ಐತಿಹಾಸಿಕ ಹಂಪಿಯಲ್ಲಿ ಕೋಟೆ ಅರಮನೆ ಗೋಡೆ ಕುಸಿತ: ಶ್ರೀಕೃಷ್ಣದೇವರಾಯ ಭೇಟಿ
ವಿಜಯನಗರ, ಮಾರ್ಚ್ 13: ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಹಂಪಿಯ ಕಮಲ ಮಹಲ್ ಬಳಿ ಇರುವ ಕೃಷ್ಣದೇವರಾಯನ ಅಳಿಯ ರಾಮರಾಯನ ಕೋಟೆ ಅರಮನೆ ಗೋಡೆ ಕುಸಿತಗೊಂಡಿದೆ.
ಹಂಪಿಯ ಅರಮನೆ ಗೋಡೆ ಕುಸಿತಗೊಂಡ ಹಿನ್ನೆಲೆಯಲ್ಲಿ ಸುದ್ದಿ ತಿಳಿಯುತ್ತಿದ್ದಂತೆಯೇ ದಿಢೀರೆಂದು ರಾಜವಂಶಸ್ಥರಾದ ಶ್ರೀಕೃಷ್ಣದೇವರಾಯ ಭೇಟಿ ನೀಡಿದರು.
ರಾಜವಂಶಸ್ಥ ಶ್ರೀಕೃಷ್ಣದೇವರಾಯ ಬಿದ್ದ ಸ್ಮಾರಕಗಳನ್ನು ಸುತ್ತಾಡಿ ವೀಕ್ಷಣೆ ಮಾಡಿ, ಪರಿಶೀಲಿಸಿದರು. ಹೊರ ಭಾಗ ಕುಸಿದಿದ್ದರಿಂದ ಸ್ಮಾರಕಗಳಿಗೆ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಹೇಳಲಾಗಿದೆ.

ಅರಮನೆಯ ಒಳಭಾಗದಲ್ಲಿ ಕುಸಿದಿದ್ದರೆ ಮತ್ತಷ್ಟು ಸ್ಮಾರಕಗಳಿಗೆ ಹಾನಿಯಾಗುತ್ತಿತ್ತು. ಅಲ್ಲದೆ ಕಮಲ್ ಮಹಲ್ ಬಳಿ ಶೌಚಾಲಯ ಕಾಮಗಾರಿ ನಡೆಯುತ್ತಿತ್ತು. ಇಲ್ಲಿಗೆ ಬಂದ ಭಾರೀ ವಾಹನಗಳ ವೈಬ್ರೈಟ್‌ನಿಂದ ಗೋಡೆ ಕುಸಿದಿರಬಹುದು ಎಂದು ಅಂದಾಜಿಸಲಾಗಿದೆ.

ಬೇರೆ ಬೇರೆ ಸ್ಮಾರಕಗಳು ಉರುಳಿ ಬೀಳುವ ಮುನ್ನ ರಕ್ಷಣೆಗೆ ಮುಂದಾಗಬೇಕಿದೆ ಎಂದು ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗೆ ಶ್ರೀಕೃಷ್ಣದೇವರಾಯ ವಂಶಸ್ಥರಾದ ಕೃಷ್ಣದೇವರಾಯ ಆಗ್ರಹಿಸಿದರು.












Click it and Unblock the Notifications