ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಆಟೋ ಸ್ಫೋಟ: ಸಿಮ್‌ ಖರೀದಿಸಲು ಶಾರಿಕ್ ಬಳಸಿದ್ದು ಬಳ್ಳಾರಿ ಅಡ್ರೆಸ್‌

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ನವೆಂಬರ್ 22 : ಮಂಗಳೂರಿನಲ್ಲಿ ಶನಿವಾರ ನಡೆದ ಆಟೋದಲ್ಲಿನ ಕುಕ್ಕರ್‌ ಬ್ಲಾಸ್‌ ಪ್ರಕರಣದ ಆರೋಪಿ ಶಾರಿಕ್‌ ತಾನೂ ಉಪಯೋಗಿಸುತ್ತಿದ್ದ ನಂಬರ್‌ಗೆ ಬಳಸಿದ್ದು ಬಳ್ಳಾರಿ ಜಿಲ್ಲೆಯ ಸಂಡೂರು ವಿಳಾಸ ಎಂಬುದು ಬೆಳಕಿಗೆ ಬಂದಿದೆ.

ಸಂಡೂರಿನ ಅರುಣ್ ಕುಮಾರ್ ಗೌಳಿ ಎಂಬಾತನ ಹೆಸರಿನಲ್ಲಿ ಶಾರಿಕ್ ಸಿಮ್‌ ಖರೀದಿಸಿದ್ದಾನೆ. ಅರುಣ್‌ ಎಂಬಿಎ ಮತ್ತು ಎಂಜಿನಿಯರ್‌ ಪದವೀಧರ, ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡಿದ್ದಾನೆ. ಹಾವೇರಿಯಲ್ಲಿ ವಿವಾಹವಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಪ್ರಕರಣದ ಸಂಬಂಧ ಅಧಿಕಾರಿಗಳು ಅರುಣ್ ಕುಮಾರ್‌ ಬಳಿ ಮಾಹಿತಿ ಕಲೆಯಾಕಿದ್ದಾರೆ ಎಂದು ತಿಳಿದುಬಂದಿದೆ.

ಬಳ್ಳಾರಿ; ಬುಡಕಟ್ಟು ಜನರ ಅಭಿವೃದ್ಧಿಗೆ ಬಿಜೆಪಿ ಸಮರ್ಪಿತ- ಜೆಪಿ ನಡ್ಡಾಬಳ್ಳಾರಿ; ಬುಡಕಟ್ಟು ಜನರ ಅಭಿವೃದ್ಧಿಗೆ ಬಿಜೆಪಿ ಸಮರ್ಪಿತ- ಜೆಪಿ ನಡ್ಡಾ

ವಿಚಾರಣೆಯಲ್ಲಿ ಅರುಣ್‌ ಒಂದೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ತಮ್ಮ ದಾಖಲೆಗಳನ್ನು ಕಳೆದುಕೊಂಡಿದ್ದಾಗಿ ಮಾಹಿತಿ ನೀಡಿದ್ದಾರೆ. ಈ ದಾಖಲೆಗಳನ್ನು ದುರಪಯೋಗ ಪಡಿಸಿಕೊಂಡಿರುವ ಆರೋಪಿ ಸಿಮ್‌ ಕಾರ್ಡ್‌ ಖರೀದಿಸಿ ಆ ಸಿಮ್‌ನಿಂದ ತಮ್ಮ ತಂಡದ ಜೊತೆ ಮಾತುಕತೆ ನಡೆಸುತ್ತಿದ್ದರು ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

Mangaluru blast: Suspect Shariq used Ballari address to buy Sim Card

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಪಿ ರಂಜಿತ್‌ ಬಂಡಾರು, "ಪ್ರಕರಣದಲ್ಲಿ ಆರೋಪಿಗಳು ಬಳಸಿದ ಸಿಮ್‌ ಕಾರ್ಡ್‌ ಬಗ್ಗೆ ತನಿಖೆ ನಡೆಸಿದಾಗ ಒಂದು ಕಾರ್ಡ್‌ ಸಂಡೂರಿನ ವಿಳಾಸದ್ದಾಗಿತ್ತು. ಎಡಿಜಿಪಿ ಆದೇಶದ ಮೇರೆಗೆ ನಾವು ಸಂಬಂಧಿತ ವಿಳಾಸಕ್ಕೆ ಸೇರಿದ ವ್ಯಕ್ತಿಯ ವಿಚಾರಣೆ ಮಾಡಿದ್ದೇವೆ. ಈ ಪ್ರಕರಣಕ್ಕೂ ಆತನಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ದೃಢಪಟ್ಟಿದೆ".

"ವರ್ಷದ ಇಂದೆ ಅರುಣ್‌ ಪರ್ಸ್‌ ಕಳೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಬೇರೆ ಯಾರಾದರೂ ಈ ರೀತಿ ದಾಖಲೆ ಕಳೆದುಕೊಂದ್ದರೆ, ಡಿಪಾರ್ಟ್ ಮೆಂಟ್ ಆಪ್ ಟೆಲಿ‌ಕಮ್ಯುನಿಕೇಶನ್ ತಂದಿರುವ TAF COP PORTAL ಎನ್ನುವ ಆ್ಯಪ್ ಅನ್ನು ಬಳಸಿಕೊಳ್ಳಿ. ಇದರಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಿದರೆ ಈ ಆ್ಯಪ್‌ನಲ್ಲಿ ನಿಮ್ಮ ದಾಖಲೆಗಳನ್ನ ಇತರರು ಬಳಕೆ ಮಾಡಿದ್ದರೆ ತಿಳಿಯುತ್ತದೆ" ಎಂದು ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ ವಿಳಾಸದಲ್ಲಿ ಮೈಸೂರಲ್ಲಿ ಮನೆ

ಸದ್ಯಕ್ಕೆ ಕುಕ್ಕರ್‌ ಸ್ಫೋಟದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರಿಕ್ ಮೈಸೂರಲ್ಲಿ ಉಳಿದುಕೊಳ್ಳಲು ಹುಬ್ಬಳ್ಳಿಯ ರೈಲ್ವೆ ಉದ್ಯೋಗಿಯಾಗಿರುವ ಪ್ರೇಮ ರಾಜ್‌ ಎಂಬುವವರ ಆಧಾರ್‌ ಕಾರ್ಡ್‌ ಬಳಸಿಕೊಂಡಿದ್ದ. ಈ ಬಗ್ಗೆ ಪೊಲೀಸ್‌ ವಿಚಾರಣೆ ಮಾಡಿದಾಗ ಅರಣ್‌ರಂತೆಯೇ ಪ್ರೇಮರಾಜ್‌ ಕೂಡ ತನ್ನ ವರ್ಷದ ಹಿಂದ ಆಧಾರ್‌ ಕಾರ್ಡ್‌ ಕಳೆದುಕೊಂಡಿದ್ದರು. ಅದನ್ನ ಶಂಕಿತ ಆರೋಪಿ ಭಯೋತ್ಪಾದಕ ಕೃತ್ಯ ಎಸಗಲು ದುರ್ಬಳಕೆ ಮಾಡಿಕೊಂಡಿದ್ದಾನೆ.

English summary
Shariq, accused of the Managaluru auto rickshaw blast case, had used a document stolen from a Ballari-based techie to buy a Sim Card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X