ಬಳ್ಳಾರಿಯಲ್ಲಿ ಗಣಿಗಾರಿಕೆಗೆ ಕೆಐಒಸಿಎಲ್ ಗೆ ಅನುಮತಿ
ಕುದುರೆಮುಖ ಕಬ್ಬಿಣ ಅದಿರು ಕಂಪನಿನ್ ಲಿಮಿಟೆಡ್(ಕೆಐಒಸಿಎಲ್) ಸಂಸ್ಥೆಯನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ
ಬೆಂಗಳೂರು, ಜೂನ್ 02: ಕುದುರೆಮುಖ ಕಬ್ಬಿಣ ಅದಿರು ಕಂಪನಿನ್ ಲಿಮಿಟೆಡ್(ಕೆಐಒಸಿಎಲ್) ಸಂಸ್ಥೆಯನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಬಳ್ಳಾರಿಯಲ್ಲಿ ಗಣಿಗಾರಿಕೆ ಮಾಡಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ.
ಬಳ್ಳಾರಿಯ ದೇವಾದ್ರಿ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಸಿಕ್ಕಿದೆ.ಡಿಸೆಂಬರ್ 2005ರ ನಂತರ ಮತ್ತೊಮ್ಮೆ ಗಣಿಗಾರಿಕೆಯತ್ತ ಕೆಐಒಸಿಎಲ್ ಮುಖ ಮಾಡಿದೆ.[ಸಂಕ್ರಾಂತಿ ನಂತರ ಮತ್ತೆ ಬಳ್ಳಾರಿಯಲ್ಲಿ ಗಾಲಿ ರೆಡ್ಡಿ ಪ್ರತ್ಯಕ್ಷ!]

ಪ್ರಸ್ತುತ ಮಂಗಳೂರು ಘಟಕದಿಂದ ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ 3.5 ಮಿಲಿಯನ್ ಟನ್ ಪ್ರತಿ ಕಬ್ಬಿಣ ಅದಿರು ಪೆಲ್ಲೆಟ್ ಗಳನ್ನು ಕೆಐಒಸಿಎಲ್ ಉತ್ಪಾದಿಸುತ್ತಿದೆ. 2016-17ರಲ್ಲಿ ಶೇ 353ರಷ್ಟು ಪ್ರಗತಿ ಕಂಡು 929.36ರಷ್ಟು ಆದಾಯ ಗಳಿಸಿದೆ. 47.93ಕೋಟಿ ರು ಲಾಭ ಪಡೆದುಕೊಂಡಿದೆ ಎಂದು ಕೆಐಒಸಿಎಲ್ ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಮಲಾಯ್ ಚಟರ್ಜಿ ಹೇಳಿದರು.












Click it and Unblock the Notifications