳ್ತಾರೋ ಹಾಗೆ ನಾವು ಕೇಳ್ತೀವಿ. ಹೈಕಮಾಂಡ್‌ಗೆ ನಾವು ಬದ್ಧರಾಗಿರುತ್ತೇವೆ. ನಮ್ಮದು ಶಿಸ್ತಿನ ಪಕ್ಷ ಎಂದಿದ್ದಾರೆ.
ಈ ಹಿಂದೆ ಜಮೀರ್ ಸಿದ್ದರಾಮಯ್ಯ ಟಗರು. ಅವರು ಗುಮ್ಮಿದ್ರೆ ಅಷ್ಟೇ ಎಂದು ಹೇಳ್ತಾಯಿದ್ದರು. ನಾವು ಅವರು ಸೇರಿದರೆ ಬಿರಿಯಾನಿ ಆಗೋದು ಅಂತೆಲ್ಲಾ ಹೇಳ್ತಾಯಿದ್ದರು. ಆದರೀಗ ಅವರು ಬೆಂಕಿ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿ ಇರುತ್ತಾರೆ. ಅವರು ಬದಲಾಗಲ್ಲಾ ಎಂದು ನೇರವಾಗಿ ಹೇಳಿದ್ದಾರೆ.
ನಮ್ಮ ಪಕ್ಷದವರು ಯಾರೂ ಕೂಡ ಸಿದ್ದರಾಮಯ್ಯ ಬದಲಾವಣೆ ಮಾಡಲಿ ಎಂದು ಹೇಳಿಲ್ಲ. ಎಲ್ಲಾ ಸಮಾಜಕ್ಕೂ ಸಿಎಂ ಆಗಬೇಕು ಅಂತ ಆಸೆ ಇರುತ್ತೆ. ಎಸ್ಸಿ, ಎಸ್ಟಿ, ದಲಿತ, ಅಲ್ಪಸಂಖ್ಯಾತ, ಲಿಂಗಾಯತ ಸಮುದಾಯ ಎಲ್ಲರೂ ಸಿಎಂ ಆಗಬೇಕು ಅಂತಾರೆ. ತೀರ್ಮಾನ ಹೈ ಕಮಾಂಡ್ ಗೆ ಬಿಟ್ಟಿದ್ದು ಎಂದಿದ್ದಾರೆ.












Click it and Unblock the Notifications