• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್ ಪ್ರಕರಣದಲ್ಲಿ ಹೊಸ ದಾಖಲೆ ಬರೆದ ಬಳ್ಳಾರಿ

|

ಬಳ್ಳಾರಿ, ಡಿಸೆಂಬರ್ 01 : ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ರಾಜ್ಯದಲ್ಲಿನ ಹೊಸ ಪ್ರಕರಣಗಳು ಮೂರಂಕಿಗೆ ಬಂದಿದ್ದು, ಬಳ್ಳಾರಿ ಜಿಲ್ಲೆ ಸಹ ಹೊಸ ದಾಖಲೆ ಬರೆದಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳಿನಲ್ಲಿಯೇ ಅತಿ ಕಡಿಮೆ ಹೊ ಕೋವಿಡ್ ಪ್ರಕರಣ ನವೆಂಬರ್ 30ರಂದು ದಾಖಲಾಗಿದೆ. ಸೋಮವಾರ ಜಿಲ್ಲೆಯಲ್ಲಿ 10 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಕರ್ನಾಟಕ; ಸಕ್ರಿಯ ಕೋವಿಡ್ ಪ್ರಕರಣದಲ್ಲಿ ಗಣನೀಯ ಇಳಿಕೆ

ಇವುಗಳಲ್ಲಿ ಬಳ್ಳಾರಿ 3, ಸಂಡೂರು 2, ಕೂಡ್ಲಗಿ 2, ಹೊಸಪೇಟೆ 2 ಮತ್ತು ಹರಪನಹಳ್ಳಿಯಲ್ಲಿ 1 ಪ್ರಕರಣ ದಾಖಲಾಗಿದೆ. ಸಿರಗುಪ್ಪ, ಹೂವಿನಹಡಗಲಿಯಲ್ಲಿ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ.

ಭಾರತದಲ್ಲಿ 38,772 ಹೊಸ ಕೋವಿಡ್ ಪ್ರಕರಣ ದಾಖಲು

ಬಳ್ಳಾರಿ ಜಿಲ್ಲೆಯಲ್ಲಿ 10 ಹೊಸ ಪ್ರಕರಣ ದಾಖಲಾಗಿದ್ದರೆ, 31 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 223. ಒಟ್ಟು ಮೃತಪಟ್ಟವರ ಸಂಖ್ಯೆ 582.

ಬೆಂಗಳೂರಲ್ಲಿ ಕೋವಿಡ್ ಚೇತರಿಕೆ ಪ್ರಮಾಣ ಶೇ 95ರಷ್ಟು

ಹೊಸ ಪ್ರಕರಣ ಇಳಿಕೆ; ಕರ್ನಾಟಕದಲ್ಲಿಯೂ ಹೊಸ ಪ್ರಕರಣಗಳು, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. 30ನೇ ನವೆಂಬರ್ 2020ರಂದು ಕೇವಲ 998 ಹೊಸ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ.

ಒಟ್ಟು ಪ್ರಕರಣಗಳ ಸಂಖ್ಯೆ 8,84,897ಕ್ಕೆ ಏರಿಕೆಯಾಗಿದೆ. ಇದುವರೆಗೂ ಮೃತಪಟ್ಟವರು 11,778.

ಗುಣಮುಖರಾದವರು 8,49,821. ಸಕ್ರಿಯ ಪ್ರಕರಣಗಳು 23279.

English summary
Ballri district reported 10 new COVID-19 cases on November 30, 2020. It is less number of cases from past 8 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X