ಪ್ರೊಡ್ಯೂಸರ್ ಗೋವರ್ಧನಮೂರ್ತಿ ಮೇಲೆ ರೇಪ್ ಕೇಸ್
ಬೆಂಗಳೂರು, ಅ. 8: ನಿರ್ಮಾಪಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಗೋವರ್ಧನಮೂರ್ತಿ ಮೇಲೆ ಮುಂಬೈ ಮೂಲದ ಯುವತಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿದ್ದಾಳೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಯುವತಿ, ನಾನು ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿಗೆ ಬರುತ್ತಿದ್ದ ಗೋವರ್ಧನಮೂರ್ತಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇಲ್ಲಿಯವರೆಗೆ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ.[ಕೇರಳದಲ್ಲಿದ್ದ ಗೋವರ್ಧನ್ ತಾನೇ ಶರಣಾದನಾ?]

ಫೊನ್ ಮಾಡಿ ನನ್ನನ್ನು ಅಜ್ಞಾತ ಸ್ಥಳವೊಂದಕ್ಕೆ ಬರಲು ಹೇಳುತ್ತಿದ್ದರು. ನಾನು ನಿರಾಕರಿಸಿದರೆ ಜೀವ ಬೆದರಿಕೆ ಹಾಕಲಾಗುತ್ತಿತ್ತು. ಅದು ಯಾವ ಜಾಗ ಎಂದೂ ನನಗೆ ಇಲ್ಲಿಯವರೆಗೂ ತಿಳಿಯದು ಎಂದು ಹೇಳಿದ್ದಾಳೆ.
ಕಳೆದ ಒಂದು ತಿಂಗಳಿನಲ್ಲಿ ನನ್ನ ಮೇಲೆ ನಾಲ್ಕು ಬಾರಿ ಅತ್ಯಾಚಾರ ಮಾಡಲಾಗಿದೆ. ನಾನು ಬೇಡವೆಂದರೂ ಬಾರ್ ಮೇಲ್ವಿಚಾರಕರು ಗೋವರ್ಧನಮೂರ್ತಿ ಬಳಿ ನನ್ನನ್ನು ಕಳುಹಿಸುತ್ತಿದ್ದರು ಎಂದು ಯುವತಿ ಆರೋಪಿಸಿದ್ದಾಳೆ. [ವಿಕೃತ ರೇಪ್ ದಂಪತಿ ಈಗ ಪೊಲೀಸ್ ಅತಿಥಿ]
ಆರೋಪ ತಳ್ಳಿಹಾಕಿದ ನಿರ್ಮಾಪಕ: ಯುವತಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇದೆಲ್ಲ ಸುಳ್ಳು ಆರೋಪ. ಘಟನೆಯಿಂದ ನನಗೆ ಶಾಕ್ ಆಗಿದೆ ಎಂದು ನಿರ್ಮಾಪಕ ಗೋವರ್ಧನಮೂರ್ತಿ ಹೇಳಿದ್ದಾರೆ.
ಶೂಟೌಟ್ ಪ್ರಕರಣ: 2008ರಲ್ಲಿ ನಟ ವಿನೋದ್ ಕುಮಾರ್ ಎಂಬುವರನ್ನು ಗುಂಡಿಕ್ಕಿ ಕೊಲೆ ಮಾಡಿದ ಆರೋಪದಲ್ಲಿ ಗೋವರ್ಧನಮೂರ್ತಿ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.











Click it and Unblock the Notifications