ಗಾಲಿ ಜನಾರ್ದನ ರೆಡ್ಡಿಗಿಂತ ಪತ್ನಿ ಲಕ್ಷ್ಮೀ ಅರುಣಾ ಶ್ರೀಮಂತೆ; ದಂಪತಿಯ ಆಸ್ತಿ ವಿವರ ಇಲ್ಲಿದೆ

ಬಳ್ಳಾರಿ, ಏಪ್ರಿಲ್. 17: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾತಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮೀ ಅರುಣಾ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ಸಲ್ಲಿಸಿರುವ ಅಫಿಡೆವಿಟ್ ಪ್ರಕಾರ ಇವರ ಹೆಸರಿನಲ್ಲಿ ಯಾವುದೇ ಕಾರಿಲ್ಲ. ಹೌದು, ಲಕ್ಷ್ಮೀದೇವಿ ಕಾಲು ಮುರಿದುಕೊಂಡು ಇವರ ಮನೆಯಲ್ಲಿದ್ದರೂ ದಂಪತಿ ಹೆಸರಿನಲ್ಲಿ ಯಾವುದೇ ಕಾರಿಲ್ಲವಂತೆ.

ಬಳ್ಳಾರಿ ನಗರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ ಲಕ್ಷ್ಮೀ ಅರುಣಾ, ತಮ್ಮ ಪತಿ ಮತ್ತು ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ನಾಮಪತ್ರ ಸಲ್ಲಿಕೆ ವೇಳೆ ಬರದಿದ್ದಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು ಸಲ್ಲಿಸಿರುವ ಮಾಹಿತಿ ಪ್ರಕಾರ, ಗಣಿ ಉದ್ಯಮಿ ಜನಾರ್ದನ ರೆಡ್ಡಿ ದಂಪತಿಯ ಹೆಸರಿನಲ್ಲಿ ಹೆಲಿಕಾಪ್ಟರ್ ಇದ್ದರೂ ಕೂಡ ತಮ್ಮ ಹೆಸರಿನಲ್ಲಿ ಯಾವುದೇ ವಾಹನ ಖರೀದಿಸಿಲ್ಲ.

Janardhana Reddy wife Lakshmi Aruna files nomination, Check here her assets details

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗಿಂತ ಅವರ ಪತ್ನಿ ಲಕ್ಷ್ಮೀ ಅರುಣಾ ಶ್ರೀಮಂತೆ. ಲಕ್ಷ್ಮೀ ಅರುಣಾ ಅವರ ಚರಾಸ್ತಿ ಮೌಲ್ಯ 96.23 ಕೋಟಿ ರೂಪಾಯಿಗಳು. ಜನಾರ್ದನ ರೆಡ್ಡಿ 29.20 ಕೋಟಿ ರೂ.ಗಳ ಮೌಲ್ಯದ ಚರಾಸ್ತಿ, ಮಗ ಕಿರೀಟಿ ರೆಡ್ಡಿ 7.24 ಕೋಟಿ ರೂ.ಗಳ ಚರಾಸ್ತಿ ಹೊಂದಿದ್ದಾರೆ. ಅವರು 1.76 ಲಕ್ಷ ರೂ. ನಗದು ಹೊಂದಿದ್ದರೆ, ಅವರ ಪತಿ 1.33 ಲಕ್ಷ ರೂ. ಹೊಂದಿದ್ದಾರೆ.

ಇನ್ನು, ಲಕ್ಷ್ಮೀ ಅರುಣಾ 104.38 ಕೋಟಿ ರೂ.ಗಳ ಮೌಲ್ಯದ ಸ್ಥಿರಾಸ್ತಿ, ಜನಾರ್ದನ ರೆಡ್ಡಿ ಹೆಸರಿನಲ್ಲಿ 8 ಕೋಟಿ ರೂ.ಗಳ ಮೌಲ್ಯದ ಸ್ಥಿರಾಸ್ತಿ ಮತ್ತು ಮಗ ಕಿರೀಟಿ ರೆಡ್ಡಿ 1.24 ಕೋಟಿ ರೂ.ಗಳ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಅಫಿಡವಿಟ್‍ನಲ್ಲಿ ತಿಳಿಸಲಾಗಿದೆ. ಆಸ್ತಿಯಲ್ಲೂ ಪತಿಗಿಂತ ಪತ್ನಿಯೇ ಹೆಚ್ಚು ಹೊಂದಿದ್ದು, ವಿವಿಧ ಕಂಪನಿಗಳಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದಾರೆ.

ಲಕ್ಷ್ಮೀ ಅರುಣಾ ಅವರು ಓಬಳಾಪುರಂ ಮೈನಿಂಗ್ ಕಂಪನಿಯಲ್ಲಿ 29.55 ಕೋಟಿ ರೂ.ಗಳನ್ನು, ಬ್ರಾಹ್ಮಣಿ ಇಂಡಸ್ಟ್ರೀಸ್‍ನಲ್ಲಿ 25.08 ಕೋಟಿ ರೂ., ಮುದಿತಾ ಪ್ರಾಪರ್ಟಿಸ್‍ನಲ್ಲಿ 18.27 ಕೋಟಿ ರೂ., ಟುಲ್ಲರ್ ರಿವಿಟ್ಸ್ ಕಂಪನಿಯಲ್ಲಿ 1 ಕೋಟಿ ರೂ.ಗಳು, ಕಿರೀಟಿ ಏವಿಯೇಷನ್ ಪ್ರೈ.ಲಿ.ನಲ್ಲಿ 1 ಕೋಟಿ ರೂ., ಓಡಿಸ್ಸಿ ಕಾರ್ಪೋರೇಷನ್ ಲಿಮಿಟೆಡ್‍ನಲ್ಲಿ 3.42 ಕೋಟಿ ರೂ.ಗಳು, ಆದಿತ್ಯ ಬಿರ್ಲಾ ವಿಮಾ ಕಂಪನಿಯಲ್ಲಿ 44 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ.

