ಸೈಬರ್ ಕ್ರೈಂಗಳು ಹೆಚ್ಚಳ: ಪೊಲೀಸರು ಅಲರ್ಟ್, ಸಹಾಯವಾಣಿ, ವೆಬ್‌ಸೈಟ್ ಉನ್ನತೀಕರಣ
ಬಳ್ಳಾರಿ, ಏಪ್ರಿಲ್ 23: ತಂತ್ರಜ್ಞಾನಗಳು ಮುಂದುವರೆದಂತೆ ಸೈಬರ್ ಕ್ರೈಂಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಿವಿಧ ರೀತಿಯಲ್ಲಿ ಸೈಬರ್ ವಂಚನೆಗಳನ್ನು ಮಾಡುವ ಮೂಲಕ ಜನರ ಖಾತೆಗೆ ಕನ್ನ ಹಾಕಲಾಗುತ್ತಿದೆ. ಈ ಕುರಿತು ಜಾಗೃತಿ ಮೂಡಿಸಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಹೊಸ ಹೊಸ ಮಾದರಿಯಲ್ಲಿ ವಂಚನೆ ಮಾಡುವುದು ನಡೆಯುತ್ತಲ ಇದೆ. ಕರ್ನಾಟಕ ರಾಜ್ಯ ಪೊಲೀಸರು ಸೈಬರ್ ಅಪರಾಧಗಳ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದಕ್ಕಾಗಿ ವೆಬ್‌ಸೈಟ್ ಮತ್ತು ಸಹಾಯವಾಣಿಯನ್ನು ಸಹ ಉನ್ನತೀಕರಣ ಮಾಡಲಾಗಿದೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನೀರಿಕ್ಷಕ ಅಲೋಕ್ ಮೋಹನ್, "ಪ್ರಸ್ತುತ ದೇಶದಲ್ಲಿ ಹೆಚ್ಚುತ್ತಿರುವ ಆನ್‍ಲೈನ್ ಹಣಕಾಸು ವಂಚನೆಗಳನ್ನು ತಡೆಯಲು ರಾಜ್ಯದಲ್ಲಿ ಸೈಬರ್ ಅಪರಾಧ ಸಹಾಯವಾಣಿ-1930 ಜೊತೆಗೆ ವೆಬ್ ಬಾಟ್ ಉನ್ನತೀಕರಣ ಮಾಡಲಾಗಿದೆ" ಎಂದು ಹೇಳಿದರು. ಉನ್ನತೀಕರಿಸಲಾದ ಸೈಬರ್ ಅಪರಾಧ ಸಹಾಯವಾಣಿ-1930 ವೆಬ್ ಬಾಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಕರ್ನಾಟಕ ರಾಜ್ಯದಲ್ಲಿ 1930 ಸಹಾಯವಾಣಿಯಲ್ಲಿ ಸ್ವೀಕರಿಸಿದ ಕರೆಗಳ ಸಂಖ್ಯೆ 2022 ರಲ್ಲಿ 1.30 ಲಕ್ಷ ಇದ್ದು, ನಂತರ 2024 ರಲ್ಲಿ 8.26 ಲಕ್ಷಕ್ಕೆ ಮತ್ತು 2025ರ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) 4.34 ಲಕ್ಷಕ್ಕೆ ಏರಿಕೆಯಾಗಿದೆ" ಎಂದರು.

