ಕಾಂಗ್ರೆಸ್ ಮತ ಬ್ಯಾಂಕ್‌ಗಾಗಿ ಭಯೋತ್ಪಾದನೆ ಮುಂದೆ ಮಂಡಿ ಉರಿ ಕುಳಿತಿದೆ-ಪ್ರಧಾನಿ ಮೋದಿ

ಬಳ್ಳಾರಿ, ಮೇ 05: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸದ್ಯ ಕರ್ನಾಟಕ ಪ್ರವಾಸದಲ್ಲಿದ್ದು, ಇಂದು(ಮೇ 05) ಬಳ್ಳಾರಿಗೆ ಆಗಮಿಸಿದ್ದಾರೆ. ಸಾವಿರಾರು ಜನರು ಪ್ರಧಾನಿ ಮೋದಿ ಸಮಾವೇಶದಲ್ಲಿ ಭಾಗಿಯಾಗಿದ್ದು, ಮೋದಿ ಕೈ ಬೀಸುತ್ತಿದ್ದಂತೆ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಬಳ್ಳಾರಿಯಲ್ಲಿ ನಡೆದ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಬಿಜೆಪಿ ನಾಯಕರು ಬಳ್ಳಾರಿ ನಗರದ ಅಧಿದೇವತೆ ಆಗಿರುವ ಕನಕ ದುರ್ಗಮ್ಮ ದೇವಿಯ ಮೂರ್ತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಗೆ ನೆನಪಿನ ಕಾಣಿಕೆಯಾಗಿ ನೀಡಿದರು.

PM Narendra Modi Election Campaign In Ballari constituency

ಬಳ್ಳಾರಿ ಸಮಾವೇಶದಲ್ಲಿ ಭಜರಂಗ ಬಲಿ, ಆಂಜನೇಯ ಸ್ವಾಮಿಗೆ ಘೋಷಣೆ ಕೂಗುವುದರ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ ಆರಂಭಿಸಿದರು. ಬಳ್ಳಾರಿಯ ನನ್ನ ಸಹೋದರರ ಸಹೋದರಿಯರಿಗೆ ನನ್ನ ಸಮಸ್ಕಾರ ಎಂದು ಕನ್ನಡದಲ್ಲಿ ಹೇಳಿದ ಪ್ರಧಾನಿ ಮೋದಿ, ದುರ್ಗಮ್ಮ, ಕುಮಾರಸ್ವಾಮಿ ದೇವರಿಗೆ ನಮಸ್ಕರಿಸಿದರು. ಈ ಜಿಲ್ಲೆಯ ಕ್ಷೇತ್ರಗಳಿಗೆ ಆಂಜನೇಯ ವಿಶೇಷ ಆಶೀರ್ವಾದ ಇದೆ ಎಂದು ಹುಲಿಕುಂಟೆ ಆಂಜನೇಯ ಸ್ವಾಮಿಯನ್ನು ನೆನೆದರು.

ದೇಶದ ಆಡಳಿತದ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಕಾರಣವಾಗಿದೆ. ಸುಳ್ಳು ಸರ್ವೇ ಮತ್ತು ಸುಳ್ಳು ಸುದ್ದಿ ಸೃಷ್ಟಿ ಮಾಡಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ಗೆ ಆಗದು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ನಿಷೇಧ ಮತ್ತು ತುಷ್ಟೀಕರಣ ಬಂಡಲ್ ಆಗಿದೆ. ಪ್ರಣಾಳಿಕೆಯಲ್ಲಿ ರದ್ದು ಮಾಡಬೇಕು, ನಿಷೇಧ ಮಾಡಬೇಕೆಂದು ಎಂದು ಹೇಳಿದೆ. ಆದರೆ ಕಾಂಗ್ರೆಸ್‌ ಬುಡವು ಅಲುಗಾಡುತ್ತಿದೆ. ದೇಶದ ಜನರು ನೋಡುತ್ತಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ವ್ಯಂಗ್ಯವಾಡಿದರು.

