ಮೊದಲ ಆರಾಧನೆಯ ಅವಕಾಶ ಯಾರಿಗೆ? ಮಂತ್ರಾಲಯ ಮಠಕ್ಕೆ ಮೇಲುಗೈ
ಬೆಂಗಳೂರು, ಡಿ; 4: ಕೊಪ್ಪಳ ಜಿಲ್ಲೆ, ಆನೆಗೊಂದಿಯಲ್ಲಿರುವ ನವವೃಂದಾವನ ಗಡ್ಡೆಯ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆ ಮುಗಿಯುವವರೆಗೆ, ಮೊದಲ ಪೂಜೆಗೆ ನಮಗೇ ಅವಕಾಶ ನೀಡಬೇಕು ಎನ್ನುವ ಮಂತ್ರಾಲಯ ಮಠದ ಆರ್ ಎಸ್ ಎ (Regular second appeal) ಕೈಗೆತ್ತೆಕೊಂಡ ಕೋರ್ಟ್, ಸುದೀರ್ಘ ವಾದಮಂಡನೆಯನ್ನು ಆಲಿಸಿ, ತೀರ್ಪು ನೀಡಿದೆ.
ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ಮೊದಲ ಆರಾಧನೆಯ ಅವಕಾಶವನ್ನು ಮಂತ್ರಾಲಯ ಮಠಕ್ಕೆ ನೀಡಿದೆ. ಆ ಮೂಲಕ, ಉತ್ತರಾದಿ ಮಠ ಹಿನ್ನಡೆಯನ್ನು ಅನುಭವಿಸಿದೆ.
ಆಚಾರ್ಯ ಮಧ್ವರ ಮೊದಲ ಶಿಷ್ಯ ಪದ್ಮನಾಭ ತೀರ್ಥರ ಮೂರು ದಿನಗಳ ಆರಾಧನಾ ಮಹೋತ್ಸವ, ಬುಧವಾರದಿಂದ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಮೊದಲ ಆರಾಧನೆಯ ಅವಕಾಶವನ್ನು ರಾಘವೇಂದ್ರ ಮಠಕ್ಕೆ ನೀಡಬೇಕೆಂದು, ಮಂತ್ರಾಲಯ ಮಠ, ಹೈಕೋರ್ಟ್ ಮೊರೆ ಹೋಗಿತ್ತು.

ಈ ಸಂಬಂಧ, ಎರಡೂ ಮಠಗಳ ವಾದವನ್ನು ಆಲಿಸಿದ ನ್ಯಾ. ದೀಕ್ಷಿತ್, ಡಿಸೆಂಬರ್ 5ರಿಂದ, ಡಿ.6 ಮಧ್ಯಾಹ್ನ ಮೂರು ಗಂಟೆಯವರೆಗೆ, ನಂತರ ಅಂದರೆ ಡಿ. 6 ಮಧ್ಯಾಹ್ನ ಮೂರು ಗಂಟೆಯ ನಂತರ, ಡಿ 7 ಸಂಜೆಯ ವರೆಗೆ ಉತ್ತರಾದಿ ಮಠಕ್ಕೆ ಆರಾಧನೆ ನಡೆಸಲು, ಹೈಕೋರ್ಟ್ ಸೂಚಿಸಿದೆ.
ಕಳೆದ ವರ್ಷ, ನವೆಂಬರ್ 16 ರಿಂದ 18ರವರೆಗೆ ಪದ್ಮನಾಭ ತೀರ್ಥ ಆರಾಧನೆಯನ್ನು, ಎರಡೂ ಮಠದವರು ತಲಾ ಒಂದೂವರೆ ದಿನದಂತೆ ಆರಾಧನೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಮೊದಲ, ಒಂದೂವರೆ ದಿನ ಉತ್ತರಾದಿ ಮಠ, ನಂತರ ಮಂತ್ರಾಲಯ ಮಠ ಆರಾಧನೆಯನ್ನು ಮಾಡಿತ್ತು.












Click it and Unblock the Notifications