Janardhana Reddy wife Lakshmi Aruna files nomination, Check here her assets details

ಚಿನ್ನಾಭರಣದಲ್ಲೂ ಪತಿಗಿಂತ ಪತ್ನಿ ಲಕ್ಷ್ಮೀ ಅರುಣಾ ಮೇಲುಗೈ ಸಾಧಿಸಿದ್ದಾರೆ. ಲಕ್ಷ್ಮೀ ಅರುಣಾ ಅವರು 77.20 ಲಕ್ಷ ರೂ. ಮೌಲ್ಯದ 2,58,237 ಗ್ರಾಂ ಬೆಳ್ಳಿ ಆಭರಣ, 16. 44 ಕೋಟಿ ರೂ. ಮೌಲ್ಯದ 38,486 ಗ್ರಾಂ ಚಿನ್ನ ಹಾಗೂ ಡೈಮಂಡ್ ಆಭರಣಗಳನ್ನು ಹೊಂದಿದ್ದಾರೆ. ಜನಾರ್ದನ ರೆಡ್ಡಿ ಅವರು 32.18 ಲಕ್ಷ ರೂ. ಮೌಲ್ಯದ 1,78,741 ಗ್ರಾಂ ಬೆಳ್ಳಿ ಆಭರಣ, 7.93 ಕೋಟಿ ರೂ. ಮೌಲ್ಯದ 46,258 ಗ್ರಾಂ ಚಿನ್ನಾಭರಣ ಹಾಗೂ ಡೈಮಂಡ್ ಹೊಂದಿದ್ದಾರೆ.

ಲಕ್ಷ್ಮೀ ಅರುಣಾ ಅವರಂತೆಯೇ ಜನಾರ್ದನ ರೆಡ್ಡಿ ಓಬಳಾಪುರಂ ಮೈನಿಂಗ್ ಕಂಪನಿಯಲ್ಲಿ 19.58 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಲಕ್ಷ್ಮೀ ಅರುಣಾ ಆಕ್ಸಿಜನ್ ಕೋ.ಪ್ರೈ.ಲಿ.ನಲ್ಲಿ 2.50 ಲಕ್ಷ ರೂ.ಗಳು, ಕಿರೀಟಿ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ನಲ್ಲಿ 2.50 ಲಕ್ಷ ರೂ.ಗಳು, ಕಿರೀಟಿ ಏವಿಯೇಷನ್ ಪ್ರೈ.ಲಿ.ನಲ್ಲಿ ಒಂದು ಕೋಟಿ ರೂ. ವ್ಯಯಿಸಿದ್ದಾರೆ.

*ಸಾಲದ ವಿವರ*

ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಚರಾಸ್ತಿ ಮೇಲೆ 96.23 ಕೋಟಿ ರೂ, ಮತ್ತು ಸ್ಥಿರಾಸ್ತಿ ಮೇಲೆ 74.89 ಕೋಟಿ ರೂ. ಸಾಲ ಹೊಂದಿದ್ದಾರೆ. ಜನಾರ್ದನ ರೆಡ್ಡಿ ಒಟ್ಟು 34.61 ಕೋಟಿ ರೂ., ಮಗ ಕಿರೀಟಿ ರೆಡ್ಡಿ 7.66 ಕೋಟಿ ರೂ.ಗಳ ಸಾಲ ಹೊಂದಿದ್ದಾರೆ.

ಇನ್ನು, ನಾಮಪತ್ರ ಸಲ್ಲಿಕೆ ವೇಳೆ ಹಾಜರಾದ ಸಾವಿರಾರು ಮಂದಿಗೆ ಲಕ್ಷ್ಮೀ ಅರುಣಾ ಧನ್ಯವಾದ ತಿಳಿಸಿದ್ದಾರೆ. "ಬಳ್ಳಾರಿ‌ ನಗರ ವಿಧಾನಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಇಂದು ನಾನು ನಾಮಪತ್ರ ಸಲ್ಲಿಸಿದೆ. ಬಳ್ಳಾರಿಯಲ್ಲಿ ನೆರೆದ ಸಹಸ್ರ ಸಹಸ್ರ ಕಾರ್ಯಕರ್ತರು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನಾಮಪತ್ರ ಸಲ್ಲಿಸುವ ವೇಳೆ ನನ್ನ ಪತಿ ಶ್ರೀ ಜಿ ಜನಾರ್ದನ ರೆಡ್ಡಿಯವರನ್ನು ನೆನೆದಾಗ ಕಂಬನಿ ಕಣ್ತುಂಬಿ ಬಂತು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಪ್ರತಿಯೊಬ್ಬರಿಗೂ ತಮ್ಮ ಹೆಸರು ಹೆಸರಿನಲ್ಲಿ ಸನ್ಮಾನ ಜಿ ಜನಾರ್ದನ ರೆಡ್ಡಿಯವರ ಹಾಗೂ ನನ್ನ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ" ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+