ಸಿ.ಡಿ ವಿಚಾರದಲ್ಲಿ ನಿಮ್ಮ ಪಾತ್ರ ಏನು?: ಡಿ.ಕೆ. ಶಿವಕುಮಾರ್‌ಗೆ ಈಶ್ವರಪ್ಪ ಪ್ರಶ್ನೆ
ಸಿ.ಡಿ ಪ್ರಕರಣದಲ್ಲಿ ನಿಮ್ಮ ಪಾತ್ರವೇನು ಎಂದು ಡಿ.ಕೆ.ಶಿವಕುಮಾರ್‌ಗೆ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಬಳ್ಳಾರಿ, ಫೆಬ್ರವರಿ, 01: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರದ್ದು ಎನ್ನಲಾದ ಆಡಿಯೋ ಬಿಡುಗಡೆ ಮಾಡಿ, ರಮೇಶ್ ಜಾರಕಿಹೊಳಿ ಅವರು ಡಿ.ಕೆ. ಶಿವಕುಮಾರ್ ವಿರುದ್ಧ ಹಲವು ಆರೋಪ ಮಾಡಿದ್ದಾರೆ. ಸಿಡಿ ಜಾಲಗಳಲ್ಲಿ ಡಿ.ಕೆ. ಶಿವಕುಮಾರ್ ಪಾತ್ರ ಕುರಿತು ಸಿಬಿಐ ತನಿಖೆ ಮಾಡುವಂತೆ ಜಾರಕಿಹೊಳಿ ಒತ್ತಾಯ ಮಾಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಬಳ್ಳಾರಿಯಲ್ಲಿ ಹೇಳಿದರು.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರು, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಪ್ರತಿಯೊಂದಕ್ಕೂ ಮೋದಿ, ಬೊಮ್ಮಾಯಿ ವಿರುದ್ಧ ಮಾತನಾಡುತ್ತಾರೆ. ಆದರೇ ಹೀಗ್ಯಾಕೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಬಾಯಿ ಬಿಡುತ್ತಿಲ್ಲ. ಹಾಗೇಯೇ ಇತರ ಕಾಂಗ್ರೆಸ್ ನಾಯಕರು ಬಾಯಿ ಬಿಡುತ್ತಿಲ್ಲ. ಸಿಡಿ ಕೇಸ್ ಕುರಿತು ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಲಿ. ಇಲ್ಲವಾದರೆ ಕಾಂಗ್ರೆಸ್ ಮರ್ಯಾದೆ ಹೋಗುತ್ತದೆ ಎಂದು ಹೇಳಿದರು.

ಸಿಡಿ ವಿಚಾರದಲ್ಲಿ ನಿಮ್ಮ ಪಾತ್ರ ತಿಳಿಸಿ
ಕಾಂಗ್ರೆಸ್ ಅಂದರೆ ಕೇವಲ ಡಿ.ಕೆ. ಶಿವಕುಮಾರ್- ಸಿದ್ದರಾಮಯ್ಯ ಕಟ್ಟಿದ ಪಕ್ಷವಲ್ಲ. ಸ್ವಾತಂತ್ರ‍್ಯ ಹೋರಾಟಗಾರರು ಕಟ್ಟಿದ ಪಕ್ಷ ಕಾಂಗ್ರೆಸ್. ಸಿಡಿ ವಿಚಾರದಲ್ಲಿ ನಿಮ್ಮ ಪಾತ್ರವನ್ನು ತಿಳಿಸಿ. ನೀವು ಕೂಡ ಸಿಬಿಐ ತನಿಖೆಗೆ ಒತ್ತಾಯ ಮಾಡಿ. ಇಲ್ಲವಾದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಈಶ್ವರಪ್ಪ ಒತ್ತಾಯಿಸಿದರು. ಇನ್ನು ರಮೇಶ್ ಜಾರಕಿಹೊಳಿ ಅವರ ಸಿಬಿಐ ತನಿಖೆಯ ಆಗ್ರಹದ ಕುರಿತು ಕುರಿತು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ನಿರ್ಧಾರ ಮಾಡುತ್ತಾರೆ. ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ್ದರು. ಕೋರ್ಟ್ ಪೊಲೀಸ್ ಇಲಾಖೆಯನ್ನು ದಾಖಲೆ ಕೇಳಿದೆ. ಅವರು ದಾಖಲೆ ಕೊಟ್ಟಿದ್ದಾರೆ. ಇದರಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಿ ಯಶಸ್ಸು ಆಗಬೇಕು ಎಂದುಕೊಂಡಿದ್ದರು. ಆದರೆ ಅದು ಆಗಲಿಲ್ಲ ಎಂದರು.
ಹಾಗೆಯೇ ಕೇಂದ್ರದಿಂದ ಪ್ರತಿ ಕ್ಷೇತ್ರದಲ್ಲಿ ಸರ್ವೇ ಮಾಡಲಾಗುತ್ತಿದೆ. ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯದ ಮೇಲೆ ಟಿಕೆಟ್ ನಿರ್ಧಾರ ಮಾಡಲಾಗುವುದು ಎಂದು ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಗರಂ
ಸಿದ್ದರಾಮಯ್ಯ ಕಣ್ ಸನ್ನೆ ಮಾಡಿದಾಗ ನಾನು ಕೆಲಸ ಮಾಡಿ ಕೊಟ್ಟಿದ್ದೇನೆ, ನಾನು ಕಣ್ ಸನ್ನೆ ಮಡಿದರೆ ಅವರು ಕೆಲಸ ಮಾಡಿಕೊಡುತ್ತಾರೆ. ನರೇಂದ್ರ ಮೋದಿಗೆ ಏನಾದರೂ ಬೈದರೆ ತಡೆದುಕೊಳ್ಳುವುದಿಲ್ಲ ನಾವು. ರಾಜ್ಯಾಧ್ಯಕ್ಷ ಕಟೀಲ್‌ಗೆ ಯಡಿಯೂರಪ್ಪನವರಿಗೆ ಏಕವಚನ ಬಳಿಸಿದರೆ ನಾವು ಸುಮ್ಮನಿರಲ್ಲ. ಬಫೂನ್ ಎನ್ನುವ ನೂರು ಪದಗಳು ನಮಗೆ ಬರುತ್ತವೆ. ಹಿಂಗೆ ಮುಂದುವರೆದರೆ ಕಾಂಗ್ರೆಸ್ ಸಂಸ್ಕೃತಿಯೂ ನಮಗೆ ಗೊತ್ತು ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.












Click it and Unblock the Notifications