ಕೂಡ್ಲಿಗೆ; ಸಾವಿಗೆ ಹೊರಟವರೇ ಅಪಘಾತದಲ್ಲಿ ಹೆಣವಾಗಿಬಿಟ್ಟರು
ಬಳ್ಳಾರಿ, ಫೆಬ್ರವರಿ ೦3: ತಂದೆಯ ಸಾವಿಗೆ ಹೊರಟಿದ್ದವರೇ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಇಂದು ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಹೊರವಲಯದ ವಿರುಪಾಪುರ ಗ್ರಾಮದ ಬಳಿ ಇಂದು ಬೆಳಿಗ್ಗೆ ಕಾರು - ಟಿಪ್ಪರ್ ಲಾರಿಯೊಂದು ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದವರಾದ ವಸಂತ ಕುಮಾರ್ ಮಡಿಕೇರಿಯ ಮೂರ್ನಾಡುನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಳಕಲ್ ನಲ್ಲಿ ತಮ್ಮ ತಂದೆಯ ಶವಸಂಸ್ಕಾರಕ್ಕೆ ಇಂದು ತೆರಳುವಾಗ ಈ ಘಟನೆ ನಡೆದಿದೆ. ಕಾರ್ ಚಾಲಕ ರವಿ (38) ವಸಂತ ಕುಮಾರ (37), ಅವರ ಪತ್ನಿ ವಿನುತಾ (30) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಮಗಳು ರುತ್ವಿಕಾ (2) ಕೂಡ ಕಾರಿನಲ್ಲಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕೂಡ್ಲಿಗಿ ಪಟ್ಟಣದ ಅಂಬೇಡ್ಕರ್ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಕ್ಯಾಸನ ಕೆರೆ ಗ್ರಾಮದಿಂದ ಹೊರಟಿದ್ದ ಶೀಕ್ಷಕಿಯೊಬ್ಬರು ಘಟನಾ ಸ್ಥಳದಲ್ಲಿ ಅಪಘಾತದಲ್ಲಿ ಹೆತ್ತ ತಂದೆ ತಾಯಿಯನ್ನು ಕಳೆದುಕೊಂಡು ರೋದಿಸುತ್ತಿದ್ದ ರುತ್ವಿಕಾಳನ್ನು ಆಸ್ಪತ್ರೆಗೆ ಕರೆತಂದು ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.











Click it and Unblock the Notifications