ಬಳ್ಳಾರಿ ಜೀನ್ಸ್ ತಯಾರಿಕಾ ಘಟಕಕ್ಕೆ ತಟ್ಟಿದ ನೀರಿನ ಕೊರತೆ
ಬಳ್ಳಾರಿ, ಏಪ್ರಿಲ್ 15: ಬೇಸಿಗೆಯ ಬಿಸಿ ಜನರ ನೆತ್ತಿ ಸುಡುತ್ತಿದೆ. ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರು, ಕೈಗಾರಿಕೆಗಳಿಗೆ ನೀರಿನ ಕೊರತೆ ಎದುರಾಗಿದೆ. ಕರ್ನಾಟಕದಲ್ಲಿ ಜೀನ್ಸ್ ಬಟ್ಟೆಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಳ್ಳಾರಿಯಲ್ಲಿ ನೀರಿನ ಕೊರತೆ ಜೀನ್ಸ್ ಉದ್ಯಮದ ಮೇಲೆ ಪರಿಣಾಮವನ್ನು ಬೀರಿದೆ. ಸುಮಾರು 100 ಜೀನ್ಸ್ ತಯಾರಿಕಾ ಘಟಕಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿವೆ.
ಪ್ರತಿ ಬಾರಿಯ ಬೇಸಿಗೆಯಲ್ಲಿಯೂ ನೀರಿನ ಕೊರತೆ ಬಳ್ಳಾರಿಯ ಜೀನ್ಸ್ ಉದ್ಯಮದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. 10 ವರ್ಷಗಳಲ್ಲಿ ಕೈಗಾರಿಕೋದ್ಯಮಿಗಳು ಈ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಸಲ್ಲಿಕೆ ಮಾಡಿದ್ದಾರೆ. ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದು ಆರೋಪಿಸಲಾಗುತ್ತಿದೆ.

ನೀರಿನ ಕೊರತೆ ಕಾರಣ ಸುಮಾರು ನೂರು ಜೀನ್ಸ್ ತಯಾರಿಕಾ ಘಟಕಗಳನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ನೂರಾರು ಜನರು ನಿರುದ್ಯೋಗಿಗಳಾಗಿದ್ದಾರೆ. ಮಾರ್ಚ್‌ಗೆ ಹೋಲಿಕೆ ಮಾಡಿದರೆ ಏಪ್ರಿಲ್ ತಿಂಗಳಿನಲ್ಲಿ ನೀರಿನ ಕೊರತೆ ಇನ್ನಷ್ಟು ಹೆಚ್ಚಿದ್ದು, ತಯಾರಿಕಾ ಘಟಕ ಬಂದ್ ಮಾಡದೇ ಬೇರೆ ದಾರಿ ಇಲ್ಲ ಎಂದು ಮಾಲೀಕರು ಹೇಳುತ್ತಿದ್ದಾರೆ.
ಪ್ರತಿ ವರ್ಷ ಇದೇ ಸಮಸ್ಯೆ: ಕಳೆದ ವರ್ಷ ಜೀನ್ಸ್ ಉದ್ಯಮಕ್ಕೆ ನೀರಿನ ಕೊರತೆ, ವಿದ್ಯುತ್ ಕೊರತೆ ಕಾಡಿತ್ತು. ಆದರೆ ಈ ಬಾರಿ ವಿದ್ಯುತ್ ಪೂರೈಕೆಯಾಗುತ್ತಿದೆ. ಆದರೆ ನೀರಿನ ಕೊರತೆಯ ಕಾರಣ ಘಟಕಕ್ಕೆ ಬೀಗ ಹಾಕಬೇಕಿದೆ. ಉತ್ತಮ ಮಳೆಯಾಗಿ ಡ್ಯಾಂಗಳು ಭರ್ತಿಯಾಗಿದ್ದರೂ ಸಹ ಬಳ್ಳಾರಿಯಲ್ಲಿ ನೀರಿನ ಕೊರತೆ ಜೀನ್ಸ್ ತಯಾರಿಕಾ ಘಟಕಕ್ಕೆ ತೊಂದರೆ ಉಂಟು ಮಾಡಿದೆ.
ಜೀನ್ಸ್ ಉದ್ಯಮಿಗಳ ಪರವಾಗಿ ಹಲವಾರು ಬಾರಿ ನೀರಿನ ಕೊರತೆ ನಿವಾರಣೆ ಮಾಡುವಂತೆ ಮನವಿ ಮಾಡಲಾಗಿದೆ. ಆದರೆ ಪ್ರತಿ ವರ್ಷ ಬೇಸಿಗೆಯಲ್ಲಿ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಎಂದು ಜೀನ್ಸ್ ತಯಾರಿಕಾ ಘಟಕದವರು ಹೇಳುತ್ತಿದ್ದಾರೆ.
