ಬಳ್ಳಾರಿಯಲ್ಲಿ ಮೊದಲ ಮಾವು ಮೇಳ; 300 ತಳಿಗಳ ಪ್ರದರ್ಶನ, ಮಾರಾಟ

ಬಳ್ಳಾರಿ, ಮೇ 30; ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ ಹಾಗೂ ಹಾಪ್ ಕಾಮ್ಸ್ ಸಹಯೋಗದಲ್ಲಿ ಬಳ್ಳಾರಿ ತಹಶೀಲ್ದಾರ್‌ ಕಛೇರಿ ಆವರಣದಲ್ಲಿ ಇದೇ ಮೊದಲ ಬಾರಿಗೆ ಮಾವು ಮೇಳವನ್ನು ಆಯೋಜನೆ ಮಾಡಲಾಗಿದೆ.

ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಸೋಮವಾರ ಮಾವು ಮೇಳಕ್ಕೆ ಚಾಲನೆ ನೀಡಿದರು. ರಾಜ್ಯ ಹಾಗೂ ದೇಶದ 300ಕ್ಕೂ ಹೆಚ್ಚು ತಳಿಗಳ ಪ್ರದರ್ಶನ ಮತ್ತು ಮಾರಾಟ ಮೂರು ದಿನಗಳ ಕಾಲ ನಡೆಯಲಿವೆ.

ಮಾವು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಬಿ. ಶ್ರೀರಾಮುಲು, "ಬಳ್ಳಾರಿಯಲ್ಲಿ ಇನ್ನುಮುಂದೆ ಪ್ರತಿವರ್ಷ ಮಾವು ಮೇಳ ಆಯೋಜಿಸಲಾಗುವುದು. ಪ್ರತಿ ವರ್ಷ ಮೇಳ ನಡೆಸಲು ಅಧಿಕಾರಿಗಳಿಗೆ ಸೂಚಿಸುವುದರೊಂದಿಗೆ, ತೋಟಗಾರಿಕಾ ಸಚಿವರ ಬಳಿಯೂ ಮಾತನಾಡುವುದಾಗಿ" ಭರವಸೆ ನೀಡಿದರು.

ಸೋಮವಾರದಿಂದ ಆರಂಭವಾಗಿರುವ ಮಾವು ಮೇಳದಲ್ಲಿ 300ಕ್ಕೂ ಹೆಚ್ಚು ಮಾವಿನ ಹಣ್ಣಿನ ತಳಿಗಳ ಪ್ರದರ್ಶನ ಗಮನಸೆಳೆಯುತ್ತಿದೆ. 'ಬೆನೆಶಾನ್' ಮಾವಿನ ಹಣ್ಣಿನ ತಳಿಯ ಸ್ವಾದ ಮಾತ್ರ ಸವಿದಿರುವ ಗಣಿನಾಡಿನ ಜನರಿಗೆ ವೈವಿಧ್ಯಮಯ ಮಾವಿನ ತಳಿಗಳ ಸ್ವಾದ ಸವಿಯಲು ಭಾಗ್ಯ ಲಭಿಸಿದೆ.

100 ಟನ್ ಮಾವು ಮಾರಾಟ ನಿರೀಕ್ಷೆ

100 ಟನ್ ಮಾವು ಮಾರಾಟ ನಿರೀಕ್ಷೆ

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶರಣಪ್ಪ ಭೋಗಿ ಮಾತನಾಡಿ, "ಬಳ್ಳಾರಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಮಾವು ಮೇಳದಲ್ಲಿ ಮೂರು ದಿನಗಳಲ್ಲಿ 100 ಟನ್ ಮಾವು ಮಾರಾಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ" ಎಂದರು.

ಮೊದಲ ದಿನ ಮೇಳಕ್ಕೆ ಆಗಮಿಸಿದ್ದ ಜನರು ಅಲ್ಪೇನ್ಸೋ, ರತ್ನಗಿರಿ, ಕೇಸರ್, ಬೆನೆಶಾನ್, ತೋತಾಪೂರಿ, ರಸಪೂರಿ, ಸಿಂಧೂರ್ ಸೇರಿದಂತೆ ವೈವಿಧ್ಯಮಯ ಮಾವಿನ ಹಣ್ಣುಗಳನ್ನು ಜನರು ಅತ್ಯಂತ ಕುತೂಹಲದಿಂದ ವೀಕ್ಷಿಸಿದರು.

