ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಲ್ಲಿ ಗಾಲಿ ರೆಡ್ಡಿ ಸಂಕ್ರಾಂತಿ ಆಚರಣೆಗೆ ಸುಪ್ರೀಂ ಅನುಮತಿ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮತ್ತೊಮ್ಮೆ ಬಳ್ಳಾರಿ ಪ್ರವೇಶಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಮಗಳು-ಅಳಿಯನೊಂದಿಗೆ ಮಕರ ಸಂಕ್ರಾಂತಿ ಆಚರಿಸಲು ಕೋರಿದ್ದ ಅರ್ಜಿಗೆ ಕೋರ್ಟ್ ಸಮ್ಮತಿಸಿದೆ.

By Mahesh
|
Google Oneindia Kannada News

ಬಳ್ಳಾರಿ, ಜನವರಿ 12 : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮತ್ತೊಮ್ಮೆ ಬಳ್ಳಾರಿ ಪ್ರವೇಶಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಮಗಳು-ಅಳಿಯನೊಂದಿಗೆ ಮಕರ ಸಂಕ್ರಾಂತಿ ಆಚರಿಸಲು ಕೋರಿದ್ದ ಅರ್ಜಿಗೆ ಕೋರ್ಟ್ ಸಮ್ಮತಿಸಿದೆ.

ನ್ಯಾ. ಎಕೆ ಸಿಕ್ರಿ ಹಾಗೂ ಆರ್ ಕೆ ಅಗರವಾಲ್ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ, ಗಾಲಿ ಜನಾರ್ದನ ರೆಡ್ಡಿ ಅವರಿಗೆ ಐದು ದಿನಗಳ ಅನುಮತಿ ನೀಡಿದೆ. ಜನವರಿ 12 ರಿಂದ 16 ರ ತನಕ ಬಳ್ಳಾರಿಯಲ್ಲಿ ನೆಲೆಸಬಹುದಾಗಿದೆ.

Supreme Court allows Gali Reddy to celebrate Makara Sankranti in Ballari

ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲು ಸೇರಿದ ನಂತರ 5 ವರ್ಷದ ಬಳಿಕ ನ್ಯಾಯಾಲಯದ ಅನುಮತಿ ಪಡೆದು ಕಳೆದ ನವೆಂಬರ್ 1 ರಂದು ಬಳ್ಳಾರಿಗೆ ಬಂದಿದ್ದ ಜನಾರ್ದನ ರೆಡ್ಡಿ ಅವರಿಗೆ ಮತ್ತೊಮ್ಮೆ ಬಳ್ಳಾರಿಗೆ ಬರಲು ನ್ಯಾಯಾಲಯ ಅನುಮತಿ ನೀಡಿದೆ.

ಈ ಹಿಂದೆ ಗಾಲಿ ರೆಡ್ಡಿ ಅವರು ಜೈಲುವಾಸ ಕಳೆದ ಬಳಿಕ ಐದು ವರ್ಷಗಳಾದ ಮೇಲೆ ಬಳ್ಳಾರಿಗೆ ಆಗಮಿಸಿದ್ದರು. ಮಗಳು ಬ್ರಹ್ಮಿಣಿ ಹಾಗೂ ರಾಜೀವ್ ರೆಡ್ಡಿ ಅವರ ವಿವಾಹದ ಅಂಗವಾಗಿ ಬಳ್ಳಾರಿಯಲ್ಲಿ 21 ದಿನ ಇರಲು ಅನುಮತಿ ಸಿಕ್ಕಿತ್ತು. ಬಳ್ಳಾರಿಯ ವೀರನಗೌಡ ಕಾಲೋನಿಯ ಅವರ ನಿವಾಸದಲ್ಲಿ ಈಗ ಮತ್ತೊಮ್ಮೆ ಸಂಕ್ರಾತಿ ಹಬ್ಬದ ಸಂಭ್ರಮ ಹಲವು ವರ್ಷಗಳ ನಂತರ ಮನೆ ಮಾಡಿದೆ.

English summary
The Supreme Court on Wednesday allowed former minister G Janardhana Reddy to visit Ballari and celebrate Makara Sankranti with his daughter and son-in-law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X