ಚಿಹ್ನೆ ಮುದ್ರಣ ದೋಷ: ಬಳ್ಳಾರಿ ಜಿಲ್ಲೆಯಲ್ಲಿ ಗ್ರಾ.ಪಂ ಚುನಾವಣೆ ಸ್ಥಗಿತ

ಬಳ್ಳಾರಿ, ಡಿಸೆಂಬರ್ 22: ಚಿಹ್ನೆ ಮುದ್ರಣ ದೋಷದಿಂದಾಗಿ ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾಪಂ ವ್ಯಾಪ್ತಿಯ ತೊಲಮಾಮಡಿ ಮತಗಟ್ಟೆಯಲ್ಲಿ ಮತದಾನ ಸ್ಥಗಿತವಾಗಿದೆ. ಮುದ್ರಣದ ದೋಷದ ಹಿನ್ನೆಲೆ ಮತದಾನವನ್ನು ಸ್ಥಗಿತಗೊಳಿಸುವಂತೆ‌ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಆದೇಶ ಮಾಡಿದ್ದಾರೆ. ‌

ಸುದ್ದಿ ಅರಿಯುತ್ತಲೇ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಎಸ್‌.ಎಸ್.ನಕುಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದಲು ಅಡಾವತ್, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ತಹಶೀಲ್ದಾರ ರೆಹಮಾನ್ ಪಾಶಾ ಅವರು ಪರಿಶೀಲನೆ ನಡೆಸಿದರು.

ಮುದ್ರಣ ದೋಷದಿಂದಾಗಿ ತೊಲಮಾಮಡಿ ಮತಗಟ್ಟೆಯ ಅಭ್ಯರ್ಥಿ ಪದ್ಮಾವತಿ ಅವರ ಚಿಹ್ನೆ ಮಡಿಕೆಯ ಬದಲಿಗೆ ಸಿಲಿಂಡರ್ ಚಿಹ್ನೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ.

Symbol Printing Error: Grama Panchayat Election Breakdown In Ballari District

ಈ ಗ್ರಾ.ಪಂ ವ್ಯಾಪ್ತಿಯ ರಿಟರ್ನಿಂಗ್ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಎರಡನೇ ಹಂತದ ಚುನಾವಣೆಯ ದಿನ ಅಥವಾ ಇನ್ನೊಂದು ದಿನ ಈ ಮತಗಟ್ಟೆಯಲ್ಲಿ ಮತದಾನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+