"ಪ್ರಸ್ತುತ ರಾಜ್ಯದಲ್ಲಿ ಸಾರ್ವಜನಿಕರು ಪ್ರತಿನಿತ್ಯ ಆನ್‍ಲೈನ್ ಹಣಕಾಸು ವಂಚನೆಗಳಿಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಕ್ಷಣ ಸಾರ್ವಜನಿಕರು ದೂರು ದಾಖಲಿಸಲು ಅನುವಾಗುವಂತೆ ಸೈಬರ್ ಅಪರಾಧ ಸಹಾಯವಾಣಿ-1930 ಹಾಗೂ ವೆಬ್ ಬಾಟ್‍ನ್ನು ಉನ್ನತೀಕರಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ತುರ್ತು ಸ್ಪಂದನಾ ವ್ಯವಸ್ಥೆಯ ಸಾರ್ವಜನಿಕ ಸುರಕ್ಷತಾ ಪ್ರತ್ಯುತ್ತರ ಕೇಂದ್ರವನ್ನು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಸಂಪರ್ಕ, ಸಾರಿಗೆ ಮತ್ತು ಆಧುನೀಕರಣರವರ ಕಛೇರಿ ಆವರಣದಲ್ಲಿ ಸ್ಥಾಪಿಸಲಾಗಿದ್ದು, ಸದರಿ 1930 ಸಹಾಯವಾಣಿ ಕೇಂದ್ರದಲ್ಲಿ ಆನ್‍ಲೈನ್ ಹಣಕಾಸು ವಂಚನೆ ಅಪರಾಧಗಳಿಗೆ ಸಂಬಂಧಿಸಿದ ದೂರುಗಳನ್ನು ಎನ್‌ಸಿಆರ್‌ಪಿ ಮೂಲಕ ದಾಖಲಿಸಲಾಗುತ್ತಿದೆ" ಎಂದು ಹೇಳಿದರು.
"ಈ ರೀತಿಯಲ್ಲಿ ದೂರುದಾರರ ಕರೆಗಳ ಸಂಖ್ಯೆಯು ಏರಿಕೆಯಾಗುತ್ತಿರುವುದರಿಂದ, ಹೆಚ್ಚು ಸಂಖ್ಯೆಯ ಕರೆಗಳು ಕಡಿತಗೊಂಡಿರುವುದು ಕಂಡುಬಂದಿರುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕರೆಗಳು ತಮ್ಮ ದೂರಿನ ಸ್ಥಿತಿ ವಿಚಾರಣೆ ಮತ್ತು ಸೈಬರ್ ಅಪರಾಧದ ಕುಂದುಕೊರತೆಗಳಿಗೆ ಸಂಬಂಧಿಸಿದ ಕರೆಗಳಾಗಿದ್ದು, ಎಲ್ಲಾ ಕರೆ ಸ್ವೀಕರಿಸುವ ಸಿಬ್ಬಂದಿಗಳು ಕಾರ್ಯನಿರತರಾಗಿರುತ್ತಿದ್ದ ಕಾರಣ 1930-ಸಹಾಯವಾಣಿಗೆ ಹೊಸ ದೂರುಗಳನ್ನು ದಾಖಲಿಸುವವರು ಶೀಘ್ರವಾಗಿ ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ" ಎಂದು ತಿಳಿಸಿದರು.
"ಇದರಿಂದಾಗಿ ದೂರುದಾರರಿಗೆ 1930-ಸಹಾಯವಾಣಿಯ ಸಂಪರ್ಕ ಸಿಗದೆ ಗೋಲ್ಡನ್ ಅವರ್ ನಲ್ಲಿ ದೂರು ದಾಖಲಿಸಲು ಕಷ್ಟಕರವಾಗುತ್ತಿತ್ತು. ಈ ದೂರುದಾರರಲ್ಲಿ ಹಿರಿಯ ನಾಗರೀಕರು ಸಹ ಕರೆ ಮಾಡುತ್ತಿದ್ದು 1930 ಸಹಾಯವಾಣಿಗೆ ಕರೆ ಮಾಡಿದ ಸಮಯದಲ್ಲಿ ಸಂಪರ್ಕ ಸಿಗದೇ ಆಸಹಾಯಕರಾಗಿದ್ದರು. ಈ ಸಮಸ್ಯೆಯಿಂದ ಹಣಕಾಸು ವಂಚನೆಗೊಳಗಾದ ದೂರುದಾರರ ಹಣವನ್ನು ಗೋಲ್ಡನ್ ಅವರ್ ನಲ್ಲಿ ಸಂಬಂಧಿಸಿದ ಬ್ಯಾಂಕ್‍ಗಳಲ್ಲಿ ತಡೆಹಿಡಿಯುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿತ್ತು. ಇದರಿಂದಾಗಿ ಸದರಿ ಹಣ ವಂಚಕರ ಖಾತೆಗೆ ವರ್ಗಾವಣೆಯಾಗಲು ಸುಲಭವಾಗುತ್ತಿತ್ತು" ಎಂದರು.
