ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಂಗಭದ್ರಾ ಜಲಾಶಯದ ಗೇಟ್ ಓಪನ್: 4539 ಕ್ಯೂಸೆಕ್ ನೀರು ಬಿಡುಗಡೆ

By ಜ್ಯೋತಿ ದೇವಾಂಗಮಠ
|
Google Oneindia Kannada News

ಬಳ್ಳಾರಿ, ಆಗಸ್ಟ್ 17: ಗಣಿನಾಡು ಬಳ್ಳಾರಿ ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಮೂರು ಕ್ರಸ್ಟ್ ಗೇಟ್ ನಿಂದ ಭಾನುವಾರ ಸಂಜೆ 7 ಗಂಟೆಗೆ ಅಂದಾಜು 4539 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಯಿತು.

ಸದ್ಯ ತುಂಗಭದ್ರಾ ಜಲಾಶಯದಲ್ಲಿ 1632.20 ಅಡಿಯಷ್ಟು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೇವಲ ಅರ್ಧ ಅಡಿ ಅಷ್ಟೇ ಬಾಕಿಯಿದೆ. 33, 737 ಕ್ಯೂಸೆಕ್ ನಷ್ಟು ನೀರು ಈ ಜಲಾಶಯಕ್ಕೆ ಹರಿದು ಬರುತ್ತಿದೆ.

ಭರ್ತಿ ಹಂತಕ್ಕೆ ನವಿಲು ತೀರ್ಥ ಜಲಾಶಯ; 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆಭರ್ತಿ ಹಂತಕ್ಕೆ ನವಿಲು ತೀರ್ಥ ಜಲಾಶಯ; 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ

Tungabhadra Reservoir Gate Open: 4539 Cusec Water Released To River

ಭಾನುವಾರ ಸಂಜೆ ಜಲಾಶಯದಿಂದ ಮೂರು ಕ್ರಸ್ಟ್ ಗೇಟ್ ಮೂಲಕ ಸುಮಾರು 1513 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಯಿತು. ಒಟ್ಟಾರೆಯಾಗಿ 6533 ಕ್ಯೂಸೆಕ್ ನೀರನ್ನು ಹರಿಬಿಡಲು ನಿರ್ಧರಿಸಲಾಗಿದೆ. ಹೀಗಾಗಿ, ನದಿ ಪಾತ್ರದ ಜನರು-ಜಾನುವಾರಗಳು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಲಾಶಯ ಮಂಡಳಿ ಕೋರಿದೆ.

English summary
An estimated 4539 cusecs of water were flowed into the river on Sunday evening from the three crust gates of the Tungabhadra Reservoir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X