ಬಸವರಾಜ ಬೊಮ್ಮಾಯಿ ಭ್ರಷ್ಟ ಮುಖ್ಯಮಂತ್ರಿ ಅಂತಾ ಹೇಳಿದ್ದೆ ಅಷ್ಟೇ, ಆದ್ರೆ ಬಿಜೆಪಿ ನನ್ನ ಈ ಹೇಳೆಕೆಯನ್ನೇ ತಿರುಚಿದೆ: ಸಿದ್ದರಾಮಯ್ಯ
ಬಳ್ಳಾರಿ, ಏಪ್ರಿಲ್, 27: ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಭ್ರಷ್ಟ ಮುಖ್ಯಮಂತ್ರಿ ಎಂದು ಹೇಳಿದ್ದೆ. ನನ್ನ ಇದೇ ಹೇಳಿಕೆಯನ್ನು ತಿರುಚಿ ಜನರಿಗೆ ಪ್ರಚೋದಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಡೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಸಂಡೂರು ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶವದಲ್ಲಿ ಭಾಗವಹಿಸಿ ಮಾತನಾಡಿದರು. ವೀರಶೈವ ಲಿಂಗಾಯತರಲ್ಲಿ ನಿಜಲಿಂಗಪ್ಪ, ಎಸ್.ಆರ್. ಕಂಠಿ, ವಿರೇಂದ್ರ ಪಾಟೀಲ್, ಎಸ್.ಆರ್. ಬೊಮ್ಮಾಯಿ, ಜೆ.ಹೆಚ್.ಪಾಟೀಲ್ ಪ್ರಮಾಣಿಕ ಮುಖ್ಯಮಂತ್ರಿಗಳಾಗಿದ್ದರು. ಆದರೆ ನಾನು ಬಸವರಾಜ ಬೊಮ್ಮಾಯಿ ಮಾತ್ರ ಕರ್ನಾಟಕಕ್ಕೆ ಕಳಂಕ ತಂದ ಮುಖ್ಯಮಂತ್ರಿ ಎಂದು ಹೇಳಿದ್ದೆ. ನನ್ನ ಇದೇ ಹೇಳಿಕೆಯನ್ನು ತಿರುಚಿ ಜನರನ್ನು ಪ್ರಚೋದಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.

ನಾನು ಎಲ್ಲಾ ಮನುಷ್ಯರನ್ನು ಪ್ರೀತಿಸುವ ಗೌರವಿಸುವ ವ್ಯಕ್ತಿ, ಕೆಟ್ಟವರನ್ನು ಕೆಟ್ಟವರು, ಒಳ್ಳೆಯವರನ್ನು ಒಳ್ಳೆಯವರು ಅಂತಾ ಹೇಳಬೇಕು ಎಂದರು. ಅಲ್ಲದೆ ನಾನು ಹಣಕಾಸು ಮಂತ್ರಿಯಾಗಿ 13 ಬಜೆಟ್ ಮಂಡನೆ ಮಾಡಿದ್ದೇನೆ. ಈಡೀ ದೇಶದಲ್ಲಿ 7 ಕೆ.ಜಿ. ಅಕ್ಕಿ ಕೊಟ್ಟಿದ್ದು ಸಿದ್ದರಾಮಯ್ಯ ಸರ್ಕಾರ. ಆದರೆ ಬಸವರಾಜ ಬೊಮ್ಮಾಯಿ, ಅಮಿತ್ ಶಾ ಅಕ್ಕಿ ಕೇಂದ್ರ ಸರ್ಕಾರದ್ದು ಅಂತಾ ಹೇಳುತ್ತಾರೆ ಎಂದು ವಾಗ್ದಾಳಿ ಮಾಡಿದರು.
ಹಾಗಾದರೆ ಗುಜರಾತ್ ಸೇರಿ ಬಿಜೆಪಿ ಸರ್ಕಾರದ ರಾಜ್ಯಗಳಲ್ಲಿ ಯಾಕೆ ಉಚಿತ ಅಕ್ಕಿ ಕೊಡುತ್ತಿಲ್ಲ? ಬಿಜೆಪಿ ಯಾವತ್ತೂ ಬಡವರ ಪರವಾಗಿಲ್ಲ. ಬಿಜೆಪಿ ಸರ್ಕಾರ 40- 50 ಪರ್ಸೆಂಟ್ ಸರ್ಕಾರವಾಗಿದೆ. ಕಳಂತ ಇಲ್ಲದೇ ಸರ್ಕಾರ ನಡೆಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಮಾತ್ರ. ನಾನು ಗುತ್ತಿಗೆದಾರರಿಗೆ ಕೇಳುತ್ತೇನೆ ನನ್ನ ಅಧಿಕಾರ ಅವಧಿಯಲ್ಲಿ ಎಲ್‌ಒಸಿ ನೀಡಲು ಐದು ಪೈಸೆ ಪಡೆದಿದ್ದರೆ ರಾಜಕೀಯ ನಿವೃತ್ತಿ ಆಗುವೆ ಎಂದರು.
ಅಲ್ಲದೆ ಬಸವರಾಜ ಬೊಮ್ಮಾಯಿ ನಿಮ್ಮ ಸರ್ಕಾರ ಅಲಿಬಾಬಾ ಚಾಲಿಷ್ ಚೋರ್, ಇಂತಹ ಸರ್ಕಾರ ಮತ್ತೆ ಬರಬೇಕಾ? ಬಿಜೆಪಿ ಸುಳ್ಳಿನ ಫ್ಯಾಕ್ಟರಿ. ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಧಕ್ಕೆ ಬಂದಿದೆ ಎಂದರು ಎಂದು ದೂರಿದರು.
ಈ ಸಂದರ್ಭದಲ್ಲಿ ಶಾಸಕ ತುಕರಾಂ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಶೈಲಜಾನಾಥ್, ಅಲ್ಲಂ ವೀರಭದ್ರಪ್ಪ, ಕಾಂಗ್ರೆಸ್ ಬಳ್ಳಾರಿ ಗ್ರಾಮೀಣ ಅಧ್ಯಕ್ಷ ಶಿವಯೋಗಿ, ಮುಂಡ್ರಗಿ ನಾಗರಾಜ್ ಸೇರಿದಂತೆ ಮತ್ತತರರು ಇದ್ದರು.












Click it and Unblock the Notifications