"ಈ ಎಲ್ಲಾ ಸಮಸ್ಯೆಗಳನ್ನು ಮನಗಂಡ ಇಲಾಖೆಯು, ಸಮಸ್ಯೆಯನ್ನು ಪರಿಹರಿಸಲು ದೂರುದಾರರ ಕರೆಗಳನ್ನು ಹಣಕಾಸು ಸಂಬಂಧಿತ ದೂರುಗಳು, ಹಣಕಾಸೇತರ ಸಂಬಂಧಿತ ದೂರುಗಳು (ವಾಟ್ಸಪ್, ಫೇಸ್‌ಬುಕ್ ಖಾತೆಯ ಹ್ಯಾಕ್‍ಗಳು), ದೂರಿನ ಸ್ಥಿತಿ ವಿಚಾರಣೆಗಳು ಮತ್ತು ಸೈಬರ್ ಅಪರಾಧ ಸಂಬಂಧಿತ ಕುಂದುಕೊರತೆ ಕರೆಗಳಾಗಿ ಐವಿಆರ್ ವ್ಯವಸ್ಥೆಯ ಮೂಲಕ ವರ್ಗೀಕರಿಸಲಾಗಿದೆ" ಎಂದು ವಿವರಣೆ ನೀಡಿದರು.
"ಇದರಿಂದಾಗಿ ಹೊಸ ದೂರನ್ನು ಸಕಾಲದಲ್ಲಿ ದಾಖಲಿಸುವವರಿಗೆ ಆದ್ಯತೆ ನೀಡಲಾಗಿದೆ ಮತ್ತು ವಾಯ್ಸ್ ಗೈಡೆಡ್ ವೆಬ್ ಬಾಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ದೂರುದಾರರು ವೆಬ್‍ಬಾಟ್ ಮೂಲಕ ಮಾಹಿತಿ ಸಲ್ಲಿಸಲು ಇಚ್ಚಿಸಿದ್ದಲ್ಲಿ ಎಸ್‍ಎಂಎಸ್ ಮೂಲಕ ವೆಬ್‍ಬಾಟ್ ಲಿಂಕ್ ಅನ್ನು ಕಳುಹಿಸಲಾಗುವುದು. ನಂತರ ಈ ಸಹಾಯವಾಣಿಯ ಸಿಬ್ಬಂದಿಯ ಮೂಲಕ ಸದರಿ ಮಾಹಿತಿಯನ್ನು ಎನ್.ಸಿ.ಆರ್.ಪಿ ಯಲ್ಲಿ ದಾಖಲಿಸಲಾಗುವುದು. ಇದು ಸಾರ್ವಜನಿಕರಿಗೆ 1930 ಸಹಾಯವಾಣಿಯಲ್ಲಿ ದೂರು ಸಲ್ಲಿಸಲು ಹಾಗೂ ಕಾಲ್ ಡ್ರಾಪ್‍ಗಳನ್ನು ಸಹ ತಡೆಯಲು ಸಹಾಯವಾಗುತ್ತದೆ. ಸಹಾಯವಾಣಿಯ ಎಲ್ಲಾ ಸಿಬ್ಬಂದಿಗಳು ಕಾರ್ಯನಿರತವಾಗಿದ್ದ ಸಮಯದಲ್ಲಿ ದೂರುದಾರರು ಸ್ವಯಿಚ್ಚೆಯಿಂದ ಕರೆ ಕಡಿತಗೊಳಿಸಿದ ಸಮಯದಲ್ಲೂ ಸಹ ಎಸ್‍ಎಂಎಸ್ ಮುಖಾಂತರ ಈ ವೆಬ್‍ಬಾಟ್ ಲಿಂಕ್ ಅನ್ನು ಸದರಿ ದೂರುದಾರರಿಗೆ ಕಳುಹಿಸಲಾಗುವುದು" ಎಂದರು.
ಹೊಸ ಸೌಲಭ್ಯಗಳ ವಿವರ
* 1930 ಸಹಾಯವಾಣಿಯಲ್ಲಿ ಈ ಹಿಂದಿನ ದೂರವಾಣಿ ಮೂಲಸೌಕರ್ಯವನ್ನು ಬದಲಾಯಿಸಿ SIP ಲೈನ್‍ಗಳಿಗೆ ಉನ್ನತೀಕರಿಸಲಾಗಿದೆ. ಇದು ಹೆಚ್ಚುತ್ತಿರುವ ದೂರು ಕರೆಗಳ ಪ್ರಮಾಣವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
* ಭಾಷಾ ಆಯ್ಕೆ IVR (Interactive Voice Response) ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಈ ವ್ಯವಸ್ಥೆಯು ವಂಚನೆಗೊಳಗಾದ ದೂರುದಾರರ ಸಂವಹನಕ್ಕಾಗಿ ಕನ್ನಡ, ಇಂಗ್ಲೀಷ್ ಅಥವಾ ಹಿಂದಿ ಭಾಷೆಯನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.
