ಬಿಜೆಪಿಗೆ ಬಂದವರಿಗೆ ಯಡಿಯೂರಪ್ಪ ಅನ್ಯಾಯ ಮಾಡಿಲ್ಲ!

ಬಳ್ಳಾರಿ, ನವೆಂಬರ್ 19 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಯಾರಿಗೆ ಸಚಿವ ಸ್ಥಾನ ಸಿಗಲಿದೆ?, ಸಂಪುಟಕ್ಕೆ ಯಾರು ಸೇರಲಿದ್ದಾರೆ? ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಬಳ್ಳಾರಿಯಲ್ಲಿ ಗುರುವಾರ ಮಾತನಾಡಿದ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, "ಬಿಜೆಪಿಗೆ ಬಂದವರಿಗೆ ಯಡಿಯೂರಪ್ಪ ಅವರು ಅನ್ಯಾಯ ಮಾಡಿಲ್ಲ" ಎಂದು ಹೇಳಿದ್ದಾರೆ.

"ರಾಜೀನಾಮೆ ನೀಡಿದ 17 ಶಾಸಕರಿಗೆ ಬಿಜೆಪಿ ಬಿಫಾರಂ ನೀಡಿದೆ, ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಉಪ ಚುನಾವಣೆಯಲ್ಲಿ ಸೋತವರನ್ನು ಎಂಎಲ್‌ಸಿ ಮಾಡಿದ್ದಾರೆ. ಗೆದ್ದವರನ್ನು ಮಂತ್ರಿ ಮಾಡಿದ್ದಾರೆ" ಎಂದು ಎಸ್‌. ಟಿ. ಸೋಮಶೇಖರ್ ತಿಳಿಸಿದರು.

Yediyurappa Will Take Decision On Cabinet Expansion ST Somashekar

"ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳುವುದು ಯಡಿಯೂರಪ್ಪ ಅವರ ಪರಮಾಧಿಕಾರ. ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ" ಎಂದು ಸಚಿವರು ಹೇಳಿದರು.

"ನಾವೆಲ್ಲ ಈಗಲೂ ಒಂದೇ ಟೀಮ್ ಎರಡು ಟೀಮ್ ಆಗಿರುವ ಪ್ರಶ್ನೆಯೇ ಇಲ್ಲ. ಬಿಜೆಪಿ ಶಾಸಕರು ನಾವೆಲ್ಲರೂ ಒಂದೇ ಅವರು, ಇವರು ಅನ್ನೋದು ಏನೂ ಇಲ್ಲ. ಮತ್ತೆ ಶಾಸಕರನ್ನು ಕರೆತರುವ ಅವಶ್ಯಕತೆ ಇಲ್ಲ" ಎಂದು ಸೋಮಶೇಖರ್ ಸ್ಪಷ್ಟಪಡಿಸಿದರು.

ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಗೆದ್ದ ಮುನಿರತ್ನ, ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್, ಆರ್. ಶಂಕರ್ ಮತ್ತು ಎಂಟಿಬಿ ನಾಗರಾಜ್ ಬಿಜೆಪಿ ಸರ್ಕಾರ ರಚನೆಗೆ ಸಹಕಾರ ನೀಡಿದ್ದರು. ಇವರು ಸಚಿವರಾಗಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+