Actor Darshan: ಜಾಮೀನು ಸಿಗುವ ಮೊದಲೇ ದರ್ಶನ್ ಬೆಂಗಳೂರಿಗೆ ಶಿಫ್ಟ್?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗೆ ಜಾಮೀನು ಸಿಗುತ್ತಾ ಇಲ್ಲವಾ ಎನ್ನುವ ಕುತೂಹಲಕ್ಕೆ ಅಕ್ಟೋಬರ್ 14ರಂದು ತೆರೆಬೀಳಲಿದೆ. ವಾದ ಪ್ರತಿವಾದ ಆಲಿಸಿರುವ 57ನೇ ಸೆಷನ್ ಕೋರ್ಟ್ ಸೋಮವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿದೆ. ಜಾಮೀನು ಸಿಗಲಿ ಎಂದು ದರ್ಶನ್ ಅಭಿಮಾನಿಗಳು ಮತ್ತು ಕುಟುಂಬಸ್ಥರು ಪ್ರಾರ್ಥನೆ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ದರ್ಶನ್ ಆರೋಗ್ಯದ ಬಗ್ಗೆ ಚಿಂತೆ ಕಾಡುತ್ತಿದ್ದು, ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ.
ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಇದ್ದಾಗಿನಿಂದಲೂ ಬೆನ್ನು ನೋವಿನಿಂದ ಬಳಲುತ್ತಿದ್ದರು. ಇದೀಗ ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಬೆನ್ನು ನೋವು ಸಮಸ್ಯೆ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ಆರ್ಥೋಪೆಡಿಕ್ ತಜ್ಞವೈದ್ಯರು ತಪಾಸಣೆ ನಡೆಸಿದ್ದು, ಹೆಚ್ಚುವರಿಯಾಗಿ ನ್ಯೂರೋ ಸರ್ಜನ್ ಕೂಡ ತಪಾಸಣೆ ನಡೆಸುತ್ತಿದ್ದಾರೆ.

ಕಳೆದ ವಾರ ಆರ್ಥೋಪೆಡಿಕ್ ವೈದ್ಯರು ತಪಾಸಣೆ ಮಾಡಿದ್ದು ವರದಿ ಕೊಟ್ಟಿದ್ದರು. ದರ್ಶನ್‌ಗೆ ಬೆನ್ನು ನೋವು ಕಡಿಮೆಯಾಗದ ಹಿನ್ನಲೆಯಲ್ಲಿ ನ್ಯೂರೋ ಸರ್ಜನ್‌ರಿಂದ ದರ್ಶನ್‌ರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ನ್ಯೂರೋ ಸರ್ಜನ್ ದರ್ಶನ್‌ರನ್ನು ತಪಾಸಣೆ ಮಾಡಿದ ಬಳಿಕ ಜೈಲಿನ ಅಧಿಕಾರಿಗಳಿಗೆ ವೈದ್ಯಕೀಯ ವರದಿ ಸಿಗಲಿದೆ.
ನ್ಯೂರೋ ಸರ್ಜನ್ ವರದಿ ಕೊಟ್ಟ ಬಳಿಕ ಅರ್ಥೋಪೆಡಿಕ್ ವೈದ್ಯರು ದರ್ಶನ್ ಬೆನ್ನು ನೋವಿನ ಸ್ಥಿತಿ ಬಗ್ಗೆ ಸಂಪೂರ್ಣ ವರದಿ ಕೊಡಲಿದ್ದಾರೆ. ವೈದ್ಯರು ನೀಡಿವ ವರದಿಯ ಆಧಾರದ ಮೇಲೆ ದರ್ಶನ್‌ರನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ.
ವೈದ್ಯರ ನೀಡಿದ ವರದಿಯನ್ನು ಕೋರ್ಟ್‌ಗೆ ನೀಡಿ, ಕೋರ್ಟ್ ಅನುಮತಿ ನೀಡಿದ ಬಳಿಕ ಹೆಚ್ಚುವರಿ ಸ್ಕ್ಯಾನಿಂಗ್, ಚಿಕಿತ್ಸೆ ಅಥವಾ ಸರ್ಜರಿಗಾಗಿ ಬೆಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಇದ್ದರೆ, ಕೋರ್ಟ್ ಅನುಮತಿ ನೀಡುವ ಸಾಧ್ಯತೆ ಇದೆ.
ದರ್ಶನ್‌ಗೆ ಜಾಮೀನು?
ದರ್ಶನ್ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಾಡಿದ್ದು, ಚಾರ್ಜ್‌ಶೀಟ್‌ನಲ್ಲಿನ ಲೋಪದೋಷಗಳನ್ನು ಪಟ್ಟಿಮಾಡಿ, ಪೊಲೀಸರ ತನಿಖೆಯಲ್ಲಿ ಲೋಪವಿದೆ ಎಂದು ಹೇಳಿದ್ದಾರೆ. ನಾಗೇಶ್‌ರ ವಾದವನ್ನು ಕೇಳಿರುವ ದರ್ಶನ್ ಕುಟುಂಬಸ್ಥರು ಮತ್ತು ಅಭಿಮಾನಿಗಳು ಜಾಮೀನು ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ.
ವಿಮ್ಸ್ ಆಸ್ಪತ್ರೆಯಲ್ಲಿ ಎಕ್ಸ್‌ರೇ ತೆಗೆಸಿಕೊಳ್ಳಲು ನಿರಾಕರಿಸಿದ್ದು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುವುದಾಗಿ ತಿಳಿಸಿದ್ದಾರೆ. 10 ದಿನಗಳಿಗೆ ವೈದ್ಯರು ಮಾತ್ರ ಕೊಟ್ಟಿದ್ದು, ದರ್ಶನ್‌ರ ನೋವು ಕಡಿಮೆಯಾಗದ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ.












Click it and Unblock the Notifications