PM Narendra Modi Election Campaign In Ballari constituency

ಬಿಜೆಪಿ ಪಕ್ಷಗಳ ಚುನಾವಣೆ ಪ್ರಣಾಳಿಕೆಯು ದೇಶದ ನಂ.1 ಮಾಡುವ ಮಾರ್ಗಸೂಚಿಯಾಗಿದೆ. ರಾಜ್ಯದ ಬಿಜೆಪಿ ಪ್ರಣಾಳಿಕೆಯು ವಚನ ಪತ್ರ, ಸಂಕಲ್ಪ ಪತ್ರವಾಗಿದೆ. ಬಿಜೆಪಿ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಆಗ ಕಾಂಗ್ರೆಸ್‌ಗೆ ಹೊಟ್ಟೆ ಉರಿ ಬರುತ್ತದೆ. ಕಾಂಗ್ರೆಸ್‌ ಮಾನವ ಧರ್ಮ, ವಿಕಾಸದ, ಜೀವನ ಮೌಲ್ಯದ ವಿರೋಧಿಯಾಗಿದೆ. ರಾಜ್ಯದ ಹಿತಾಸಕ್ತಿಯನ್ನು, ನಾಗರೀಕ ಹಿತಾಸಕ್ತಿಯನ್ನು ಕಾಂಗ್ರೆಸ್‌ ಕಾಯುವುದಿಲ್ಲ ಎಂದರು.

ಕಾಂಗ್ರೆಸ್ ಮತ ಬ್ಯಾಂಕ್‌ಗಾಗಿ ಭಯೋತ್ಪಾದನೆ ಮುಂದೆ ಮಂಡಿ ಉರಿ ಕುಳಿತಿದೆ. ಭಯೋತ್ಪಾದನೆ ಸ್ವರೂಪ ಕೂಡ ಬದಲಾಗುತ್ತಿದೆ. ಕಾಂಗ್ರೆಸ್ ಆತಂಕ ಪ್ರವೃತ್ತಿಯಿಂದ ಹಿಂಬದಿ ಬಾಗಿಲಿನಿಂದ ಅಧಿಕಾರಕ್ಕೆ ಬರಲು ಮುಂದಾಗಿದೆ. ಕಾಂಗ್ರೆಸ್ 85 ಪರ್ಸೆಂಟ್ ಪಕ್ಷವಾಗಿದೆ. ನಮ್ಮ ದೇಶಕ್ಕೆ ಕೊರತೆ ಮತ್ತು ಅಸಮಾಧಾನ ಬಿಟ್ಟರೆ ಕಾಂಗ್ರೆಸ್ ಏನನ್ನು ಕೊಟ್ಟಿಲ್ಲ‌ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

PM Narendra Modi Election Campaign In Ballari constituency

ಬಿಜೆಪಿ ಒಬ್ಬ ಆದಿವಾಸಿ ಮಹಿಳೆಗೆ ರಾಷ್ಟ್ರಪತಿ ಪಟ್ಟ ನೀಡಿದರು. ಕಾಂಗ್ರೆಸ್‌ ಅದನ್ನು ವಿರೋಧ ಮಾಡಿತು. ದೇಶದ ಜನರ ಸಂಕಷ್ಟಕ್ಕೆ ನಾನಿದ್ದೇನೆ. ಕೊರೊನಾ ಸಂದರ್ಭದಲ್ಲಿ, ಉಕ್ರೇನ್ ಯುದ್ಧದಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆ ತಂದಿದ್ದೇನೆ. ಇದು ಕಾಂಗ್ರೆಸ್‌ನಿಂದ ಸಾಧ್ಯ ಇಲ್ಲ. ಈ ಬಾರಿಯ ನಿರ್ಧಾರ ಪೂರ್ಣ ಪ್ರಮಾಣದ ಬಿಜೆಪಿ ಸರ್ಕಾರ. ನೀವು ಆಶೀರ್ವಾದ ಮಾಡಿದರೆ ನನ್ನ ಸೇವೆಗೆ ಮತ್ತಷ್ಟು ಶಕ್ತಿ ಬರಲಿದೆ ಎಂದು ಜನರಿಗೆ ನಮಸ್ಕರಿಸಿದ ಪ್ರಧಾನ ಮಂತ್ರಿ ಮೋದಿ ಬಳ್ಳಾರಿ ಸಮಾವೇಶದಿಂದ ತಮ್ಮ ಮುಂದಿನ ಕಾರ್ಯಕ್ರಮದತ್ತ ಸಾಗಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+