ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯತ್ನಾಳ್ ಹೇಳಿಕೆ ಸಮರ್ಥಿಸಿಕೊಂಡ ಶ್ರೀರಾಮುಲು

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಮಾರ್ಚ್ 7: ''ಮಹಾಭಾರತ ಬರೆದವರು ಕೆಳ ಜಾತಿಯ ವಾಲ್ಮೀಕಿ'' ಎಂದು ನಿನ್ನೆ ಕಲಾಪ ನಡೆಯುತ್ತಿರುವ ವೇಳೆ ಬಸನಗೌಡ ಪಾಟೀಲ ಯತ್ನಾಳ್ ತಪ್ಪು ನುಡಿದಿದ್ದು, ತಕ್ಷಣವೇ "ಮಹಾಭಾರತ ಬರೆದವರು ವ್ಯಾಸರು" ಎಂದು ತಿದ್ದಿಕೊಂಡಿದ್ದರು. ಜೊತೆಗೆ ಜಾತಿ ಕುರಿತು ಹೇಳಿದ್ದೂ ಗೊಂದಲಕ್ಕೆ ಕಾರಣವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಶ್ರೀರಾಮುಲು, "ಯತ್ನಾಳ ಹೇಳಿಕೆಯನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ" ಎಂದಿದ್ದಾರೆ.

ಬಳ್ಳಾರಿಯಲ್ಲಿ ಇಂದು ಮಾತನಾಡಿದ ಅವರು, ಈ ಹೇಳಿಕೆ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿ, "ರಾಮಾಯಣ, ಮಹಾಭಾರತ ಬರೆದಿರೋದು ಶೂದ್ರರೇ. ಆದರೆ ಕೆಳ ಜಾತಿ ಜನರಿಗೆ ಗೌರವ ಕೊಡುವ ವ್ಯಕ್ತಿ ಯತ್ನಾಳ್. ಅವರು ಆ ಒಂದು ದೃಷ್ಟಿಯಲ್ಲಿ ಹೇಳಲು ಸಾಧ್ಯವೇ ಇಲ್ಲ. ಬಾಯಿ ಜಾರಿ ಮಾತನಾಡಿರಬಹುದಷ್ಟೆ" ಎಂದು ಸಮರ್ಥಿಸಿಕೊಂಡಿದ್ದಾರೆ.

ಮಹಾಭಾರತ ಬರೆದವರು ಕೆಳಜಾತಿಯ ವಾಲ್ಮೀಕಿ: ಎಡವಟ್ಟು ಮಾಡಿದ ಯತ್ನಾಳ್!ಮಹಾಭಾರತ ಬರೆದವರು ಕೆಳಜಾತಿಯ ವಾಲ್ಮೀಕಿ: ಎಡವಟ್ಟು ಮಾಡಿದ ಯತ್ನಾಳ್!

Sriramulu Defend Yatnal Statement On Mahabharatha

"ವಾಲ್ಮೀಕಿ ಒಬ್ಬ ಬೇಟೆಗಾರನಾಗಿದ್ದ, ಆದ್ರೆ ಕೆಟ್ಟವನಲ್ಲ. ಇತಿಹಾಸ ಬರೆಯುತ್ತಾ ಬರೆಯುತ್ತಾ ತಿರುಚಲಾಗಿದೆ. ತಿರುಚಿ ಬರೆದ ಇತಿಹಾಸದಲ್ಲಿ, ವಾಲ್ಮೀಕಿ ಕೆಟ್ಟವನಿದ್ದ, ನಂತರ ಪರಿವರ್ತನೆಯಾದ ಅಂತಿದೆ. ಅದನ್ನು ನಾನು ಒಪ್ಪಲ್ಲ, ವಾಲ್ಮೀಕಿ ಒಬ್ಬ ದೇವಮಾನವ. ಈಗಿನ ಕೆಲ ಲೇಖಕರು ತಿರುಚಿ ಬರೆಯುವ ಹವ್ಯಾಸ ಮಾಡಿಕೊಂಡಿದ್ದಾರೆ" ಎಂದಿದ್ದಾರೆ.

English summary
Speaking in Ballary today, Sriramulu defended Yatnal's statement on mahabharatha writer in yesterday's assembly,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X