ಸಿರುಗುಪ್ಪದಲ್ಲಿ ಬಾವಿಗೆ ಬಿದ್ದ ಕುರಿಮರಿ ರಕ್ಷಿಸಲು ಹೋಗಿ ಸಾವನ್ನಪ್ಪಿದ ತಾಯಿ ಮಗ
ಬಳ್ಳಾರಿ, ಮೇ 07: ಬಾವಿಯಲ್ಲಿ ಬಿದ್ದ ಕುರಿಮರಿ ರಕ್ಷಿಸಲು ಹೋಗಿ ತಾಯಿ- ಮಗ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮಣ್ಣೂರು ಸೂಗೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿವಾಸಿಗಳಾದ ನೀಲಮ್ಮ (22) ಹಾಗೂ ಶಿವಾಜಿ (11) ಎಂಬ ಕುರಿಗಾಹಿಗಳು ಸಾವನ್ನಪ್ಪಿದವರೆಂದು ಗುರುತಿಸಲಾಗಿದೆ. ಬಿರುಬಿಸಿಲಿದ್ದರಿಂದ ಕುರಿ ಮರಿಯೊಂದು ಬಾವಿಯೊಳಗೆ ಇಳಿದು ನೀರು ಕುಡಿಯಲಾರಂಭಿಸಿದೆ. ಆ ಕುರಿ ಮರಿಯು ನೀರು ಕುಡಿಯುತ್ತಲೇ ಕಾಲುಜಾರಿ ಬಾವಿಯೊಳಗೆ ಬಿದ್ದಿದೆ. ಅದನ್ನ ಗಮನಿಸಿದ ಕುರಿಗಾಹಿ ನೀಲಮ್ಮ ಅವರು ಬಾವಿಗಿಳಿದಿದ್ದಾರೆ.

ಆಕೆಯೊಂದಿಗೆ ಬಾಲಕ ಶಿವಾಜಿ ಕೂಡ ಬಾವಿಯೊಳಗೆ ಇಳಿದಿದ್ದಾನೆ. ಇಬ್ಬರೂ ನೀರಿನೊಳಗೆ ಮುಳುಗಿ ಸಾವನ್ನಪ್ಪಿದ್ದಾರೆ. ಈ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications