ಬಳ್ಳಾರಿ ಮತ್ತು ಹೊಸಪೇಟೆಯಲ್ಲಿರೋ ವಲಸೆ ಕಾರ್ಮಿಕರಿಗೆ ಬಿಗ್ ಶಾಕ್
ಬಳ್ಳಾರಿ, ಮೇ 16: ಬಳ್ಳಾರಿ ಮತ್ತು ಹೊಸಪೇಟೆಯಿಂದ ಬಿಹಾರಕ್ಕೆ ಹೋಗಬೇಕಿರುವ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತ ಶಾಕ್ ನೀಡಿದೆ. ಮೇ 17 ಮತ್ತು 18 ರಂದು ಹೊರಡಬೇಕಿರುವ ರೈಲು ಇಂದು ಹೊರಡಲಿದೆ.
ಭಾನುವಾರ ಹಾಗೂ ಸೋಮವಾರ ಹೋಗಬೇಕಿದ್ದ ರೈಲು, ಇಂದು ಸಂಜೆ 4 ಗಂಟೆಗೆ ಬಳ್ಳಾರಿಯಿಂದ ಬಿಹಾರಗೆ ರೈಲು ಹೋಗುತ್ತಿದೆ. ಒಟ್ಟು 1133 ಜನ ವಲಸೆ ಕಾರ್ಮಿಕರು ಬಿಹಾರಕ್ಕೆ ಹೋಗಲು ಸೇವಾ ಸಿಂಧುವಿನಲ್ಲಿ ಟಿಕೆಟ್ ಪಡೆದಿದ್ದಾರೆ.
ನಿನ್ನೆ ಸರಿಸುಮಾರು 5000 ಸಾವಿರ ಜನರಿಗೆ ಸ್ಕ್ರೀನಿಂಗ್ ಮಾಡಲಾಗಿದೆ. ಇನ್ನುಳಿದ ಜನರಿಗೆ ಇಂದು KSRTC ಬಸ್ ಡಿಪೋದಲ್ಲಿ ಸ್ಕ್ರೀನಿಂಗ್ ನಡೆಯಲಿದೆ. ಬಿಹಾರ್ ಗೆ ಹೊರಡಲಿರೋ ವಲಸೆ ಕಾರ್ಮಿಕರು ಈ ಕೂಡಲೇ ಬಳ್ಳಾರಿಯ KSRTC ಬಸ್ ನಿಲ್ದಾಣಕ್ಕೆ ಬಂದು ತಮ್ಮ ತಮ್ಮ ಲಗೇಜ್ ಜೊತೆ ಬಂದು ಸ್ಕ್ರೀನಿಂಗ್ ಮಾಡಿಸಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ.

ಬಿಹಾರಕ್ಕೆ ಹೋಗುವ ವಲಸೆ ಕಾರ್ಮಿಕರು ಕೂಡಲೇ ತಮ್ಮ ಟಿಕೆಟ್ ಹಣವನ್ನ ತೆಗೆದುಕೊಂಡು ಬಂದು ಸ್ಕ್ರೀನಿಂಗ್ ಮಾಡಿಸಿಕೊಳ್ಳಿ ಎಂದು ಬಳ್ಳಾರಿ ಜಿಲ್ಲಾಧಿಕಾರಿ SS ನಕುಲ್ ಕಾರ್ಮಿಕರಿಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications