• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನಂದ್ ಸಿಂಗ್‌ರನ್ನು ಡಿಸಿಎಂ ಮಾಡುವಂತೆ ಅಭಿಮಾನಿಗಳ ಕ್ಯಾಂಪೇನ್

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಜುಲೈ 27: ಮಾಜಿ ಸಚಿವ ಹಾಗೂ ವಿಜಯನಗರ ಬಿಜೆಪಿ ಶಾಸಕ ಆನಂದ್ ಸಿಂಗ್‌ರನ್ನು ಉಪ ಮುಖ್ಯಮಂತ್ರಿ ಮಾಡಬೇಕಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕ್ಯಾಂಪೇನ್ ಮಾಡುತ್ತಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ಶಾಸಕ ಆನಂದ್ ಸಿಂಗ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಉಪ ಮುಖ್ಯಮಂತ್ರಿ ಮಾಡಬೇಕೆಂದು ಅಭಿಮಾನಿಗಳು ಫುಲ್ ವೈರಲ್ ಮಾಡುತ್ತಿದ್ದಾರೆ. ಅತ್ತ ಕಡೆ ಮುಂಖ್ಯಮಂತ್ರಿ ಸ್ಥಾನಕ್ಕೆ‌ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಸಲ್ಲಿಸುತ್ತಿದ್ದಂತೆಯೇ, ಇತ್ತ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆನಂದ್ ಸಿಂಗ್‌ರನ್ನು ಡಿಸಿಎಂ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಹಾವೇರಿ ಜಿಲ್ಲೆಗೆ ಒಲಿದು ಬರಲಿದೆಯಾ ಸಿಎಂ ಕುರ್ಚಿ? ರೇಸ್‌ನಲ್ಲಿ ಯಾರು?ಹಾವೇರಿ ಜಿಲ್ಲೆಗೆ ಒಲಿದು ಬರಲಿದೆಯಾ ಸಿಎಂ ಕುರ್ಚಿ? ರೇಸ್‌ನಲ್ಲಿ ಯಾರು?

ಇಷ್ಟು ದಿನ‌ ಬಿ. ಶ್ರೀರಾಮುಲುರನ್ನು ಡಿಸಿಎಂ ಮಾಡಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಆದರೆ ಇದೀಗ ಆನಂದ್ ಸಿಂಗ್‌ ಸರದಿ ಬಂದಿದೆ. ರಾಜ್ಯದಲ್ಲಿಂದು ಬಿಜೆಪಿ ಸರ್ಕಾರ ಬರುವುದಕ್ಕೆ ಕಾರಣ ಆನಂದ್ ಸಿಂಗ್ ಕೂಡಾ ಒಬ್ಬರಾಗಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳುತ್ತಾರೆ.

ಅಂದಿನ‌ ಮೈತ್ರಿ ಸರ್ಕಾರ ಪತನವಾಗುವುದಕ್ಕೆ ಆನಂದ್ ಸಿಂಗ್‌ರವರ ರಾಜೀನಾಮೆಯೇ ಕಾರಣ, ಹಾಗಾಗಿ ಅವರ ತ್ಯಾಗದಿಂದ ಇವತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದು ಅಭಿಮಾನಿಗಳು ಪೋಸ್ಟ್‌ಗಳನ್ನು ಹಾಕಿಕೊಂಡಿದ್ದಾರೆ.

Vijayanagara: Fans Campaign In Social Media To Make Anand Singh DCM

ಇಷ್ಟೆಲ್ಲ ಅಧಿಕಾರವನ್ನು ತ್ಯಾಗ ಮಾಡಿದರೂ ಆನಂದ ಸಿಂಗ್‌ರಿಗೆ ಕನಿಷ್ಠ ದರ್ಜೆ ಖಾತೆಯನ್ನು ನೀಡಿ ಸಮಾಧಾನ ಪಡಿಸಿದರು. ಆರಂಭದಲ್ಲಿ ಅರಣ್ಯ ಖಾತೆ ನೀಡಲಾಯಿತು. ನಂತರ ಕೆಲ ದಿನಗಳಲ್ಲಿಯೇ ಅದನ್ನೂ ಬದಲಾವಣೆ ಮಾಡಲಾಯಿತು. ಜೊತೆಗೆ ಒಂದೇ ದಿನ ಮೂರು ಖಾತೆ ಬದಲಾವಣೆ ಮಾಡಿದರು. ಹಾಗಾಗಿ ಅವರಿಗೆ ಈಗಲಾದರೂ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು,'' ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ಮಾಡುತ್ತಿದ್ದಾರೆ.

English summary
Fans are campaigning in the social networking site to make BJP MLA Anand Singh deputy chief minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X