ರಾಸಾಯನಿಕ ಮುಕ್ತ ಮಾವಿನ ಹಣ್ಣುಗಳು

ರಾಸಾಯನಿಕ ಮುಕ್ತ ಮಾವಿನ ಹಣ್ಣುಗಳು

ಕೋಲಾರ, ಧಾರವಾಡ, ಹಾವೇರಿ, ಗಂಗಾವತಿ, ಕೊಪ್ಪಳ, ಶಿರಸಿ, ಅನಂತಪುರ, ಹರಪನಹಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ರೈತರು ರಾಸಾಯನಿಕ ಮುಕ್ತ ವೈಜ್ಞಾನಿಕವಾಗಿ, ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳನ್ನು ಪ್ರದರ್ಶನದಲ್ಲಿಟ್ಟು ಮಾರಾಟ ಮಾಡುತ್ತಿದ್ದಾರೆ.

ವಿವಿಧೆಡೆಯಿಂದ ಆಗಮಿಸಿದ್ದ ರೈತರಿಗೆ 35 ಮಳಿಗೆಗಳನ್ನು ಒದಗಿಸಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಇನ್ನೊಂದು ದಿನ ಮೇಳ ವಿಸ್ತರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

300 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ

300 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ

ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಕೇವಲ 300 ಹೆಕ್ಟೇರ್ ಮಾತ್ರ ಮಾವು ಬೆಳೆಯಲಾಗುತ್ತದೆ. ಜನರಿಗೆ ನೇರವಾಗಿ ನೈಸರ್ಗಿಕವಾಗಿ ಮಾಗಿಸಿದ ಮಾವುಗಳನ್ನು ಒದಗಿಸಲು ಮೇಳದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಾರಾಟಕ್ಕಿಡಲಾಗಿರುವ ಎಲ್ಲವೂಗಳು ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳಾಗಿದ್ದು,ಈ ಕುರಿತು ಇಲಾಖೆಯಿಂದಲೇ ಪರಿಶೀಲನೆ ನಡೆಸಲಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಕ್ಯಾಲ್ಸಿಯಂ ಕಾರ್ಬೋಹೈಡ್ರೆಡ್ ರಾಸಾಯನಿಕ ಸಿಂಪಡಿಸಿ ಮಾವುಗಳನ್ನು ಹಣ್ಣುಗಳನ್ನಾಗಿ ಮಾರಾಟ ಮಾಡಲಾಗುತ್ತಿದೆ. ಅವುಗಳನ್ನು ತಿಂದಲ್ಲಿ ಕ್ಯಾನ್ಸರ್ ಸೇರಿದಂತೆ ನಾನಾ ರೋಗಗಳಿಗೆ ಆಹ್ವಾನ ಮಾಡಿಕೊಟ್ಟಂತಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Recommended Video

    Monalisa ಚಿತ್ರದ ಮೇಲೆ ಆ ವ್ಯಕ್ತಿ Cake ಬಳಿದದ್ದೇಕೆ | #World | OneIndia Kannada
    ರೈತರಿಗೆ ಉತ್ತಮ ಬೆಲೆ ಸಿಗಲಿದೆ

    ರೈತರಿಗೆ ಉತ್ತಮ ಬೆಲೆ ಸಿಗಲಿದೆ

    ಮಾವು ಮೇಳದ ಇನ್ನೊಂದು ವಿಶೇಷ ಎಂದರೆ ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣುಗಳು ತಲುಪಿಸುವುದುದ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಕ್ಕರೆ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮಾವು ಸಿಗುತ್ತದೆ. ವೈಜ್ಞಾನಿಕವಾಗಿ, ನೈಸರ್ಗಿಕವಾಗಿ ಮಾಗಿದ ಹಲವು ತಳಿಗಳ ಮಾವಿನ ಹಣ್ಣುಗಳನ್ನು ಮೇಳದಲ್ಲಿ ಲಭ್ಯವಿದೆ. ರಾಜ್ಯ ಮಟ್ಟದ ಮಾವು ಮೇಳದಂತೆ ಅಂತರರಾಜ್ಯ ಮಟ್ಟದ ಬೇರೆ ಬೇರೆ ಹಣ್ಣುಗಳ ಮೇಳವು ನಡೆಸಬೇಕಿದೆ. ಇದರಿಂದ ಬೇರೆ ಬೇರೆ ರಾಜ್ಯದ ವಿವಿಧ ತಳಿಗಳ ಹಣ್ಣುಗಳು ಜನರಿಗೆ ಲಭ್ಯವಾಗಲಿದೆ ಎಂದು ಜನರು ಮನವಿ ಮಾಡಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+