* ವಂಚನೆಗೊಳಗಾದ ದೂರುದಾರರು 1930 ಸಹಾಯವಾಣಿಗೆ ಕರೆ ಮಾಡಿದಾಗ, ಕರೆ ಸ್ವೀಕರಿಸುವ ಎಲ್ಲಾ ಸಿಬ್ಬಂದಿಗಳು ಕಾರ್ಯನಿರತರಾಗಿದ್ದರೆ, ಈ ಸಮಯದಲ್ಲಿ ಐವಿಆರ್ ಮೂಲಕ ದೂರುದಾರರ Queue Position ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ.
* ಹಣಕಾಸೇತರ ಸಂಬಂಧಿತ ದೂರುಗಳಲ್ಲಿ (ವಾಟ್ಸಪ್, ಫೇಸ್‌ಬುಕ್ ಖಾತೆಯ ಹ್ಯಾಕ್‍ಗಳು ಅಥವಾ Impersonation) ಸಮಸ್ಯೆಯನ್ನು ಬಗೆಹರಿಸುವ ಬಗೆಗಿನ ಮಾಹಿತಿಯ ಲಿಂಕ್ ಅನ್ನು ಎಸ್‍ಎಂಎಸ್ ಮುಖಾಂತರ ದೂರುದಾರರಿಗೆ ನೀಡಲಾಗುವುದು.
* ವಂಚನೆಗೊಳಗಾದವರು ಮತ್ತು ವಂಚಕರ ಬಗೆಗಿನ ಮಾಹಿತಿಯನ್ನು ಸಹ ಸಂಗ್ರಹಿಸಿ, ಶೇಖರಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಮಾಹಿತಿಯಿಂದ ತನಿಖಾಧಿಕಾರಿಗಳು ಆರೋಪಿಯ ಬಗ್ಗೆ ಹಾಗೂ ವಂಚನೆಗಳ ಬಗ್ಗೆ ವಿಶ್ಲೇಷಿತ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ.
* ಸೈಬರ್ ಕ್ರೈಂ ಸಹಾಯವಾಣಿ-1930 ವನ್ನು ಮಾನ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಎಸ್. ಮುರುಗನ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಸುಧಾರಿತ ಸಾಫ್ಟ್‍ವೇರ್ ಹಾಗೂ ಮೂಲ ಸೌಕರ್ಯದೊಂದಿಗೆ ಅಂದಾಜು ವೆಚ್ಚ 01 ಕೋಟಿ ರೂಗಳಲ್ಲಿ ಉನ್ನತೀಕರಿಸಲಾಗಿದ್ದು, ಇದರಿಂದ ಹಣಕಾಸು ವಂಚನೆಗೊಳಗಾದ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುವುದಾಗಿದೆ.
* 1930 ಸಹಾಯವಾಣಿಯು ಸೈಬರ್ ಅಪರಾಧಗಳಿಗೆ ಒಳಗಾದ ನಾಗರೀಕರಿಗೆ ದಿನದ 24 ಗಂಟೆಗಳ ಕಾಲವೂ ಉತ್ತಮ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
-
ಮಾರ್ಚ್ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
ಮಂಗಳೂರಿಗೆ ಬರಲಿದೆ 26,000 ಟನ್ LPG ತೈಲ ಹೊತ್ತ 'ಶಿವಾಲಿಕ್' ಹಡಗು -
ಮಾರ್ಚ್ 17ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Ugadi 2026: ಹಬ್ಬದ ಕಳೆ ಹೆಚ್ಚಿಸುವ ಸುಂದರ ರಂಗೋಲಿಗಳು; ಸರಳ, ಚುಕ್ಕಿ ಹಾಗೂ ಬಣ್ಣದ ರಂಗೋಲಿ ಐಡಿಯಾ ಇಲ್ಲಿದೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್












Click it and Unblock the Notifications