ಮಾರ್ಚ್ ತಿಂಗಳ ಅಂತ್ಯದಿಂದಲೇ ಹಲವು ಜೀನ್ಸ್ ತಯಾರಿಕಾ ಘಟಕದಲ್ಲಿ ನೀರಿನ ಕೊರತೆ ಉಂಟಾಗಿದೆ. ಕೆಲವು ಮಾಲೀಕರು ಟ್ಯಾಂಕರ್ ನೀರಿನ ಮೂಲಕ ಘಟಕವನ್ನು ನಡೆಸುತ್ತಿದ್ದರು. ಆದರೆ ಅದರ ವೆಚ್ಚ ಅಧಿಕವಾದ ಕಾರಣ ಈಗ ಘಟಕ ಮುಚ್ಚುವುದು ಅನಿವಾರ್ಯವಾಗಿದೆ. ಆದ್ದರಿಂದ ಸ್ಥಳೀಯ ಆಡಳಿತಕ್ಕೆ ಸಮರ್ಪಕವಾಗಿ ನೀರಿನ ಪೂರೈಕೆ ಮಾಡಿ ಎಂದು ಬೇಡಿಕೆ ಇಡುತ್ತಿದ್ದಾರೆ.
ಬಳ್ಳಾರಿ ಜಿಲ್ಲೆ ಭಾರತದ ಜೀನ್ಸ್ ರಾಜಧಾನಿಯಾಗಿದೆ. ಸುಮಾರು 732 ಘಟಕಗಳು ಜಿಲ್ಲೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಥಾಪನೆಯಾಗಿವೆ. ಕಳೆದ ಹತ್ತು ವರ್ಷಗಳಿಂದ ಪ್ರತಿ ಬೇಸಿಗೆಯಲ್ಲೂ ನೀರಿನ ಕೊರತೆ ಉಂಟಾಗುತ್ತಿದೆ, ಆದರೆ ಯಾವುದೇ ಪರಿಹಾರ ದೊರಕಿಲ್ಲ. ಕೈಗಾರಿಕಾ ಸಂಘ ಪುನಃ ಪುನಃ ಮನವಿಯನ್ನು ಮಾಡಿದರೂ ಸಹ ಆಡಳಿತ ನಡೆಸುವವರು, ರಾಜಕೀಯ ಪಕ್ಷಗಳ ನಾಯಕರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಘಟಕದಲ್ಲಿ ವಿಶೇಷವಾಗಿ ಜೀನ್ಸ್ ತೊಳೆಯುವ ಘಟಕಗಳಿಗೆ ಹೆಚ್ಚು ನೀರು ಬೇಕಾಗುತ್ತದೆ ಮತ್ತು ಆದರೆ ಟ್ಯಾಂಕರ್ ನೀರು ಪಡೆದು ಘಟಕ ನಿರ್ವಹಣೆ ಮಾಡುವವರು ಬೆಲೆಗಳನ್ನು ಶೇ 30-40 ರಷ್ಟು ಹೆಚ್ಚಿಸಿದ್ದಾರೆ. ಆದರೂ ಸಹ ಇದು ನಷ್ಟವಾಗುವ ಕಾರಣ ಘಟಕಗಳನ್ನು ಮುಚ್ಚಲಾಗುತ್ತಿದೆ.
ಮಾಹಿತಿಗಳ ಪ್ರಕಾರ 732 ಜೀನ್ಸ್ ತಯಾರಿಕಾ ಘಟಕಗಳು 15 ವಾಷಿಂಗ್ ಘಟಕಗಳ ಮೇಲೆ ಅವಲಂಬಿತವಾಗಿವೆ. ಜೀನ್ಸ್ ಉತ್ಪನ್ನಗಳನ್ನು ತೊಳೆಯಲು ಹೆಚ್ಚು ಹಣ ಖರ್ಚು ಮಾಡುವುದಕ್ಕಿಂತ, ಕೆಲವು ಮಾಲೀಕರು ತಮ್ಮ ಘಟಕಗಳನ್ನು 4-5 ತಿಂಗಳು ಮುಚ್ಚಿರುವುದೇ ಉತ್ತಮ ಎಂಬ ತೀರ್ಮಾನ ಕೈಗೊಂಡಿದ್ದಾರೆ. ಇದರಿಂದ ಬಹಳಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ.
ಕರ್ನಾಟಕ ಸರ್ಕಾರ ಉದ್ಯಮಕ್ಕೆ ನೆರವಾಗಲು ತುಂಗಭದ್ರಾ ಅಣೆಕಟ್ಟಿನಿಂದ ಪೈಪ್‌ಲೈನ್ ಮೂಲಕ ಕೈಗಾರಿಕೆಗೆ ನೀರು ನೀಡುವ ಯೋಜನೆ ರೂಪಿಸಲಿದೆ ಎಂದು ನಾವು ಭರವಸೆ ಹೊಂದಿದ್ದೇವೆ ಎಂದು ಉದ್ಯಮಿಗಳು ಹೇಳಿದ್ದಾರೆ.
-
7 Summer Kitchen Tips: ಬೇಸಿಗೆಯಲ್ಲಿ ಅಡುಗೆಮನೆ ತಂಪಾಗಿಡಲು 7 ಸುಲಭ ಸಲಹೆಗಳು -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ












Click it and Unblock the Notifications