ಅತ್ಯಂತ ವಿರಳವಾದ ಮೆದುಳಿನ ಶಸ್ತ್ರ ಚಿಕಿತ್ಸೆಯಲ್ಲಿ ವಿಮ್ಸ್ ವೈದ್ಯರು ಯಶಸ್ವಿ: ಬಾಲಕನಿಗೆ ಮರುಜೀವ

ಬಳ್ಳಾರಿ, ಜೂನ್‌ 08: ಉಸಿರಾಟ ಮತ್ತು ಹೃದಯ ಬಡಿತ ಕ್ರಿಯೆ ನಿಯಂತ್ರಿಸುವ ಬ್ರೈನ್ ಸ್ಟೆಮ್ ಬಳಿ ಮೆದುಳಿನ ದ್ರವದಿಂದ ಉಂಟಾದ ನೀರಿನ ಗುಳ್ಳೆ ರೂಪದ ಚೀಲ (cyst) ದಂತಹ ಅತೀ ವಿರಳ ಖಾಯಿಲೆಯಿಂದ ಬಳಲುತ್ತಿದ್ದ 5 ವರ್ಷದ ಬಾಲಕನಿಗೆ ವೈದ್ಯರ ಪರಿಶ್ರಮದಿಂದ ಮರುಜನ್ಮ ನೀಡಲಾಗಿದೆ.

ಮೆದುಳಿನ ಅರ್ಧ ಭಾಗದ ತಲೆ ಬುರುಡೆ ತೆರೆದು ಮೈಕ್ರೋಸ್ಕೋಪ್ ಮೂಲಕ ಸತತ ಮೂರು ಗಂಟೆಗಳ ಕಾಲ ಅತೀ ಕ್ಲಿಷ್ಟಕರ ಹಾಗೂ ಅತೀ ಸೂಕ್ಷ್ಮ ರೀತಿಯ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದ್ದು, ವಿಮ್ಸ್‌ನ ಮೆದುಳು ಮತ್ತು ನರರೋಗ ಶಸ್ತ್ರ ಚಿಕಿತ್ಸೆ ತಜ್ಞ (ನ್ಯೂರೋ ಸರ್ಜನ್) ಹಾಗೂ ವಿಮ್ಸ್‌ನ ನ್ಯೂರೋ ಸರ್ಜರಿ ವಿಭಾಗದ ಡಾ.ವಿಶ್ವನಾಥ ಅವರ ಸಾಧನೆ ವೈದ್ಯಕೀಯ ರಂಗವೇ ಹೆಮ್ಮೆ ಪಡುವ ಸಂಗತಿಯಾಗಿದೆ ಎಂದು ವಿಮ್ಸ್ ನಿರ್ದೇಶಕರು ತಿಳಿಸಿದ್ದಾರೆ.

Vims Doctors Succeed In Extremely Rare Brain Surgery

ವೈದ್ಯಕೀಯ ದಾಖಲಾತಿಗಳ ಸಂಗ್ರಹವಾದ ಪಬ್ ಮೆಡ್ (Pub Med) ಪ್ರಕಾರ ಜಗತ್ತಿನಲ್ಲೇ ಅತ್ಯಂತ ವಿರಳ ಚಿಕಿತ್ಸೆಯಲ್ಲಿ ಇದು ಎರಡನೇ ಶಸ್ತ್ರ ಚಿಕಿತ್ಸೆಯಾಗಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ವಿಮ್ಸ್ ನಿರ್ದೇಶಕರು ಅತೀ ವಿರಳವಾದ ಈ ಖಾಯಿಲೆಯಿಂದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾರ ನಗರದ 5 ವರ್ಷದ ಬಾಲಕ ಹುಟ್ಟಿನಿಂದಲೇ ಬಳಲುತ್ತಿದ್ದು, ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ನಿಯಂತ್ರಣ ತಪ್ಪಿ ಬೀಳುತ್ತಿದ್ದ. ಇದನ್ನು ಗಮನಿಸಿದ ಪೋಷಕರು ಸ್ಥಳೀಯ ವೈದ್ಯರ ಬಳಿ ತಪಾಸಣೆಗೊಳಪಡಿಸಿದಾಗ ಮಗುವಿಗೆ ಅತೀ ವಿರಳ ಖಾಯಿಲೆ ಇದ್ದು, ನರರೋಗ ತಜ್ಞ ವೈದ್ಯರ ಬಳಿ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಸಲಹೆ ನೀಡಲಾಗಿತ್ತು.

ಬೆಂಗಳೂರಿನ ನಿಮಾನ್ಸ್, ಇಂದಿರಾಗಾಂಧಿ ಆಸ್ಪತ್ರೆಗೆ ಬಂದು ತಪಾಸಣೆಗೊಳಪಟ್ಟು, ಶೀರ್ಘವಾಗಿ ಚಿಕಿತ್ಸೆಗೆ ದಿನಾಂಕ ನಿಗದಿಯಾಗದ ಹಿನ್ನಲೆಯಲ್ಲಿ ವಿಮ್‍ನಲ್ಲಿ ತಪಾಸಣೆಗೊಳಗಾಗಿದ್ದರು. ಎಂಆರ್‍ಐ ಪರೀಕ್ಷೆಯಿಂದ ಅತೀ ವಿರಳ ಖಾಯಿಲೆ ಇರುವುದನ್ನು ಖಚಿತಪಡಿಸಿಕೊಂಡ ಡಾ.ವಿಶ್ವನಾಥ್ ಅವರು ಬಾಲಕನನ್ನು ಮೇ 08ರಂದು ದಾಖಲು ಮಾಡಿಕೊಂಡು ಪಾಲಕರೊಂದಿಗೆ ಆಪ್ತ ಸಮಾಲೋಚಲನೆ ನಡೆಸಿದ್ದರು.

ಪೋಷಕರ ಸಮ್ಮತಿಯ ಮೇರೆಗೆ ಮೇ 12 ರಂದು ಡಾ.ವಿಶ್ವನಾಥ ಅವರು ಸತತ ಮೂರು ಗಂಟೆಗಳ ಅವಧಿಯ ಶಸ್ತ್ರ ಚಿಕಿತ್ಸೆಯನ್ನು ವಿಮ್ಸ್‍ನ ಅಧೀನದಲ್ಲಿರುವ ಟ್ರಾಮಾ ಕೇರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೈಗೊಂಡಿದ್ದರು ಎಂದು ವಿಮ್ಸ್ ನಿರ್ದೇಶಕರು ತಿಳಿಸಿದ್ದಾರೆ.

ಈ ಮಗುವಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿ ನಂತರ ನಿರಂತರ ತಪಾಸಣೆ ಔಷದೋಪಚಾರ ನೀಡಲಾಗಿದೆ. ಮಗು ಸಹಜ ಚಟುವಟಿಕೆಗಳ ಕಂಡುಬಂದಿದ್ದು, ಯಾವುದೇ ನ್ಯೂನತೆಗಳನ್ನು ಇರುವುದಿಲ್ಲ. ಸ್ವತಂತ್ರವಾಗಿ ಆಹಾರ ಸೇವನೆ, ಚಲನೆ ಮಾಡುತ್ತಿದ್ದಾನೆ. ಇಂತಹ ಅತೀ ವಿರಳ ಶಸ್ತ್ರ ಚಿಕಿತ್ಸೆ ಉಚಿತವಾಗಿ ಕೈಗೊಂಡು, ಮಗುವು ಸಹಜತೆಯತ್ತ ಮಾಡುವಂತೆ ಪರಿಶ್ರಮ ಪಟ್ಟ ಡಾ.ವಿಶ್ವನಾಥ ಮತ್ತು ಅವರ ತಂಡ ಹಾಗೂ ವಿಮ್ಸ್‌ಗೆ ಬಾಲಕನ ಪೋಷಕರಾದ ನಾಗೇಶ್ ಮತ್ತು ಪಾರ್ವತಿ ಕೃತಜ್ಞತೆ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆಯಲ್ಲಿ ಡಾ.ವಿಶ್ವನಾಥ್ ಅವರೊಂದಿಗೆ ಡಾ.ಬಸವರಾಜ್ ಪಾಟೀಲ್, ಡಾ.ಚಂದ್ರಕುಮಾರ್, ಅರವಳಿಕೆ ತಜ್ಞ ಡಾ.ಶ್ರೀನಿವಾಸುಲು, ಶುಶ್ರೂಷಕಿರಾದ ಸಿಜ್ಜು, ನ್ಯಾನ್ಸಿ ಪಾಲ್ಗೊಂಡಿದ್ದರು.

ವಿಮ್ಸ್‍ನ ಮೆದುಳು ಮತ್ತು ನರರೋಗ ಶಸ್ತ್ರ ಚಿಕಿತ್ಸೆ ತಜ್ಞ (ನ್ಯೂರೋ ಸರ್ಜನ್) ಹಾಗೂ ವಿಮ್ಸ್‍ನ ನ್ಯೂರೋ ಸರ್ಜರಿ ವಿಭಾಗದ ಡಾ.ಎಸ್.ವಿಶ್ವನಾಥ ಅವರು ಮೆದುಳು ಹಾಗೂ ನರರೋಗಗಳಿಗೆ ಸಂಬಂಧಿಸಿದ ಅನೇಕ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಗಳನ್ನು ಕೈಗೊಂಡು ವಿಮ್ಸ್‌ಗೆ ಕೀರ್ತಿ ತಂದಿದ್ದಾರೆ. ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ಕೈಗೊಂಡು ಸಾಧನೆಗೈದ ಡಾ.ವಿಶ್ವನಾಥ್ ಮತ್ತು ತಂಡಕ್ಕೆ ವಿಮ್ಸ್‍ನ ನಿರ್ದೇಶಕರಾದ ಡಾ.ಗಂಗಾಧರ ಗೌಡ, ಟ್ರಾಮಾ ಕೇರ್‍ನ ಅಧೀಕ್ಷಕರಾದ ಡಾ.ಶಿವನಾಯ್ಕ ಅಭಿನಂದಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+