ಭೂಮಿ ಹುಣ್ಣಿಮೆ ಮರುದಿನವೇ ಗಾಲಿ ರೆಡ್ಡಿಗೆ ಸಿಕ್ತು ಸುಪ್ರೀಂನಿಂದ ಶುಭಸುದ್ದಿ
ಬಳ್ಳಾರಿ, ಆ.10: ಕಳೆದ 12 ವರ್ಷಗಳಿಂದ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಸಿಲುಕಿ ನಲುಗಿರುವ ಒಂದು ಕಾಲದ ಗಣಿಧಣಿ, ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸೋಮವಾರ ಶುಭ ಸುದ್ದಿ ಸಿಕ್ಕಿದೆ. ನಿನ್ನೆ ಇನ್ನು ಕರ್ನಾಟಕದೆಲ್ಲೆಡೆ ಭೂಮಿ ಹುಣ್ಣಿಮೆ ಸಂಭ್ರಮ ಮುಗಿದಿದೆ. ಇದರ ಬೆನ್ನಲ್ಲೇ ಬಳ್ಳಾರಿಯಲ್ಲಿ ಇಲ್ಲಿ ಗಾಲಿ ರೆಡ್ಡಿ ಮನೆಯಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಗಿದೆ. ಬಳ್ಳಾರಿಗೆ ತೆರಳಲು ಗಾಲಿ ರೆಡ್ಡಿಗೆ ಸುಪ್ರೀಂಕೋರ್ಟ್ ಇಂದು ಅ.10 ಅನುಮತಿ ನೀಡಿದೆ.
ನ್ಯಾ. ಎಂಆರ್ ಶಾ ಹಾಗೂ ಕೃಷ್ಣ ಮುರಾರಿ ಅವರಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠವು ಗಾಲಿ ರೆಡ್ಡಿಗೆ ಅನುಮತಿ ನೀಡಿದ್ದರೂ ವಿಚಾರಣೆ ಮುಂದುವರೆಸಲು ವಿಶೇಷ ನ್ಯಾಯಾಲಯಕ್ಕೆ ಸೂಚಿಸಿದೆ. ನವೆಂಬರ್ 9, 2022 ಪ್ರತಿ ದಿನ ವಿಚಾರಣೆ ನಡೆಸಿ, ಆರು ತಿಂಗಳಲ್ಲಿ ಇತ್ಯರ್ಥಗೊಳಿಸಲು ನಿರ್ದೇಶಿಸಿದೆ.
''ಕಳೆದ 12 ವರ್ಷಗಳಿಂದ ನನ್ನ ಕೇಸ್ ಸುಪ್ರೀಂ ಕೋರ್ಟ್‌ನಲ್ಲಿದೆ. ಆದರೆ ತ್ವರಿತಗತಿಯಲ್ಲಿ ನನ್ನ ಕೇಸ್ ನಡೆಯುತ್ತಿಲ್ಲ. ಸಿಬಿಐ ಅಧಿಕಾರಿಗಳು ನನಗೆ ಕಿರುಕುಳ ನೀಡುತ್ತಿದ್ದಾರೆ'' ಎಂದು ಉದ್ಯಮಿ ಜನಾರ್ದನ ರೆಡ್ಡಿ ಇತ್ತೀಚೆಗೆ ಆರೋಪ ಮಾಡಿದ್ದರು.

ನವರಾತ್ರಿಯ ಹಿನ್ನೆಲೆ ನಗರದ ಆದಿ ದೇವತೆ ಶ್ರೀಕನಕ ದುರ್ಗಮ್ಮ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿ, ನನ್ನ ಮೇಲೆ ಕೇಸ್ ಆಗಿ ಹನ್ನೆರಡು ವರ್ಷ ಕಳೆದಿವೆ. ಕಳೆದ ಹನ್ನೆರಡು ವರ್ಷಗಳಿಂದ ಕೇಸ್ ನಡೆಯುತ್ತಿಲ್ಲ. ನಾನು ಬಳ್ಳಾರಿಯಲ್ಲಿ ಇರುವುದಕ್ಕೆ ಅಧಿಕಾರಿಗಳು ಪದೇ ಪದೇ ಕೋರ್ಟ್‌ನಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿ ದಿನ ವಿಚಾರಣೆ ನಡೆಸುವಂತೆ ಕೊರ್ಟ್‌ಗೆ ಕೇಳಿದ್ದೇನೆ. ಮೂರ್ನಾಲ್ಕು ತಿಂಗಳಲ್ಲೇ ಪ್ರಕರಣ ಇತ್ಯರ್ಥ ಮಾಡಿ ಎಂದು ಕೇಳಿದ್ದೇನೆ ಎಂದು ಹೇಳಿದರು.
ಸುಪ್ರೀಂ ಕೊರ್ಟ್‌ನಲ್ಲಿ ಪ್ರಕರಣ ನಡೆಯುತ್ತಿರುವ ಹಿನ್ನೆಲೆ ದುರ್ಗಮ್ಮ ತಾಯಿಗೆ ಬೇಡಿಕೊಂಡಿದ್ದೆ. ಅನ್ನ ಸಂತರ್ಪಣೆ, ವಿಶೇಷ ಅಲಂಕಾರ ಮಾಡಿಸುವುದಾಗಿ ಬೇಡಿಕೊಂಡಿದ್ದೆ. ಹೀಗಾಗಿ ಇಂದು ನಾನು ದೇವಸ್ಥಾನಕ್ಕೆ ಬಂದು ಇಡೀ ದೇಶಕ್ಕೆ ಒಳ್ಳೆಯದಾಗಲಿ ಎಂದು ದೇವಿಗೆ ಪೂಜೆ ಸಲ್ಲಿಸಿದ್ದೇನೆ. ಕಳೆದ ಹದಿನಾಲ್ಕು ತಿಂಗಳಿನಿಂದ ನಾನು ಕೇವಲ ಮನೆ ಹಾಗೂ ದೇವಸ್ಥಾನಗಳಿಗೆ ಓಡಾಡುತ್ತಿದ್ದೇನೆ ಎಂದು ಹೇಳಿದ ರೆಡ್ಡಿ, ಸಾರ್ವಜನಿಕವಾಗಿ ನಾನು ಎಲ್ಲೂ ಬರುತ್ತಿಲ್ಲ. ಆದರೂ ಸಿಬಿಐನಿಂದ ನನಗೆ ಕಿರುಕುಳ ಆಗುತ್ತಿದೆ. ರಾಜಕೀಯ ವಿಚಾರವಾಗಿ ಅತೀ ಶೀಘ್ರದಲ್ಲಿ ದುರ್ಗಾ ತಾಯಿ ದಾರಿ ತೋರಿಸುತ್ತಾಳೆ. ರಾಜಕೀಯಕ್ಕೆ ಮರಳುವ ಬಗ್ಗೆ ಶೀಘ್ರದಲ್ಲಿಯೇ ತಿಳಿಸುತ್ತೇನೆ ಎಂದರು.
ಆಂಧ್ರ- ಕರ್ನಾಟಕ ಗಡಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಗಡಿ ಒತ್ತುವರಿ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯ, ಅನ್ಯಾಯವನ್ನು ಕೋರ್ಟ್ ತೀರ್ಮಾನಿಸಲಿದೆ ಎಂದು ಹೇಳಿದರು.












Click it and Unblock the Notifications